ಪಿಎಂ ಕೇರ್ಸ್‌ಗೆ ಅಮೀರ್, ಕಾರ್ಮಿಕರಿಗೆ ದುಡ್ಡು ಕೊಟ್ಟ ಸಲ್ಮಾನ್

blank

ಈಗಾಗಲೇ ‘ಕಿಂಗ್ ಖಾನ್’ ತಮ್ಮ ಹಲವು ಸಂಸ್ಥೆಗಳ ನೆರವಿಗೆ ಧಾವಿಸಿದ್ದಾಗಿದೆ. ಈಗ ಸಲ್ಮಾನ್ ಖಾನ್ ಮತ್ತು ಅಮೀರ್ ಖಾನ್ ಸಹ ಅಗತ್ಯವಿರುವವರ ನೆರವಿಗೆ ನಿಂತಿದ್ದು, ತಮ್ಮದೇ ರೀತಿಯಲ್ಲಿ ಸಹಾಯ ಮಾಡುತ್ತಿದ್ದಾರೆ.

blank

ಈ ಮುನ್ನ ಸಲ್ಮಾನ್ ಅವರು ಚಿತ್ರರಂಗದಲ್ಲಿನ ದಿನಗೂಲಿ ಕಾರ್ಮಿಕರಿಗೆ ಸಹಾಯ ಮಾಡುತ್ತಾರೆ ಎಂದು ಹೇಳಲಾಗಿತ್ತು. ಯಾರಿಗೆ ಮತ್ತು ಎಷ್ಟು ಎಂಬ ಪ್ರಶ್ನೆಗೆ ಉತ್ತರ ಸಿಕ್ಕಿರಲಿಲ್ಲ. ಇದೀಗ ಸಲ್ಮಾನ್ ಖಾನ್ ಅವರು ಫೆಡರೇಶನ್ ಆಫ್​ ವೆಸ್ಟರ್ನ್ ಇಂಡಿಯಾ ಸಿನಿ ಎಂಪ್ಲಾಯಿಸ್ ಎಂಬ ಕಾರ್ಮಿಕರ ಒಕ್ಕೂಟಕ್ಕೆ ಆರು ಕೋಟಿ ರೂಪಾಯಿ ಕೊಟ್ಟಿದ್ದು, 20 ಸಾವಿರ ಕಾರ್ಮಿಕರಿಗೆ ತಲಾ ಮೂರು ಸಾವಿರ ಹಂಚುವುದಕ್ಕೆ ಹೇಳಿದ್ದಾರಂತೆ. ಅಷ್ಟೇ ಅಲ್ಲ, ಮುಂದಿನ 20 ದಿವಸಗಳಲ್ಲಿ ಅವರು ಮತ್ತೆ ತಲಾ ಮೂರು ಸಾವಿರ ರೂಪಾಯಿಗಳನ್ನು ಕೊಡುವ ಆಶ್ವಾಸನೆ ನೀಡಿದ್ದಾರಂತೆ.

ಇನ್ನು ಅಮೀರ್ ಖಾನ್ ಸಹ ಕೊಡುವ ವಿಷಯದಲ್ಲಿ ಹಿಂದೆ ಬಿದ್ದಿಲ್ಲ. ಅಮೀರ್ ಎಷ್ಟು ಕೊಟ್ಟಿದ್ದಾರೆ ಎಂದು ನಿಖರವಾಗಿ ಗೊತ್ತಿಲ್ಲದಿದ್ದರೂ, ಅವರು ಪ್ರಧಾನ ಮಂತ್ರಿಗಳ ‘ಪಿಎಂ ಕೇರ್ಸ್‌’ ಮತ್ತು ಮಹಾರಾಷ್ಟ್ರ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಹಣ ನೀಡಿದ್ದಾರಂತೆ. ಅಷ್ಟೇ ಅಲ್ಲ, ಲಾಕ್‌ಡೌನ್ ೋಷಣೆಯಾಗುವ ಮುನ್ನ ಅವರು ‘ಲಾಲ್ ಸಿಂಗ್ ಛಡ್ಡಾ’ ಚಿತ್ರದ ಚಿತ್ರೀಕರಣದಲ್ಲಿದ್ದರು. ಲಾಕ್‌ಡೌನ್‌ನಿಂದ ಚಿತ್ರೀಕರಣ ಹಠಾತ್ತನೆ ನಿಂತಿದ್ದರಿಂದ, ಆ ಚಿತ್ರದಲ್ಲಿ ಕೆಲಸ ಮಾಡುತ್ತಿದ್ದ ಹಲವು ದಿನಗೂಲಿ ನೌಕರರಿರೂ ಅಮೀರ್ ಧನ ಸಹಾಯ ಮಾಡಿದ್ದಾರೆ.

ಹೃತಿಕ್ ಸೈಲೆಂಟ್ ಆಗಿ ಏನೆಲ್ಲಾ ಮಾಡ್ತಿದ್ದಾರೆ ಗೊತ್ತಾ?

Share This Article
blank

ಸಾಲ ಕೊಡಬೇಡಿ.. ನಿಮಗೆ ಸಮಸ್ಯೆಗಳು ಎದುರಾಗುತ್ತವೆ! money

money : ಸಂತೋಷ ಮತ್ತು ದುಃಖಗಳಿಂದ ತುಂಬಿರುವ ಜೀವನದಲ್ಲಿ ಹಣವು ಎಲ್ಲದಕ್ಕೂ ಮೂಲ ಮೂಲ ಎಂದು…

ನಿಮ್ಮ ಪತಿ ಬಿಗಿಯಾದ ಬೆಲ್ಟ್ ಧರಿಸುತ್ತಿದ್ದಾರಾ? ಅವರಿಗೆ ಈ ಕುರಿತಾಗಿ ಜಾಗೃತಿ ಮೂಡಿಸಿ..belt

belt: ಇತ್ತೀಚಿನ ದಿನಗಳಲ್ಲಿ ಬೆಲ್ಟ್ ಧರಿಸುವುದು ಸಾಮಾನ್ಯ. ಆದರೆ, ಬೆಲ್ಟ್ ಧರಿಸುವುದರಿಂದ ಕೆಲವು ಆರೋಗ್ಯ ಸಮಸ್ಯೆಗಳು…

blank