More

    ನಾನೇನು ಅಸಮರ್ಥಳಾ?; ವೀಣಾ ಬಂಡಾಯ ದನಿ

    ಬೆಂಗಳೂರು: ಪಕ್ಷ ನನಗೆ ಮುಂದಿನ ಸ್ಥಾನದ ಸ್ಪಷ್ಟವಾದ ಭರವಸೆ ಕೊಟ್ಟಿಲ್ಲ. ಅಭ್ಯರ್ಥಿ ಗೆಲ್ಲಿಸಿ ಎಂದು ಮಾತ್ರ ಹೇಳಿದ್ದಾರೆ. ಇದರಿಂದ ನನ್ನ ಸ್ವಾಭಿಮಾನಕ್ಕೆ ಧಕ್ಕೆ ತಂದಿದೆ ಎಂದು ಬಾಗಲಕೋಟೆ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ ವೀಣಾ ಕಾಶಪ್ಪನವರು ತಮ್ಮ ಅಸಮಾಧಾನ ಹೊರಹಾಕಿದ್ದಾರೆ.
    ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿಎಂ ಸಿದ್ದರಾಮಯ್ಯ ಗುರುವಾರ ಸಭೆಗೆ ಆಹ್ವಾನ ನೀಡಿದ್ದರು. ಅದರಂತೆ ಸಿಎಂ ಭೇಟಿಗೆ ಹೋಗಿದ್ದೆವು. ಆದರೆ, ನನಗೆ ತುಂಬಾ ನಿರಾಶೆಯಾಗಿದೆ ಎಂದರು.
    ಬೇರೆ ಬೇರೆ ಸಮುದಾಯದ ಮುಖಂಡರೆಲ್ಲ ನನ್ನ ಪರವಾಗಿ ನ್ಯಾಯ ಕೇಳಲು ಬಂದಿದ್ದರು. ಆಶಾಭಾವನೆಯಿಂದ ನಾವು ಸಿಎಂ ಭೇಟಿಗೆ ತೆರಳಿದ್ದೆವು. ಜಿಲ್ಲೆಯಲ್ಲಿ ನಾನು ಓಡಾಡೇ ಇಲ್ಲ. ನಿಮ್ಮ ಹೆಸರೇ ಜಿಲ್ಲೆಯಲ್ಲಿ ಇಲ್ಲ. ಜಿಲ್ಲೆಯ ಯಾವ ನಾಯಕರೂ ನಿಮ್ಮ ಹೆಸರು ಹೇಳೇ ಇಲ್ಲ ಎಂದರು. ಸಿಎಂ ನೇತೃತ್ವದ ಸಭೆಯಲ್ಲಿ ಹೀಗೆ ಹೇಳಿದಾಗ ತುಂಬಾ ನೋವಾಯಿತು ಎಂದು ಬೇಸರ ವ್ಯಕ್ತಪಡಿಸಿದರು.
    ಜಿಲ್ಲೆಯ ಜನರು ನನ್ನನ್ನ ಸಂಸದರನ್ನಾಗಿ ನೋಡುವ ಆಸೆ ಇದೆ. ಎರಡು ದಿನಗಳಲ್ಲಿ ನಾನು ಬಂಡಾಯ ಅಭ್ಯರ್ಥಿ ಆಗುವ ಬಗ್ಗೆ ನಿರ್ಧಾರ ಮಾಡುತ್ತೇನೆ. ಬೆಂಬಲಿಗರ ಜತೆಗೆ ಚರ್ಚಿಸಿ ನಿರ್ಧಾರ ಮಾಡುತ್ತೇನೆ ಎಂದರು.
    ಸಿಎಂ ಸಭೆಯಲ್ಲಿ ನಾಯಕರು ಸರಿಯಾಗಿ ಭರವಸೆ ನೀಡಿಲ್ಲ. ಅಭ್ಯರ್ಥಿ ಬದಲಾವಣೆ ಮಾಡಿ ಅಂತ ನಾನು ಕೇಳಿದ್ದೆ. ನಾಯಕರು ಅಭ್ಯರ್ಥಿ ಬದಲಾವಣೆ ಆಗುವುದಿಲ್ಲ ಎಂದಿದ್ದಾರೆ. ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಿ ಅಂದಾಗಲೂ ನಾನು ಒಪ್ಪಿರಲಿಲ್ಲ. ಸಂಸತ್ ಚುನಾವಣೆಗೆ ನಿಲ್ಲಬೇಕು ಎಂದು ನಿರ್ಧರಿಸಿದ್ದೆ. ಈಗ ಏಕೆ ಟಿಕೆಟ್ ನೀಡಲಿಲ್ಲ ಎಂದು ಸಭೆಯಲ್ಲಿ ಕೇಳಿದೆ. ಅದಕ್ಕೆ ಶಾಸಕರು ಹೆಸರು ನಿಮ್ಮ ಹೇಳಿಲ್ಲ ಹೀಗಾಗಿ ಟಿಕೆಟ್ ಕೊಟ್ಟಿಲ್ಲ ಅಂದಿದ್ದಾರೆ. ನಾನೇನು ಅಸಮರ್ಥಳಾ? ಎಂದು ಖಾರವಾಗಿ ಪ್ರಶ್ನಿಸಿದರು.
    ಬಾಗಲಕೋಟೆ ಲೋಕಸಭಾ ಕ್ಷೇತ್ರಕ್ಕೆ ಬೇರೆ ಅಭ್ಯರ್ಥಿ ಹಾಕಿದ್ದಕ್ಕೆ ಬೇಸರವಾಗಿದೆ. ಸಂಯುಕ್ತಾ ಪಾಟೀಲ್ ಹೊರ ಜಿಲ್ಲೆಯವರು ಪಂಚಮಸಾಲಿ ಸಮುದಾಯದ ಹೆಸರು ಹೇಳಿಕೊಂಡು ಹೊರಗಿನಿಂದ ಬಂದಿದ್ದಾರೆ. ಬೇರೆ ಅಭ್ಯರ್ಥಿ ಪರ ನಾನು ಕೆಲಸ ಮಾಡಲ್ಲ ಎಂದು ಇದೇ ವೇಳೆ ಖಚಿತಪಡಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts