More

    ಹಮಾಸ್​ ದಾಳಿಯಲ್ಲಿ ಕಾಣೆಯಾದ ಮಗಳು: ಅಮೆರಿಕಾ ವ್ಯಾಪಾರಿ ಕಣ್ಣೀರು

    ಜೆರೂಸಲೇಂ: ಇಸ್ರೇಲ್​ನ ನೋವಾ ಮ್ಯೂಸಿಕ್ ಫೆಸ್ಟಿವಲ್‌ನಲ್ಲಿ ಹಮಾಸ್ ಉಗ್ರರ ದಾಳಿ ಅದೆಷ್ಟೋ ಜನರಲ್ಲಿ ನೋವು ತುಂಬಿದೆ. ಮೃತರ ಬಂಧುಗಳ ಆರ್ತನಾದ ಅರಣ್ಯ ರೋಧನೆಯಾಗುತ್ತಿದೆ. ಕಾಣೆಯಾದವರ ಶವಗಳೂ ಪತ್ತೆಯಾಗುತ್ತಿಲ್ಲ. ಇದರಿಂದ ಕಣ್ಣೀರಿನಲ್ಲಿ ಕೈತೊಳೆಯುವಂತಾಗಿದೆ. ಇಂತಹ ನೋವು ಅನುಭವಿಸಿದ, ಮಗಳನ್ನು ಕಳೆದುಕೊಂಡ ಅಮೆರಿಕಾದ ವ್ಯಾಪಾರಿ ವ್ಯಥೆ ಇಲ್ಲಿದೆ….

    ಇದನ್ನೂ ಓದಿ: “ಇಲ್ಲಿಂದ ನನ್ನನ್ನು ಕರೆದುಕೊಂಡು ಹೋಗಿ”…ಹಮಾಸ್​ ಬಂಧನದಲ್ಲಿರುವ ಯುವವತಿ ಆವೇದನೆ: ಮೊದಲ ವೀಡಿಯೋ ಬಿಡುಗಡೆ

    ವಾಲ್ಟ್​ಮನ್​ ಇಸ್ರೇಲಲ್ ಆಧಾರಿತ ಅಮೆರಿಕಾ ವ್ಯಾಪಾರಿ. ಕಂಪ್ಯೂಟರ್ ನೆಟ್‌ವರ್ಕ್ ಉತ್ಪನ್ನಗಳ ಬಹುರಾಷ್ಟ್ರೀಯ ಪೂರೈಕೆ ಸಂಸ್ಥೆ ಮೆಲ್ಲನಾಕ್ಸ್‌ನ ಸಂಸ್ಥಾಪಕ, ಆತನ ಪುತ್ರಿ 24 ವರ್ಷದ ಡೇನಿಯಲ್ ಮತ್ತು ಆಕೆಯ ಪ್ರಿಯಕರ ನೋಮ್ ಶಾಯ್ ದಕ್ಷಿಣ ಇಸ್ರೇಲ್‌ನಲ್ಲಿ ಅ.7ರಂದು ನೋವಾ ಮ್ಯೂಸಿಕ್ ಫೆಸ್ಟಿವಲ್‌ನಲ್ಲಿ ಭಾಗವಹಿಸಿದ್ದರು. ಈ ಮ್ಯೂಸಿಕ್​ ಫೆಸ್ಟಿವಲ್‌ ಮೇಲೆ ಹಮಾಸ್ ಉಗ್ರರು ದಾಳಿಯನ್ನು ಪ್ರಾರಂಭಿಸಿದಾಗ 260 ಜನ ಸಾವನ್ನಪ್ಪಿದರು ಮತ್ತು ಅನೇಕರು ಸೆರೆಹಿಡಿಯಲ್ಪಟ್ಟು ಒತ್ತೆಯಾಳುಗಳಾದರು.

    ತನ್ನ ಪುತ್ರಿ ಅಪಹರಣಕ್ಕೊಳಗಾಗಿರಬಹುದು, ಇನ್ನೂ ಜೀವಂತದಿಂದ ಇರುತ್ತಾಳೆಂದು ವಾಲ್ಟ್​ಮ್ಯಾನ್​ ಭಾವಿಸಿದ್ದರು. “ನಾನು (ಇಸ್ರೇಲ್‌ನಲ್ಲಿ) ಬಂದಿಳಿದ ಮೂರು ಗಂಟೆಗಳ ನಂತರ ದಕ್ಷಿಣಕ್ಕೆ ಹೋದೆ. ಆಕೆ ಇದ್ದ ಕಾರನ್ನು ಹುಡುಕಿದೆ. ಅ.11ರಂದು ಆಕೆಯ ಸೆಲ್​ಫೋನ್​ ಕರೆ ಸ್ವೀಕರಿಸಿದಾಗ ದಿಗ್ಭ್ರಾಂತಿಯಾಯಿತು. ಏಕೆಮದರೆ ನನ್ನ ಪುತ್ರಿ ಮತ್ತು ಆಕೆಯ ಸ್ನೇಹಿತನನ್ನು ಹಮಾಸ್​ ಗುಂಪು ಹತ್ಯೆಗೈದ ರೀತಿ ಭಯಾನಾಕವಾಗಿದೆ ಎಂದು ಹೀಗೆ ವಿವರಿಸುತ್ತಾರೆ.

    “ಕನಿಷ್ಠ ಮೂರರಿಂದ ಐದು ಉಗ್ರರು ಎರಡು ದಿಕ್ಕುಗಳಿಂದ ಅವರಿದ್ದ ಕಾರನ್ನು ಸುತ್ತುವರೆದು ಗುಂಡು ಹಾರಿಸಿದ್ದಾರೆ. ಅವರು ತಪ್ಪಿಸಿಕೊಳ್ಳಲು ಬಿಳಿ ಟೊಯೊಟಾ ಕಾರೊಂದರ ಕಡೆ ಓಡಿಹೋಗಿದ್ದಾರೆ. ಆದರೂ ಬಿಡದೆ ಮನಸೋ ಇಚ್ಛೆ ಗುಂಡುಹಾರಿಸಿ ಕೊಂಡಿದ್ದಾರೆ. ಇದನ್ನು ಸ್ಥಳೀಯ ಪ್ರತ್ಯಕ್ಷ ದರ್ಶಿಗಳು ತಿಳಿಸಿದ್ದಾರೆ” ಎಂದು ವಿವರಿಸಿದರು.

    ಇನ್ನು ವಾಲ್ಟ್​ಮನ್ ಕೊನೆಯ ಬಾರಿಗೆ ಡೇನಿಯಲ್ ಅವರೊಂದಿಗೆ ಮಾತನಾಡಿದಾಗ, ಅವರ ಪುತ್ರಿ ಮತ್ತು ಆಕೆಯ ಗೆಳೆಯ ಶೀಘ್ರದಲ್ಲೇ ಮದುವೆಯಾಗಲು ತೀರ್ಮಾನಿಸಿರುವುದಾಗಿ ಹೇಳಿದ್ದರಂತೆ. ಆದರೆ ದುರಂತದಲ್ಲಿ ಇವರ ಅಂತ್ಯವಾಗಿದೆ ಎಂದು ಹೇಳುವಾಗ ಅವರ ಕಣ್ಣಾಲಿಗಳು ತುಂಬಿಕೊಳ್ಳುತ್ತವೆ.
    ಪುತ್ರಿ ಮತ್ತು ನೋಮ್ ಜತೆ ಇತ್ತೀಚೆಗೆ ತಮ್ಮ ನಾಯಿಯೊಂದಿಗೆ ಹೊಸ ಫ್ಲಾಟ್‌ಗೆ ತೆರಳಿದ್ದೆ. ಅವರು ಕೆಲವೇ ವಾರಗಳವರೆಗೆ ಅಲ್ಲಿದ್ದರು, ಈಗ ಅವರ ಎಲ್ಲಾ ವಸ್ತುಗಳನ್ನು ಏನು ಮಾಡಬೇಕೆಂದು ನಾವು ನೋಡಬೇಕಾಗಿದೆ” ಎಂದು ಡೇನಿಯಲ್ ತಿಳಿಸಿದರು.

    ಯುದ್ಧಪೀಡಿತ ಇಸ್ರೇಲ್​ಗೆ ಅಮೆರಿಕ ಅಧ್ಯಕ್ಷ ಜೋ ಬಿಡೆನ್ ಭೇಟಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts