More

    ಕೊವಿಡ್​-19ರ ನಿರ್ವಹಣೆಯಲ್ಲಿ ಜಾಗತಿಕ ಮಟ್ಟದಲ್ಲಿ ಮುಂಚೂಣಿಯಲ್ಲಿರುವ ಪ್ರಧಾನಿ ಮೋದಿಯವರ ಬಗ್ಗೆ ಗೃಹ ಸಚಿವ ಅಮಿತ್​ ಷಾ ಹೀಗೆ ಟ್ವೀಟ್ ಮಾಡಿದ್ದಾರೆ…

    ನವದೆಹಲಿ: ಕೊವಿಡ್​ -19ನ್ನು ಸಮರ್ಥವಾಗಿ ನಿರ್ವಹಣೆ ಮಾಡುತ್ತಿರುವ ವಿಶ್ವನಾಯಕರಲ್ಲಿ ಭಾರತದ ಪ್ರಧಾನಿ ನರೇಂದ್ರಯವರು ಅಗ್ರಸ್ಥಾನದಲ್ಲಿದ್ದಾರೆ ಎಂದು ಅಮೆರಿಕ ಮೂಲದ ಸಂಸ್ಥೆ ಮಾರ್ನಿಂಗ್​ ಕನ್ಸಲ್ಟ್​ನ ಸಮೀಕ್ಷೆ ತಿಳಿಸಿದೆ.
    ಜಗತ್ತಿನ ಅನೇಕ ದೇಶಗಳಿಗೆ ಏಕಾಏಕಿ ಎದುರಾಗಿರುವ ಕರೊನಾ ವಿರುದ್ಧ ಹೋರಾಡಲು, ಆರ್ಥಿಕ ಪರಿಸ್ಥಿತಿ ನಿಭಾಯಿಸಲು ಆಯಾ ದೇಶಗಳ ನಾಯಕರು ಅನೇಕ ಕ್ರಮಗಳನ್ನು ಕೈಗೊಳ್ಳುತ್ತಿದ್ದಾರೆ. ಹೀಗೆ ಸಮರ್ಥವಾಗಿ ನಿಭಾಯಿಸುತ್ತಿರುವ ವಿಶ್ವದ ನಾಯಕರಲ್ಲಿ ಮೋದಿಯವರು ನಂ.1 ಎಂದು ಸ್ಪಷ್ಟವಾಗಿದೆ.

    ಕೊವಿಡ್​-19 ಸಂದರ್ಭವನ್ನು ಪ್ರಧಾನಿ ನರೇಂದ್ರ ಮೋದಿಯವರು ನಿಭಾಯಿಸುತ್ತಿರುವ ರೀತಿಯನ್ನು ಅಮೆರಿಕದ ಬಿಲಿಯನೇರ್​ ಉದ್ಯಮಿ ಬಿಲ್​ ಗೇಟ್ಸ್​ ಕೂಡ ಮೆಚ್ಚಿಕೊಂಡಿದ್ದಾರೆ. ಹೊಗಳಿ ಪತ್ರವನ್ನೂ ಬರೆದಿದ್ದಾರೆ.

    ಈಗ ಇದೇ ವಿಚಾರವಾಗಿ ಗೃಹ ಸಚಿವ ಅಮಿತ್​ ಷಾ ಟ್ವೀಟ್ ಮಾಡಿದ್ದಾರೆ. ಸತ್ಯವನ್ನು ಯಾರೂ ಸಾಬೀತು ಮಾಡುವ ಅಗತ್ಯವಿಲ್ಲ. ಅದರಷ್ಟಕ್ಕೆ ಅದೇ ಸ್ಪಷ್ಟವಾಗಿ ಗೋಚರಿಸುತ್ತಿದೆ ಎಂದು ಹೇಳಿ ಮೋದಿಯವರನ್ನು ಶ್ಲಾಘಿಸಿದ್ದಾರೆ. ಅಷ್ಟೇ ಅಲ್ಲ, ಇಡೀ ಭಾರತ ಮತ್ತು ಅದರ ಜನರು ನರೇಂದ್ರ ಮೋದಿಯವರ ನಾಯಕತ್ವದಡಿಯಲ್ಲಿ ಸುರಕ್ಷಿತವಾಗಿದ್ದಾರೆ ಎಂದಿದ್ದಾರೆ.

    ಜಾಗತಿಕ ಸಾಂಕ್ರಾಮಿಕ ರೋಗವಾದ ಕೊವಿಡ್​-19ನ್ನು ಸಮರ್ಥವಾಗಿ ಎದುರಿಸುತ್ತಿರುವ ಪ್ರಧಾನಿ ನರೇಂದ್ರ ಮೋದಿಯವರನ್ನು ಇಡೀ ಜಗತ್ತು ಕೊಂಡಾಡುತ್ತಿದೆ. ಇಂತಹ ಸವಾಲಿನ ಸಮಯದಲ್ಲಿ ಅವರು ಭಾರತೀಯರನ್ನು ರಕ್ಷಣೆ ಮಾಡುವ ಜತೆಗೆ ಬೇರೆ ದೇಶಗಳಿಗೂ ಸಹಾಯ ಮಾಡುತ್ತಿದ್ದಾರೆ. ಹೀಗಿರುವಾಗ ನಮ್ಮ ದೇಶದ ಎಲ್ಲರೂ ಮೋದಿಯವರ ನಾಯಕತ್ವದಲ್ಲಿ ನಂಬಿಕೆ ಇಡಬಹುದು. ನಾವೆಲ್ಲ ಸುರಕ್ಷಿತವಾಗಿದ್ದೇವೆ ಎಂಬ ವಿಶ್ವಾಸದಲ್ಲಿ ಇರಬಹುದು ಎಂದು ಅಮಿತ್​ ಷಾ ಟ್ವೀಟ್​ನಲ್ಲಿ ತಿಳಿಸಿದ್ದಾರೆ.

    ಜಗತ್ತಿನ ಕರೊನಾ ಪೀಡಿತ ರಾಷ್ಟ್ರಗಳ ಅಧ್ಯಕ್ಷರು, ಪ್ರಧಾನಿಗಳು ಕೊವಿಡ್​-19ರ ವಿರುದ್ಧ ಎಷ್ಟು ಸಮರ್ಥವಾಗಿ ಹೋರಾಡುತ್ತಿದ್ದಾರೆ. ಪರಿಸ್ಥಿತಿಯನ್ನು ಹೇಗೆ ನಿಭಾಯಿಸುತ್ತಿದ್ದಾರೆ ಎಂದು ಅಮೆರಿಕದ ಮಾರ್ನಿಂಗ್​ ಕನ್ಸಲ್ಟ್​ ಸಂಸ್ಥೆ ಸಮೀಕ್ಷೆ ನಡೆಸಿತ್ತು. ಬೇರೆ ದೇಶದ ನಾಯಕರಿಗೆ ಅಂಕ ನೀಡಲು ದಿನಕ್ಕೆ ತಲಾ 447 ಸಂದರ್ಶನಗಳನ್ನು ನಡೆಸಿತ್ತು. ಹಾಗೇ ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ ಬಗ್ಗೆ ಜನಾಭಿಪ್ರಾಯ ಕೇಳಲು 7039 ಸಂದರ್ಶನ ಏರ್ಪಡಿಸಿತ್ತು. ಇದರಲ್ಲಿ ಪ್ರಧಾನಿ ನರೇಂದ್ರ ಮೋದಿಯವರೇ ಮುಂಚೂಣಿಯಲ್ಲಿದ್ದಾರೆ ಎಂದು ವರದಿಯಾಗಿದೆ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts