More

    ನಿಮ್ಮ ಮನೆ ಬಾಗಿಲಿಗೆ ಅಂಚೆ ಇಲಾಖೆ ಎಲ್ಲ ಸೇವೆಗಳು ಲಭ್ಯ

    ಆಲ್ದೂರು : ಪಟ್ಟಣದ ಅಬ್ಬಾಸಿಯ ಬಯಲು ರಂಗ ಮಂದಿರದಲ್ಲಿ ಮಂಗಳವಾರ ಆಲ್ದೂರು, ಸಂಗಮೇಶ್ವರ ಪೇಟೆಯ ಅಂಚೆ ಕಚೇರಿಗೆ ಸಂಭಂದಿಸಿದಂತೆ ಆಲ್ದೂರು ಅಂಚೆ ಕಚೇರಿ ವ್ಯಾಪ್ತಿಯಲ್ಲಿ ಅಂಚೆ ಜನ ಸಂಪರ್ಕಅಭಿಯಾನ ಹಮ್ಮಿಕೊಳ್ಳಲಾಗಿತ್ತು.
    ಚಿಕ್ಕಮಗಳೂರು ಅಂಚೆ ಇಲಾಖೆ ಸಹಾಯಕ ನಿರ್ದೇಶಕಿ ರೇಖಾ ಮಾತನಾಡಿ, ಒಂದು ಸೂರು, ಸೇವೆ ನೂರು ಎಂಬಂತೆ ಅಂಚೆ ಕಚೇರಿಯಲ್ಲಿ ಪ್ರಸ್ತುತ ಎಲ್ಲ ಸೇವೆಗಳು ದೊರೆಯುತ್ತಿವೆ. ಹುಟ್ಟಿದ ಮಕ್ಕಳಿಗೆ ಅಂಚೆ ಇಲಾಖೆಯಲ್ಲಿ ಖಾತೆ ತೆರೆದು ಹಣ ಉಳಿತಾಯ ಮಾಡುವ ಅವಕಾಶ ಕಲ್ಪಿಸಿದೆ ಎಂದರು.
    ಇಲ್ಲಿನ ವಿದ್ಯಾರ್ಥಿಗಳು ಹೊರದೇಶಗಳಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದರೂ ಖಾತೆ ತೆರೆದು ವ್ಯವಹಾರ ನಡೆಸಲು ಅವಕಾಶ ಕಲ್ಪಿಸಲಾಗಿದೆ. ವೀಸಾ, ಪಾರ್ಸ್‌ಪೋರ್ಟ್, ಮುಂಗಡ ಟಿಕೆಟ್ ಕಾಯ್ದಿರಿಸುವಿಕೆ, ಉಳಿತಾಯ ಖಾತೆ, ವಿಮಾ ಪಾಲಿಸಿ, ಹೂಡಿಕೆಗಳಿಗೂ ಅಂಚೆ ಕಚೇರಿಯಲ್ಲಿ ಅವಕಾಶವಿದೆ. ಇಲಾಖೆಯ ಎಲ್ಲ ಸೇವೆಗಳು ನಿಮ್ಮ ಮನೆ ಬಾಗಿಲಲ್ಲೇ ದೊರೆಯಲಿವೆ ಎಂದು ತಿಳಿಸಿದರು.
    ಐಪಿಪಿಬಿ ವ್ಯವಸ್ಥಾಪಕ ಪ್ರವೀಣ್ ಮಾತನಾಡಿ, ಪೋಸ್ಟ್ ಆಫೀಸ್‌ನಲ್ಲಿ ಕಾಗದ ರಹಿತ ವ್ಯವಹಾರ ನಡೆಸಲು ಆರಂಭಿಸಿದೆ. ಆಧಾರ್ ನಂಬರ್ ನೀಡಿ ನಿಮ್ಮ ಖಾತೆಯಲ್ಲಿ ಹಣ ಪಡೆಯುವ ಸೌಲಭ್ಯವಿದೆ. ಅಂಚೆ ಕಚೇರಿ ವ್ಯವಹಾರದಲ್ಲಿ ಕರ್ನಾಟಕ 2ನೇ ಸ್ಥಾನದಲ್ಲಿದ್ದು ಚಿಕ್ಕಮಗಳೂರು ಜಿಲ್ಲೆ ಉತ್ತಮ ಅಂಚೆ ಸಂಪರ್ಕ ಹೊಂದಿದೆ ಎಂದರು. ಕಾರ್ಮಿಕರಿಗೆ ತಮ್ಮ ಸಮೀಪದ ಅಂಚೆ ಇಲಾಖೆಯಲ್ಲಿ ವೃದ್ದಾಪ್ಯ ವೇತನ ಪಡೆಯಲು ಅವಕಾಶ ಕಲ್ಪಿಸಲಾಗಿದೆ. ಮನೆ ನಿರ್ಮಾಣಕ್ಕೆ, ವಾಹನ ಖರೀದಿಗೆ ಸಾಲ ಸೌಲಭ್ಯ ನೀಡುತ್ತಿದ್ದು, ಅಂಚೆ ಕಚೇರಿ ಸೇವೆ ವಿಶ್ವಾಸಾರ್ಹವಾಗಿದೆ ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts