More

    ಎರಡು ವಿಶ್ವಕಪ್ ವಿಜೇತ ಯೂಸುಫ್ ಪಠಾಣ್ ಕ್ರಿಕೆಟ್‌ಗೆ ವಿದಾಯ

    ನವದೆಹಲಿ: ಭಾರತ ತಂಡದ ಆಲ್ರೌಂಡರ್ ಯೂಸುಫ್ ಪಠಾಣ್ ಕೂಡ ಎಲ್ಲ ಮಾದರಿಯ ಕ್ರಿಕೆಟ್‌ಗೆ ವಿದಾಯ ಹೇಳಿದ್ದಾರೆ. 2007ರ ಟಿ20 ಹಾಗೂ 2011ರ ಏಕದಿನ ವಿಶ್ವಕಪ್ ವಿಜೇತ ಭಾರತ ತಂಡದ ಸದಸ್ಯರಾಗಿದ್ದ ಯೂಸುಫ್ ಪಠಾಣ್, ಕೆಲದಿನಗಳಿಂದ ಸಕ್ರಿಯೆ ಕ್ರಿಕೆಟ್‌ನಿಂದ ದೂರ ಉಳಿದಿದ್ದರು. ‘ನಿವೃತ್ತಿಗೆ ಇದು ಸೂಕ್ತ ಸಮಯ. ಜೀವನದ ಮತ್ತೊಂದು ಇನಿಂಗ್ಸ್‌ಗೆ ತೆರೆ ಎಳೆಯುತ್ತಿದ್ದೇನೆ. ಎಲ್ಲ ಮಾದರಿಯ ಕ್ರಿಕೆಟ್‌ಗೆ ಅಧಿಕೃತವಾಗಿ ನಿವೃತ್ತಿ ಹೇಳುತ್ತಿದ್ದೇನೆ’ ಎಂದು ಟ್ವಿಟರ್‌ನಲ್ಲಿ ಯೂಸುಫ್ ಬರೆದುಕೊಂಡಿದ್ದಾರೆ.

    ಇದನ್ನೂ ಓದಿ: ಎಲ್ಲ ಮಾದರಿಯ ಕ್ರಿಕೆಟ್‌ಗೆ ನಿವೃತ್ತಿ  ಘೋಷಿಸಿದ ಕರ್ನಾಟಕ ತಂಡದ ಮಾಜಿ ನಾಯಕ ಆರ್. ವಿನಯ್‌ಕುಮಾರ್

    ಯೂಸುಫ್ ಪಠಾಣ್ ರಾಷ್ಟ್ರೀಯ ತಂಡದ ಪರ 57 ಏಕದಿನ ಪಂದ್ಯಗಳಿಂದ ಎರಡು ಶತಕ, 3 ಅರ್ಧಶತಕ ಸೇರಿದಂತೆ 810 ರನ್ ಪೇರಿಸಿದ್ದರೆ, 22 ಟಿ20 ಪಂದ್ಯಗಳಿಂದ 236 ರನ್ ಕಲೆಹಾಕಿದ್ದರು. 2008ರ ಚೊಚ್ಚಲ ಐಪಿಎಲ್ ವಿಜೇತ ರಾಜಸ್ಥಾನ ರಾಯಲ್ಸ್, 2012, 2014ರ ವಿಜೇತ ಕೆಕೆಆರ್ ತಂಡದ ಭಾಗವಾಗಿದ್ದರು. 174 ಐಪಿಎಲ್ ಪಂದ್ಯಗಳಿಂದ 3204 ರನ್‌ಗಳಿಸಿದ್ದು, ಏಕೈಕ ಶತಕ, 13 ಅರ್ಧಶತಕ ಹಾಗೂ 42 ವಿಕೆಟ್ ಕಬಳಿಸಿದ್ದಾರೆ.

    ಯೂಸುಫ್  ಪಠಾಣ್, ಭಾರತ ತಂಡದ ಮಾಜಿ ಆಲ್ರೌಂಡರ್ ಇರ್ಫಾನ್ ಪಠಾಣ್ ಸಹೋದರನಾಗಿದ್ದಾರೆ. 100 ಪ್ರಥಮ ದರ್ಜೆ ಪಂದ್ಯಗಳಿಂದ 4825 ರನ್, 201 ವಿಕೆಟ್ ಕಬಳಿಸಿದ್ದರೆ, ಲಿಸ್ಟ್ ಎನಲ್ಲಿ 199 ಪಂದ್ಯಗಳಿಂದ 4797 ರನ್, 124 ವಿಕೆಟ್ ಪಡೆದಿದ್ದಾರೆ. 274 ಟಿ20 ಪಂದ್ಯಗಳಿದ 4852 ರನ್ ಹಾಗೂ 99 ವಿಕೆಟ್ ಗಳಿಸಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts