More

    ಬಾಬಾ ಸಾಹೇಬ್ ಅಂಬೇಡ್ಕರ್ ಅನುಕರಣೆ ಅವಶ್ಯಕ: ಅಂತಾರಾಷ್ಟ್ರೀಯ ಅಲಯನ್ಸ್ ಸಂಸ್ಥೆ ಜಿಲ್ಲಾ ಗರ್ವನರ್ ಕೆ.ಟಿ.ಹನುಮಂತು ಹೇಳಿಕೆ

    ಮಂಡ್ಯ: ಪ್ರಸ್ತುತ ದಿನಗಳಲ್ಲಿ ಅಂಬೇಡ್ಕರ್ ಅವರ ವಿಶ್ವಮಾನವತೆಯ ವಿಚಾರಧಾರೆಗಳ ಅನುಕರಣೆ ಅತ್ಯಾವಶ್ಯಕ ಎಂದು ಅಂತಾರಾಷ್ಟ್ರೀಯ ಅಲಯನ್ಸ್ ಸಂಸ್ಥೆ ಜಿಲ್ಲಾ ಗರ್ವನರ್ ಕೆ.ಟಿ.ಹನುಮಂತು ಹೇಳಿದರು.
    ನಗರದ ಡಿ.ದೇವರಾಜ ಅರಸು ಮೆಟ್ರಿಕ್ ನಂತರದ ಬಾಲಕರ ವಿದ್ಯಾರ್ಥಿ ನಿಲಯ ಘಟಕ-1 ಸಭಾಂಗಣದಲ್ಲಿ ಅಂತಾರಾಷ್ಟ್ರೀಯ ಅಲಯನ್ಸ್ ಸಂಸ್ಥೆ, ಪ್ರತಿಭಾಂಜಲಿ ಸುಗಮ ಸಂಗೀತ ಅಕಾಡೆಮಿ ಸಹಯೋಗದಲ್ಲಿ ಆಯೋಜಿಸಿದ್ದ ಡಾ.ಬಿ.ಆರ್.ಅಂಬೇಡ್ಕರ್ ಅವರ 133ನೇ ಜನ್ಮದಿನಾಚರಣೆಯಲ್ಲಿ ಮಾತನಾಡಿದರು. ಅಂಬೇಡ್ಕರ್ ಅವರ ಜನ್ಮದಿನವನ್ನು ಇಡಿ ವಿಶ್ವದ 180ಕ್ಕೂ ಹೆಚ್ಚು ರಾಷ್ಟಗಳು ಗೌರವದಿಂದ ಆಚರಿಸುತ್ತವೆ. ಭಾರತಕ್ಕೆ ವಿಧ್ವತ್ ಮತ್ತು ಅಪಾರ ಜ್ಞಾನಶಕ್ತಿಯಲ್ಲಿ ಕೀರ್ತಿತಂದವರು. ಇಂತವರನ್ನು ಸದಾ ಸ್ಮರಿಸಿಕೊಂಡು ವಿಚಾರಗಳನ್ನು ಮೈಗೂಡಿಸಿಕೊಳ್ಳಬೇಕು ಎಂದು ನುಡಿದರು.
    ಅಂದಿನ ಕಾಲದಲ್ಲಿದ್ದ ಅಸ್ಪೃಶ್ಯತೆಯಿಂದ ಸಾಕಷ್ಟು ನೋವು ತಿಂದಿದ್ದಾರೆ. ಅದನ್ನು ಸಮಾಜದಿಂದ ತೊಲಗಿಸುವ ಮಾರ್ಗಗಳನ್ನು ಕಂಡುಕೊಂಡು ಜನರನ್ನು ವಿಮುಕ್ತಿಗೊಳಿಸಲು ಸಫಲತೆ ಕಂಡಿದ್ದಾರೆ. ಸಂವಿಧಾನದ ಕಾನೂನುಗಳ ಮೂಲಕ ಅನಿಷ್ಟ ಪದ್ದತಿಗಳು ದೂರವಾಗುತ್ತಿವೆ ಎಂದು ಹೇಳಿದರು.
    ವಿಚಾರವಾದಿ ಡಾ.ಸುರೇಶ್ ಮಾತನಾಡಿ, ಪ್ರಜಾಡಳಿತದ ಆಧಾರ ಸ್ಥಂಭವೇ ಸಂವಿಧಾನ. ಜನರ ಉಸಿರು ಕಾಯುವ ಕಾನೂನಾಗಿದೆ. ಇಂದಿನ ವಿದ್ಯಾರ್ಥಿಗಳು ಹಾಗೂ ವಿದ್ಯಾವಂತರಿಗೆ ಸಂವಿಧಾನವೇ ತಿಳಿಯದಾಗಿದೆ. ಜನರಿಗೆ ಸಿನಿಮಾ, ಧಾರಾವಾಹಿ, ರಾಮಾಯಣ, ಮಹಾಭಾರತ, ವೇದೋಪನಿಷತ್ತುಗಳು, ಕಥೆ, ಕಾದಂಬರಿಗಳು ಗೊತ್ತಿವೆ, ಓದುತ್ತಾರೆ. ಆದರೆ ಜೀವನದ ಆಧಾರ ಸ್ಥಂಭವಾಗಿರುವ ಸಂವಿಧಾನ ಗ್ರಂಥವನ್ನು ಓದುವುದೇ ಇಲ್ಲ. ತಿಳಿದುಕೊಳ್ಳುವ ಗೋಜಿಗೆ ಹೋಗುವುದಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
    ಅಕಾಡೆಮಿ ಅಧ್ಯಕ್ಷ ಪ್ರೊ.ಡೇವಿಡ್, ನಿಲಯ ಮೇಲ್ವಿಚಾರಕ ರವಿ, ಲೋಕೇಶ್, ಬಸವರಾಜು, ಮಹದೇವಮ್ಮ, ಸುಜಾತಾ, ಸಿದ್ದನಂಜಪ್ಪ, ನಟರಾಜ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts