More

    ಅಂಬೇಡ್ಕರ್ ಜಯಂತಿ ಅವಿಸ್ಮರಣೀಯವಾಗಿಸಿ

    ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ: ಈ ದೇಶಕ್ಕೆ ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ನೀಡಿದ ಕೊಡುಗೆ ಅಪಾರ. ಏ.14ರಂದು ಅಂಬೇಡ್ಕರ್ ಅವರ ಜಯಂತಿಯನ್ನು ಅವಿಸ್ಮರಣೀಯವಾಗಿಸುವ ನಿಟ್ಟಿನಲ್ಲಿ ಪ್ರತಿಯೊಬ್ಬರು ಸಕ್ರಿಯವಾಗಿ ಪಾಲ್ಗೊಳ್ಳಬೇಕು ಎಂದು ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಪ್ರಸಾದ ಅಬ್ಬಯ್ಯ ಹೇಳಿದರು.

    ಹುಬ್ಬಳ್ಳಿ ನೆಹರು ಮೈದಾನದಲ್ಲಿ ಜಿಲ್ಲಾ ಕಾಂಗ್ರೆಸ್ ವತಿಯಿಂದ ಆಯೋಜಿಸಿರುವ ಅಂಬೇಡ್ಕರ್ ಜಯಂತಿ ಅಂಗವಾಗಿ ತಮ್ಮ ಗೃಹ ಕಚೇರಿಯಲ್ಲಿ ಸೋಮವಾರ ದಲಿತ ಮುಖಂಡರ ಸಭೆಯನ್ನುದ್ದೇಶಿಸಿ ಅವರು ಮಾತನಾಡಿದರು.

    ಅಂಬೇಡ್ಕರ್ ಅವರು ಕೇವಲ ದಲಿತರಿಗೆ ಮಾತ್ರ ಸೀಮಿತರಲ್ಲ. ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ಅವರು ಸಾಮಾಜಿಕ ನ್ಯಾಯ ಒದಗಿಸುವ ಕಾರ್ಯ ಮಾಡಿದ್ದಾರೆ. ಸಮಾಜದಲ್ಲಿರುವ ಅನಿಷ್ಟ ಆಚರಣೆಗಳನ್ನು ದೂರು ಮಾಡಿ, ಸಮ ಸಮಾಜ ನಿರ್ಮಾಣ ಮಾಡಲು ಅಂಬೇಡ್ಕರ್ ಹೋರಾಡಿದ್ದರು. ಅವರು ಅನುಭವಿಸಿದ ಕಷ್ಟ, ನೋವು, ಅವಮಾನವನ್ನು ಮುಂದೆ ಯಾರೂ ಅನುಭವಿಸಬಾರದು ಎಂಬ ಉದ್ದೇಶದಿಂದಲೇ ಸಂವಿಧಾನದಲ್ಲಿ ಪ್ರತಿಯೊಬ್ಬರಿಗೂ ಅವಕಾಶ ಕಲ್ಪಿಸಿದ್ದರು ಎಂದರು.

    ಪಾಲಿಕೆ ಸದಸ್ಯರಾದ ದೋರಾಜ ಮಣಿಕುಂಟ್ಲ, ಚೇತನ ಹಿರೇಕೆರೂರ, ಮಾಜಿ ಸದಸ್ಯ ಗಣೇಶ ಟಗರಗುಂಟಿ, ದಲಿತ ಮುಖಂಡರಾದ ಗುರುನಾಥ ಉಳ್ಳಿಕಾಶಿ, ಪ್ರಭು ಪ್ರಭಾಕರ, ಶಾಮ ಜಾಧವ, ಯಲ್ಲಪ್ಪ ಹಳಪೇಟಿ, ನಾಗೇಶ ಕತ್ರಿಮಲ್ಲ, ವಸಂತ ಬೆಟಗೇರಿ, ಸುಬ್ಬಣ್ಣ ದೊಡ್ಡಮನಿ, ಶೇಕಪ್ಪ ನಾರಾಯಣಪುರ, ಸಂತೋಷ ಚಲವಾದಿ, ಶ್ರೀಶೈಲ ಚಲವಾದಿ, ಶ್ರೀನಿವಾಸ ಬೆಳದಡಿ, ಚೇತನಾ ಲಿಂಗದಾಳ, ಅಕ್ಕಮ್ಮ ಕಂಬಳಿ, ಕಮಲವ್ವ ಹೊಸಮನಿ, ಶೊಭಾ ಕಮತರ, ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts