More

    ಸರ್ವತೋಮುಖ ಪ್ರಗತಿಗೆ ಸಹಕಾರ ಅವಶ್ಯ

    ರಾಮದುರ್ಗ: ವಿದ್ಯಾರ್ಥಿಗಳ ವ್ಯಕ್ತಿತ್ವ ರೂಪಿಸುವಲ್ಲಿ ಶಿಕ್ಷಣ, ಮಹಾವಿದ್ಯಾಲಯದ ಪಾತ್ರ ಬಹುಮುಖ್ಯವಾಗಿದೆ. ಮಹಾವಿದ್ಯಾಲಯದ ಚಟುವಟಿಕೆಗಳಿಗೆ ಪಾಲಕರು ಸಹಕಾರ ನೀಡಿದಲ್ಲಿ ವಿದ್ಯಾರ್ಥಿಗಳ ಸರ್ವತೋಮುಖ ಪ್ರಗತಿ ಸಾಧ್ಯ ಎಂದು ಸಂಸ್ಥೆಯ ಅಧ್ಯಕ್ಷ ಟಿ. ದಾಮೋದರ ಹೇಳಿದರು.

    ಪಟ್ಟಣದ ಸುಶೀಲಾತಾಯಿ ವೈ.ಕುಲಗೋಡ ಪಿಯು ಕಾಲೇಜಿನಲ್ಲಿ ಈಚೆಗೆ ಆಯೋಜಿಸಿದ್ದ ಪಾಲಕರ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಪಾಲಕರು ಕಾಲೇಜಿನೊಂದಿಗೆ ನಿಕಟ ಸಂಪರ್ಕ ಹೊಂದಿದಲ್ಲಿ ತಮ್ಮ ಮಕ್ಕಳ ಶೈಕ್ಷಣಿಕ ಪ್ರಗತಿ ತಿಳಿಯಲು ಸಾಧ್ಯವಾಗಲಿದೆ. ಮಕ್ಕಳನ್ನು ಸರಿದಾರಿಗೆ ತರುವಲ್ಲಿ ಉಪನ್ಯಾಸಕರ ಜತೆಗೆ ಪಾಲಕರ ಪಾತ್ರ ಅಲ್ಲಗಳೆಯುವಂತಿಲ್ಲ ಎಂದರು.

    ವಿದ್ಯಾ ಪ್ರಸಾರಕ ಸಮಿತಿಯ ಕಾರ್ಯಾಧ್ಯಕ್ಷ ಪಿ.ಎಂ.ಜಗತಾಪ ಮಾತನಾಡಿ, ಪರೀಕ್ಷೆಯಲ್ಲಿ ಯಶಸ್ವಿಯಾಗಬೇಕಾದರೆ ಅಭ್ಯಾಸ, ಓದು ನಿರಂತರವಾಗಿ ನಡೆಯುತ್ತಿರಬೇಕು ಎಂದರು.

    ಶಿಕ್ಷಣ ತಜ್ಞ ವೆಂಕಟೇಶ ಹುಣಶಿಕಟ್ಟಿ, ಜಮಖಾನ ಉಪಾಧ್ಯಾಕ್ಷ ಡಿ.ಎಂ.ಮೊಗೇರ, ಪಾಲಕರ ಪ್ರತಿನಿಧಿ ಮಂಜುನಾಥ ಬಸಿಡೋಣಿ ಇತರರಿದ್ದರು. ಪ್ರಾಚಾರ್ಯ ಎಂ.ಬಿ.ಪಾಟೀಲ ಮಾತನಾಡಿದರು. ಅಶೋಕ ಪಮ್ಮಾರ, ಎಸ್.ಆರ್.ಗೋಲನ್ನವರ, ಬಿರಾದಾರ ಪಾಟೀಲ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts