More

    ಭಾರತದಲ್ಲಿ ಕರೊನಾ 3ನೇ ಅಲೆ ಕಾಡಿದರೆ ದಕ್ಷಿಣ ಆಫ್ರಿಕಾಕ್ಕೆ ಐಪಿಎಲ್ ಸ್ಥಳಾಂತರ?

    ನವದೆಹಲಿ: ಭಾರತದಲ್ಲಿ ದಿನದಿಂದ ದಿನಕ್ಕೆ ಕರೊನಾ ಪ್ರಕರಣಗಳು ಏರಿಕೆಯಾಗುತ್ತಿರುವುದು 3ನೇ ಅಲೆಯಾಗಿ ಪರಿವರ್ತನೆಗೊಂಡರೆ ಐಪಿಎಲ್ 15ನೇ ಆವೃತ್ತಿಯನ್ನು ದೇಶದಲ್ಲಿ ಸಂಘಟಿಸುವುದು ಕಷ್ಟವಾಗಲಿದೆ. ಈ ಹಿನ್ನೆಲೆಯಲ್ಲಿ ಬಿಸಿಸಿಐ ‘ಪ್ಲ್ಯಾನ್ ಬಿ’ ಸಿದ್ಧಪಡಿಸಿಕೊಂಡಿದೆ. ಇದರನ್ವಯ ಈ ಬಾರಿ ಐಪಿಎಲ್ ಟೂರ್ನಿಯನ್ನು ಸಂಪೂರ್ಣವಾಗಿ ದಕ್ಷಿಣ ಆಫ್ರಿಕಾದಲ್ಲಿ ಆಯೋಜಿಸುವ ಸಾಧ್ಯತೆಗಳಿವೆ. ಆದರೆ ಭಾರತದಲ್ಲೇ ಟೂರ್ನಿ ನಡೆಸುವುದು ಬಿಸಿಸಿಐನ ಮೊದಲ ಆದ್ಯತೆಯಾಗಿರಲಿದೆ.

    ಕರೊನಾ ಹಾವಳಿಯಿಂದಾಗಿ 2020ರ ಐಪಿಎಲ್ ಸಂಪೂರ್ಣವಾಗಿ ಯುಎಇಯಲ್ಲಿ ನಡೆದಿದ್ದರೆ, 2021ರಲ್ಲೂ 2ನೇ ಭಾಗದ ಟೂರ್ನಿಗೆ ಅರಬ್ ರಾಷ್ಟ್ರವೇ ವೇದಿಕೆಯಾಗಿತ್ತು. ಆದರೆ ಈ ಬಾರಿ ಬದಲಿ ತಾಣವಾಗಿ ಯುಎಇಯಲ್ಲಿ ಟೂರ್ನಿಯನ್ನು ಆಯೋಜಿಸಲು ಬಿಸಿಸಿಐ ಒಲವು ತೋರಿಲ್ಲ. ಹಾಲಿ ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿ ಒದಗಿಸಲಾಗಿರುವ ಹೋಟೆಲ್ ವ್ಯವಸ್ಥೆ ಮತ್ತು ಬಯೋಬಬಲ್ ವಾತಾವರಣದ ಬಗ್ಗೆ ಭಾರತ ತಂಡದ ಆಟಗಾರರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಹೀಗಾಗಿ 10 ತಂಡಗಳನ್ನು ಒಳಗೊಂಡ 15ನೇ ಆವೃತ್ತಿಯ ಐಪಿಎಲ್ ಟೂರ್ನಿಯನ್ನು ಸಂಪೂರ್ಣವಾಗಿ ದಕ್ಷಿಣ ಆಫ್ರಿಕಾದಲ್ಲೇ ಆಯೋಜಿಸಲು ಬಿಸಿಸಿಐ ಒಲವು ತೋರಿದೆ. ಆದರೆ, ಭಾರತದಲ್ಲಿ ಟೂರ್ನಿ ನಡೆಸುವುದು ಅಸಾಧ್ಯವಾದರೆ ಮಾತ್ರ ಹರಿಣಗಳ ನಾಡಿಗೆ ಸ್ಥಳಾಂತರಗೊಳ್ಳಲಿದೆ.

    ಕಳೆದೆರಡು ವರ್ಷಗಳಿಂದ ಯುಎಇಯಲ್ಲೇ ಐಪಿಎಲ್ ಆಡಿರುವ ಆಟಗಾರರು ಅಲ್ಲಿನ ಕಟ್ಟುನಿಟ್ಟಿನ ನಿಯಮಗಳ ನಡುವೆ ಬಯೋಬಬಲ್‌ನಲ್ಲಿ ಸಾಕಷ್ಟು ಮಾನಸಿಕ ಆರೋಗ್ಯದ ಸಮಸ್ಯೆ ಎದುರಿಸಿದ್ದಾರೆ. ಹೀಗಾಗಿ ದಕ್ಷಿಣ ಆಫ್ರಿಕಾದಲ್ಲಿ ಟೂರ್ನಿ ಆಯೋಜಿಸಿದರೆ ಅಲ್ಲಿನ ರೆಸಾರ್ಟ್‌ಗಳಲ್ಲಿ ತಂಡಗಳು ಉಳಿದುಕೊಂಡಾಗ ಆಟಗಾರರು ಸಾಕಷ್ಟು ತಾಜಾತನದ ಅನುಭವ ಪಡೆಯಲಿದ್ದಾರೆ. ಅಲ್ಲದೆ ಬದಲಾದ ವಾತಾವರಣದಲ್ಲಿ ಆಟಗಾರರಿಗೂ ಸಾಕಷ್ಟು ರಿಲೀಫ್​ ಸಿಗಲಿದೆ ಎನ್ನಲಾಗಿದೆ.

    ಕೇಪ್‌ಟೌನ್ ಟೆಸ್ಟ್‌ನಲ್ಲೂ ವೈಫಲ್ಯ, ಪೂಜಾರ-ರಹಾನೆ ಇನ್ನು ಪುರಾನೆ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts