More

    ಶಾಲಾ ಮಕ್ಕಳಿಗೆ ಅಮೃತಭೋಜನ

    ವಿಜಯವಾಣಿ ಸುದ್ದಿಜಾಲ ಗದಗ
    ವಿದ್ಯಾಥಿರ್ಗಳು ನಮ್ಮ ದೇಶದ ಭವಿಷ್ಯ. ಮಕ್ಕಳ ಸಮಗ್ರ ಅಭಿವೃದ್ಧಿಗೆ ಪೂರಕ ವಾತಾವರಣ ನಿರ್ಮಾಣ ಮಾಡಲು ನಾವೆಲ್ಲ ಮುಂದಾಗಬೇಕು ಎಂದು ಸುವರ್ಣಾ ಮದರಿಮಠ ಹೇಳಿದರು.
    ನಗರದ ಗಂಗಾ ಪೂರಪೇಟೆಯ ಸರ್ಕಾರಿ ಪ್ರಾಥಮಿಕ ಶಾಲೆ ನಂ. 14ರಲ್ಲಿ ಇತ್ತೀಚೆಗೆ ಜರುಗಿದ ಉಚಿತ ರಕ್ತದ ಗುಂಪು ತಪಾಸಣೆ, ಕಾರ್ಡ ವಿತರಣೆ, ವಿದ್ಯಾಥಿರ್ಗಳಿಗೆ ಅಮೃತ ಭೋಜನ, ವಿಶೇಷ ಚೇತನ ಮಕ್ಕಳಿಗೆ ಹೊದಿಕೆಗಳ ವಿತರಣಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
    ಮಕ್ಕಳು ಉತ್ತಮ ವ್ಯಕ್ತಿತ್ವ ನಿರ್ಮಾಣದತ್ತ ತಮ್ಮ ಗಮನವನ್ನು ಕೇಂದ್ರೀಕರಿಸಿ ಉಜ್ವಲ ಭವಿಷ್ಯ ರೂಪಿಸಿಕೊಳ್ಳಬೇಕು. ವಿದ್ಯಾಥಿರ್ ಜೀವನವು ಸುಮಧುರವಾಗಿರಬೇಕು ಎಂದರು.
    ವಿಶೇಷ ಚೇತನ ಮಕ್ಕಳಿಗೆ ಹೊದಿಕೆಗಳನ್ನು ವಿತರಿಸಿ ಮಾತನಾಡಿದ ಜ್ಯೋತಿ ದಾನಪ್ಪಗೌಡರ, ವಿಶೇಷ ಚೇತನ ಮಕ್ಕಳು ಮುಖ್ಯವಾಹಿನಿಗೆ ಬರುವಲ್ಲಿ ನಾವೆಲ್ಲರೂ ಪಾಲಕರೊಂದಿಗೆ ಕೈ ಜೋಡಿಸಬೇಕು ಎಂದರು.
    ಡಾ. ದತ್ತಾತ್ರೇಯ ವೈಕುಂಠೆ ಅವರು 500 ಜನರ ರಕ್ತತಪಾಸಣೆ ನಡೆಸಿದರು. ಮುತ್ತಣ್ಣ ಪಡಗದ, ಜಿ. ಎಂ. ಜಗದೀಶ, ಶ್ಯಾಮ್​ ಲಾಂಡೆ, ವಿ. ಟಿ. ದಾಸರಿ, ಕೆ. ಎಸ್​. ಬೇಲೇರಿ, ಬಸವರಾಜ ಮೆಣಸಿನಕಾಯಿ, ಪ್ರಕಾಶ ದೊಡ್ಡಮನಿ, ಎಸ್​. ಜೆ. ದಲಬಂಜನ್​, ಬಿ.ಬಿ.ಪಾಟೀಲ, ಎಂ.ಎಸ್​.ಚೆಟ್ಟಿ ಹಲವರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts