More

    ಈಡೇರದ ಅಂಬೇಡ್ಕರ ಅಭಿವೃದ್ಧಿ ನಿಗಮ ಉದ್ದೇಶ, ಗ್ಯಾರಂಟಿ ಯೋಜನೆಗಳಿಂದ ನಿಗಮಕ್ಕೆ ಬರೆ. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಅನುದಾನ ಕಡಿತ

    ಶಿವಾನಂದ ಹಿರೇಮಠ, ಗದಗ
    ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ ಮೀಸಲಿಟ್ಟ 11 ಸಾವಿರ ಕೋಟಿ ಅನುದಾನವನ್ನು ಗ್ಯಾರಂಟಿ ಯೋಜನೆಗಳಿಗೆ ಬಳಸಿದ್ದರಿಂದ ಜಿಲ್ಲೆಯ ಅಂಬೇಡ್ಕರ ಅಭಿವೃದ್ಧಿ ನಿಗಮದಿಂದ ಕಳೆದ ಸಾಲಿನಲ್ಲಿ ಮತ್ತು ಪ್ರಸಕ್ತ ಸಾಲಿನಲ್ಲಿ ಪಜಾ ಮತ್ತು ಪಪಂ ಸಮುದಾಯದ ಅಭಿವೃದ್ಧಿಗೆ ವಿನಿಯೋಗಿಸ ಬೇಕಿದ್ದ ಅನುದಾನಕ್ಕೆ ಕೊಕ್ಕೆ ಬಿದ್ದಿದೆ. ರಾಜ್ಯಾದ್ಯಂತ ಇದೇ ಪರಿಸ್ಥಿತಿ ಎದುರಾಗಿದೆ. ಪಜಾ, ಪಪಂ ಅನುದಾನ ವರ್ಗಾವಣೆಯಿಂದ ವರ್ಷದಿಂದ ವರ್ಷಕ್ಕೆ ನಿಗಮಕ್ಕೆ ನೀಡುತ್ತಿರುವ ಗುರಿಯನ್ನು ರಾಜ್ಯ ಸರ್ಕಾರ ಕಡಿತಗೊಳಿಸುತ್ತಿದೆ. ಹೀಗಾಗಿ ನಿಗಮದ ಉದ್ದೇಶ ಸಾಕಾರಗೊಳ್ಳುತ್ತಿಲ್ಲ. ಸ್ಥಳಿಯ ಶಾಸಕರಿಗೂ ಲಾನುಭವಿ ಆಯ್ಕೆ ಕಗ್ಗಂಟಾಗಿ ಪರಿಣಮಿಸಿದೆ.

    ಅನುದಾನದಲ್ಲಿ ಕಡಿತ:
    ಅಂಬೇಡ್ಕರ ಅಭಿವೃದ್ಧಿ ನಿಗಮದಿಂದ ಜಾರಿಯಲ್ಲಿರುವ ವಿವಿಧ ಯೋಜನೆಗಳಿಗೆ ಶೇ. 50 ರಿಂದ ಶೇ. 85ರ ವರೆಗೂ ಅನುದಾನ ಕಡಿತಗೊಳಿಸಲಾಗಿದೆ. ತಲಾ ಶೇ.50 ರಷ್ಟು ನೇರ ಸಾಲ ಮತ್ತು ಸಹಾಯದನ ರೂಪದಲ್ಲಿ 1 ಲಕ್ಷ ರೂ.ಗಳನ್ನು ಸ್ವಯಂ ಉದ್ಯೋಗ ಯೋಜನೆ, ಉದ್ಯಮ ಶೀಲತಾ ಯೋಜನೆಗೆ 2 ಲಕ್ಷ ಸಬ್ಸಿಡಿ, ದ್ವಿಚಕ್ರ ಉದ್ಯಮ ಶೀಲತಾ ಯೋಜನೆಗೆ 50 ಸಾವಿರ ರೂ. ಸಬ್ಸಿಡಿ, ಕೊಳವೆ ಬಾವಿ ಕೊರೆಸಲು ಗಂಗಾ ಕಲ್ಯಾಣ ಮತ್ತು ಭೂ ಒಡೆತನ ನೀಡುವ ಯೋಜನೆಗಳಿಗೆ ನಿಧಿರ್ಷ್ಟ ಗುರಿಗಳನ್ನು ರಾಜ್ಯ ಸರ್ಕಾರದಿಂದ ನಿಗದಿ ಪಡಿಸಲಾಗುತ್ತಿತ್ತು. ಆದರೆ, ಗ್ಯಾರಂಟಿ ಯೋಜನೆಗಳಿಗೆ ಪಜಾ, ಪಪಂ ಮೀಸಲಿಟ್ಟ ಅನುದಾನವನ್ನು ವರ್ಗಾಯಿಸಿದ್ದರಿಂದ ಪ್ರಸಕ್ತ ಸಾಲಿನಲ್ಲಿ ನಿಗಮಕ್ಕೆ ನೀಡಿರುವ ಸಾಧನೆ ಗುರಿ ಬಾಗಶಃ ಕುಸಿದಿದೆ. 2011ರ ಜನಗಣತಿ ಪ್ರಕಾರ ಪ್ರತಿ ಯೋಜನೆಗಳಿಗೆ ಈ ಮೊದಲು ನೂರಾರು ಲಾನುಭವಿಗಳ ಆಯ್ಕೆ ಮಾಡಲು ಸರ್ಕಾರ ನಿರ್ದೇಶನ ಇತ್ತು. ಈ ಬಾರಿ ಒಂದು ಅಥವಾ ಎರಡು ಲಾನುಭವಿ ಆಯ್ಕೆ ಮಾಡುವಂತೆ ಗುರಿ ನೀಡಲಾಗಿದೆ. ಇದರಿಂದ ಸ್ವಯಂ ಉದ್ಯೋಗ ಭರವಸೆ ಹೊಂದಿದ್ದ ಯುವಕರಿಗೆ, ಕೊಳವೆ ಬಾವಿ ಹೊಂದಬೇಕೆನ್ನುವ ರೈತರಿಗೆ ಸರ್ಕಾರದಿಂದ ಸೂಕ್ತ ಅನುದಾನ ಸಿಗುತ್ತಿಲ್ಲ.

    ಅನುದಾನ ಕಡಿತ ಹೇಗೆ?
    ಸ್ವಯಂ ಉದ್ಯೋಗ ಯೋಜನೆಯಡಿ 2022-23 ನೇ ಸಾಲಿನಲ್ಲಿ ಲಾನುಭವಿಗೆ ತಲಾ 1 ಲಕ್ಷದಂತೆ 108 ಲಾನುಭವಿಗಳ ಆಯ್ಕೆ ಮಾಡಲು ಸೂಚಿಸಲಾಗಿತ್ತು. ಈ ಬಾರಿ ಕೇವಲ 42 ಲಾನುಭವಿ ಆಯ್ಕೆಗೆ ಗುರಿ ನಿಗದಿ ಪಡಿಸಲಾಗಿದೆ. ಅದೇ ರೀತಿ ಉದ್ಯಮ ಶೀಲತಾ ಯೋಜನೆಯಲ್ಲಿ 2022&23 ನೇ ಸಾಲಿನಲ್ಲಿ ಲಾನುಭವಿಗೆ ಸಬ್ಸಿಡಿ ರೂಪದಲ್ಲಿ ತಲಾ 50 ಸಾವಿರದಂತೆ 37 ಲಾನುಭವಿಗಳ ಆಯ್ಕೆ ಮಾಡಲು ಸೂಚಿಸಲಾಗಿತ್ತು. ಈ ಬಾರಿ ಕೇವಲ 12 ಲಾನುಭವಿಗಳಿಗೆ ಸೀಮಿತಗೊಳಿಸಲಾಗಿದೆ. ಇದೇ ರೀತಿ ವಿವಿಶ ಯೋಜನೆಗಳಲ್ಲಿ ಲಾನುಭವಿ ಮತ್ತು ಅನುದಾನ ಕಡಿತಗೊಳಿಸಿ ಗುರಿ ನಿಗದಿ ಪಡಿಸಲಾಗಿದೆ.

    ಆಯ್ಕೆ ಕಗ್ಗಂಟು:
    ಯೋಜನೆಯೊಂದಕ್ಕೆ ಸರ್ಕಾರದಿಂದ ಒಂದು ಅಥವಾ ಎರಡು ಲಾನುಭವಿ ಆಯ್ಕೆ ಮಾಡಲು ಗುರಿ ನಿಗದಿ ಪಡಿಸಿದ್ದರಿಂದ ಲಾನುಭವಿಗಳನ್ನು ಆಯ್ಕೆ ವಿಷಯವು ಸ್ಥಳಿಯ ಶಾಸಕರಿಗೆ ಕಗ್ಗಂಟಾಗಿದೆ. ಯೋಜನೆಗಳ ಲಾನುಭವಿಗಳನ್ನು ಶಾಸಕರ ಅಧ್ಯಕ್ಷತೆಯಲ್ಲಿ ಆಯ್ಕೆ ಮಾಡಲಾಗುತ್ತದೆ. ನಿಗಮಕ್ಕೆ ಈ ಮೊದಲು ಸಾಕಷ್ಟು ಅನುದಾನ ಹಂಚಿಕೆ ಆಗುತ್ತಿದ್ದ ಹಿನ್ನೆಲೆ, ನೂರಾರು ಲಾನುಭವಿಗಳ ಆಯ್ಕೆ ಸರಳವಾಗಿ ನಡೆಯುತ್ತಿತ್ತು. ಈಗ ಒಂದು ಅಥವಾ ಎರಡೂ ಲಾನುಭವಿಗಳ ಆಯ್ಕೆ ಮಾಡಬೇಕಾದ ಹಿನ್ನೆಲೆ ಸ್ಥಳಿಯ ಶಾಸಕರಿಗೂ ಆಯ್ಕೆ ಕಗ್ಗಂಟಾಗುತ್ತಿದೆ. ಕಾರ್ಯಕರ್ತರನ್ನು ಮನವೊಲಿಸಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಅಸಮಧಾನವಿದೆ.

    ಸಿಬಿಲ್​ ಸ್ಕೋರ್​ ಸಮಸ್ಯೆ:
    ಆಯ್ಕೆ ಆಗುತ್ತಿರುವ ಲಾನುಭವಿಗಳ ಸಿಬಿಲ್​ ಸ್ಕೋರ್​ ಉತ್ತಮ ಇರದ ಹಿನ್ನೆಲೆ ಬ್ಯಾಂಕಿನಿಂದಲೂ ಸಾಲ ಸೌಲಭ್ಯ ಸಿಗುತ್ತಿಲ್ಲ. ತಿರಸ್ಕಾರಗೊಳ್ಳುತ್ತಿವೆ. ಹಾಗಾಗಿ ಲಾನುಭವಿ ಆಯ್ಕೆ ಬದಲಾಗಿ ಅನುದಾನ ರಾಜ್ಯ ಸರ್ಕಾರಕ್ಕೆ ಮರಳಿ ಹೋಗುತ್ತಿರುವ ಪ್ರಕರಣಗಳು ಬೆಳಕಿಗೆ ಬಂದಿದೆ.

    ಬಾಕ್ಸ್​:
    2022-23ನೇ ಸಾಲಿನಲ್ಲಿ – 7.61 ಕೋಟಿ
    ಯೋಜನೆ ಹೆಸರು – ಆಯ್ಕೆ ಗುರಿ – ಅನುದಾನ ಹಂಚಿಕೆ
    ಸ್ವಯಂ ಉದ್ಯೋಗ ಯೋಜನೆ – 108 – 1.08 ಕೋಟಿ
    ಗರಿಷ್ಠ 50 ಸಾವಿರ, ಉದ್ಯಮ ಶೀಲತಾ ಆಭಿವೃದ್ಧಿ – 320 – 2.24 ಕೋಟಿ
    ಗರಿಷ್ಠ 2 ಲಕ್ಷ ವರೆಗಿನ ಉದ್ಯಮ ಶೀಲತಾ ಆಭಿವೃದ್ಧಿ – 37 – 74 ಲಕ್ಷ
    ಗರಿಷ್ಠ 3.50 ಲಕ್ಷ ವರೆಗಿನ ಉದ್ಯಮ ಶೀಲತಾ ಆಭಿವೃದ್ಧಿ – 25 – 87.50 ಲಕ್ಷ
    ಮೈಕ್ರೋ ಕ್ರೆಡಿಟ್​ ಯೋಜನೆ – 320 – 80 ಲಕ್ಷ
    ಗಂಗಾ ಕಲ್ಯಾಣ – 41 – 1.38 ಕೋಟಿ

    2023 – 24ನೇ ಸಾಲಿನಲ್ಲಿ(1.86 ಕೋಟಿ)
    ಯೋಜನೆ ಹೆಸರು – ಆಯ್ಕೆ ಗುರಿ – ಅನುದಾನ ಹಂಚಿಕೆ
    ಸ್ವಯಂ ಉದ್ಯೋಗ ಯೋಜನೆ – 42 – 42 ಲಕ್ಷ
    ಗರಿಷ್ಠ 1 ಲಕ್ಷ ವರೆಗಿನ ಉದ್ಯಮ ಶೀಲತಾ ಆಭಿವೃದ್ಧಿ – 18 – 18 ಲಕ್ಷ
    ಗರಿಷ್ಠ 2 ಲಕ್ಷ ವರೆಗಿನ ಉದ್ಯಮ ಶೀಲತಾ ಆಭಿವೃದ್ಧಿ – 12 – 24 ಲಕ್ಷ
    ಗರಿಷ್ಠ 4 ಲಕ್ಷ , ಉದ್ಯಮ ಶೀಲತಾ ಆಭಿವೃದ್ಧಿ – 16 – 64 ಲಕ್ಷ
    ಮೈಕ್ರೋ ಕ್ರೆಡಿಟ್​ ಯೋಜನೆ – 150 – 37.50 ಲಕ್ಷ
    ಗಂಗಾ ಕಲ್ಯಾಣ – 32 – 1.19 ಕೊಟಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts