More

    ಕೋಟ್ಯಂತರ ಜನರಿಗೆ ಬೆಳಕು ನೀಡಿದವರು ಅಂಬೇಡ್ಕರ್: ತೇಜಸ್ವಿ ಸೂರ್ಯ ಬಣ್ಣನೆ

    ಬೆಂಗಳೂರು: ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್, ವಿದ್ಯಾಭ್ಯಾಸದ ಬಲದಿಂದ ಕಷ್ಟಪಟ್ಟು ಬೆಳೆದು ದೇಶದ ಕೋಟ್ಯಂತರ ಜನರಿಗೆ ಸಂವಿಧಾನದ ಮೂಲಕ ಬೆಳಕು ನೀಡಿದರು ಎಂದು ಸಂಸದ ತೇಜಸ್ವಿ ಸೂರ್ಯ ಬಣ್ಣಿಸಿದ್ದಾರೆ.

    ಜೆ.ಪಿ.ನಗರದ ಆರ್.ವಿ.ಡೆಂಟಲ್ ಕಾಲೇಜಿನಲ್ಲಿ ಭಾನುವಾರ ಆಯೋಜಿಸಲಾಗಿದ್ದ ‘ನಮೋ ವಿದ್ಯಾನಿಧಿ’ ಸ್ಕಾಲರ್‌ಶಿಪ್ ಚೆಕ್ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿದರು.

    ಪ್ರತಿ ವಿದ್ಯಾರ್ಥಿಗಳು ಅಂಬೇಡ್ಕರ್ ಅವರ ಜೀವನ ಚರಿತ್ರೆಯನ್ನು ಓದಬೇಕು. ಸಾಕಷ್ಟು ಕಷ್ಟಗಳನ್ನು ಅನುಭವಿಸಿದ್ದ ಅವರು, ಜೀವನದಲ್ಲಿ ಎದುರಾದ ಎಲ್ಲ ಸವಾಲುಗಳನ್ನು ಎದುರಿಸಿ ವಿಶ್ವದಲ್ಲೇ ಮಾದರಿ ಸಂವಿದಾನವನ್ನು ರಚಿಸಿದರು. ಇಂಥ ವ್ಯಕ್ತಿಗಳ ಆದರ್ಶವನ್ನು ನಾವೆಲ್ಲರೂ ಮೈಗೂಡಿಸಿಕೊಳ್ಳಬೇಕು. ಬಡತನ ಕುಟುಂಬದಿಂದ ಬಂದಿರುವ ನರೇಂದ್ರ ಮೋದಿ ಅವರು ದೇಶದ ಪ್ರಧಾನಿ ಆಗಿ ಉತ್ತಮ ಆಡಳಿತ ನಡೆಸುತ್ತಿದ್ದಾರೆ. ದೇಶದ ಇತಿಹಾಸವನ್ನು ಗಮನಿಸಿದರೆ ಸಮಾಜದಲ್ಲಿ ದೊಡ್ಡ ಪರಿವರ್ತನೆ ಮಾಡಿರುವವರು ಕಡು ಬಡತನದಿಂದ ಕುಟುಂಬದಿಂದ ಬಂದವರು. ಹೀಗಾಗಿ, ಬಡತನ ಬಗ್ಗೆ ಕೀಳರಿಮೆ ಪಡದೆ ವಿದ್ಯಾರ್ಥಿಗಳು ಚೆನ್ನಾಗಿ ಓದಿ ಸಮಾಜದಲ್ಲಿ ಮಾದರಿ ವ್ಯಕ್ತಿಯಾಗಿ ಬೆಳೆಯಬೇಕು ಎಂದರು.

    ರಾಜಕೀಯ ಉದ್ದೇಶಕ್ಕಾಗಿ ನಮೋ ವಿದ್ಯಾನಿಧಿ ಕಾರ್ಯಕ್ರಮವನ್ನು ನಡೆಸುತ್ತಿಲ್ಲ. ನಮ್ಮ ಕ್ಷೇತ್ರದ ಪ್ರತಿಭಾವಂತ ಮಕ್ಕಳಿಗೆ, ಜೀವನದಲ್ಲಿ ಮುಂದೆ ಬರುವ ಛಲ ಇರುವವರಿಗೆ ವಿದ್ಯಾಭ್ಯಾಸಕ್ಕೆ ಅಡ್ಡಿ ಅಗಬಾರದೆಂದು ಈ ಯೋಜನೆ ಆರಂಭಿಸಲಾಯಿತು. ಕಷ್ಟಪಟ್ಟು ಮೇಲೆ ಬರುವವರಿಗೆ ಪ್ರೋತ್ಸಾಹ ನೀಡುವ ಕೆಲಸವನ್ನು ಮಾಡುತ್ತಿದ್ದೇವೆ ಎಂದು ತೇಜಸ್ವಿ ಸೂರ್ಯ ಹೇಳಿದರು.

    ಇದನ್ನೂ ಓದಿ: ಆಹಾರ ಇಲಾಖೆ ಆಯುಕ್ತೆಯಾಗಿ ಎಂ.ಕನಗವಲ್ಲಿ ಮುಂದುವರಿಸಿ: ಪಡಿತರ ಹಿತರಕ್ಷಣಾ ಸಂಘ ಮನವಿ
    ಶಾಸಕ ಸಿ.ಕೆ.ರಾಮಮೂರ್ತಿ ಮಾತನಾಡಿ, ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ತೊಡಕು ಆಗಬಾರದೆಂದು ಸಂಸದ ತೇಜಸ್ವಿ ಸೂರ್ಯ ಸಹಾಯ ನೀಡುವ ಕಾರ್ಯ ಮಾಡುತ್ತಿದ್ದಾರೆ. ಈ ಮೂಲಕ ದೇಶ ಸೇವೆಯನ್ನೂ ಸಲ್ಲಿಸುತ್ತಿದ್ದಾರೆ. ಸಾವಿರಾರು ರೋಗಿಗಳಿಗೆ ಉಚಿತವಾಗಿ ಔಷಧ ನೀಡುವ ಕೆಲಸ ಮಾಡಿದ್ದಾರೆ. ಚೆನ್ನಾಗಿ ಓದುವ ಮೂಲಕ ವಿದ್ಯಾರ್ಥಿಗಳು ಸಮಾಜದಲ್ಲಿ ಒಳ್ಳೆಯ ಹೆಸರು ಗಳಿಸಬೇಕು ಎಂದರು. 1,800ಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ತಲಾ 10 ಸಾವಿರ ರೂ.ವಿದ್ಯಾರ್ಥಿ ವೇತನ ಚೆಕ್ ನೀಡಲಾಯಿತು. ಪ್ರಾಧ್ಯಾಪಕ ಜಯಸಿಂಹ ಮತ್ತಿತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts