More

    ಆಟೋ ಚಾಲಕರಿಗೆ ಶಂಕರ್ ನಾಗ್ ಸ್ಫೂರ್ತಿ

    ಕೂಡ್ಲಿಗಿ: ನಟ, ನಿರ್ದೇಶಕ, ಕರಾಟೆ ಕಿಂಗ್ ಶಂಕರ್ ನಾಗ್ ಕನ್ನಡ ಸಿನಿಮಾರಂಗದ ಮರೆಯಲಾಗದ ಮಾಣಿಕ್ಯ, ಜೀವನೋತ್ಸಾಹಿ ಎಂದು ಆಟೋ ಚಾಲಕರ ಸಂಘದ ತಾಲೂಕು ಅಧ್ಯಕ್ಷ ಮಯೂರ ಮಂಜುನಾಥ ಹೇಳಿದರು.

    ಪಟ್ಟಣದ ಆಟೋ ನಿಲ್ದಾಣದಲ್ಲಿ ಗುರುವಾರ ಏರ್ಪಡಿಸಿದ್ದ ಶಂಕರ್ ನಾಗ್ 69ನೇ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಆಟೋಚಾಲಕನ ಕರ್ತವ್ಯ ಪ್ರಜ್ಞೆ, ಅವನು ಕೂಡ ಸಮಾಜಮುಖಿ ಕಾರ್ಯಗಳನ್ನು ಮಾಡಬಹುದು ಎಂದು ಆಟೋ ರಾಜ ಸಿನಿಮಾ ಮೂಲಕ ತೋರಿಸಿದ ಮೊದಲ ನಾಯಕ ನಟ ಶಂಕರ್ ನಾಗ್.

    ಹೀಗಾಗಿ ಅಂದಿನಿಂದ ನಾಡಿನ ಆಟೋ ಚಾಲಕರು ಅವರ ಅಭಿಮಾನವನ್ನು ಆಟೋದ ಮೇಲೆ ಹಾಗೂ ಆಟೋ ನಿಲ್ದಾಣಕ್ಕೆ ಹೆಸರಿಟ್ಟು ಅಭಿಮಾನ ಮೆರೆಯುತ್ತಿರುವುದು ಶ್ಲಾಘನೀಯ. ಅಪಘಾತಗಳು ಸಂಭವಿಸಿದಾಗ ಮೊದಲು ಸಹಾಯಕ್ಕೆ ಕೈ ಚಾಚುವರೇ ಆಟೋ ಚಾಲಕರು, ಅದರಂತೆ ಗರ್ಭಿಣಿ, ಬಾಣಂತಿಯರಿಗೆ, ಅಶಕ್ತರಿಗೆ ರಕ್ತದ ಅವಶ್ಯಕತೆ ಎದುರಾದಾಗ ಮೊದಲು ನೆನಪಾಗುವುದೇ ಆಟೋ ಚಾಲಕರು ಎಂದರು.
    ಆಟೋ ಚಾಲಕರು ಸಂಕಷ್ಟದಲ್ಲಿದ್ದು, ಸರ್ಕಾರ ಕಾರ್ಮಿಕರ ಸಂಘದ ವ್ಯಾಪ್ತಿಗೆ ತರುವ ಮೂಲಕ ಅವರ ಮತ್ತು ಕುಟುಂಬಕ್ಕೆ ಜೀವವಿಮೆ, ಮಕ್ಕಳಿಗೆ ಸಹಾಯಧನ ಸೇರಿದಂತೆ ಇತರ ಸೌಲಭ್ಯ ಕಲ್ಪಿಸಬೇಕು ಎಂದು ಒತ್ತಾಯಿಸಿದರು.

    ಆಟೋ ಚಾಲಕರಾದ ಡಿ.ಚೌಡಪ್ಪ, ಗಜ ನಾಗರಾಜ, ಗಿರೀಶ್, ಟೈಗರ್ ದುರುಗಪ್ಪ, ಅಪ್ಪೆ ರಾಮು, ರಮೇಶ್, ಸುರೇಶ್, ತೋಟಪ್ಪ, ಮಲ್ಲಿಕಾರ್ಜುನ, ಗುಪ್ಪಾಲ ಗೋವಿಂದಪ್ಪ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts