More

    ಹಿಂದು ಸಮಾಜದಲ್ಲಿ ಒಗ್ಗಟ್ಟು: ಅಖಿಲ ಭಾರತೀಯ ಸಂತ ಸಮಿತಿ ಆಶಯ

    ಮಂಗಳೂರು: ಹಿಂದುಗಳ ಹತ್ಯೆಯನ್ನು ಪರಂಪರೆಯಾಗಿಟ್ಟುಕೊಂಡಿರುವ ಮುಸ್ಲಿಂ ತೀವ್ರವಾದಿಗಳ ಕೃತ್ಯಕ್ಕೆ ನಮ್ಮ ಯುವಕರು ಬಲಿಯಾಗುತ್ತಿದ್ದು, ಇದಕ್ಕೆ ಹಿಂದು ಸಮಾಜ ಒಗ್ಗಟ್ಟು ತೋರಿಸುವ ಮೂಲಕ ಪ್ರತಿಕ್ರಿಯೆ ನೀಡಬೇಕು. ಮುಸ್ಲಿಂ ಧರ್ಮಗುರುಗಳು ತಮ್ಮ ಧರ್ಮದ ಮತಾಂಧರ ಕೃತ್ಯಗಳನ್ನು ಖಂಡಿಸಲು ಮುಂದೆ ಬಂದಾಗ ಮಾತ್ರ ಇಂತಹ ಕೃತ್ಯಗಳನ್ನು ತಡೆಯಲು ಸಾಧ್ಯ ಎಂದು ಅಖಿಲ ಭಾರತೀಯ ಸಂತ ಸಮಿತಿ ರಾಜ್ಯ ಪ್ರಮುಖ್, ಚಿಲಿಂಬಿ ಓಂ ಶ್ರೀ ಮಠದ ಶ್ರೀವಿದ್ಯಾನಂದ ಸರಸ್ವತಿ ಸ್ವಾಮೀಜಿ ಹೇಳಿದರು.

    ಹಿಂದು ಧರ್ಮ ಇರುವುದರಿಂದಲೇ ದೇಶದಲ್ಲಿ ಜಾತ್ಯಾತೀತತೆ ಉಳಿದಿದೆ. ರಾಜ್ಯದ ಹಿಂದುಗಳ ರಕ್ಷಣಗೆ ಬದ್ಧ ಎಂದು ಹೇಳಿರುವ ಬಿಜೆಪಿ ಸರ್ಕಾರ ಅಧಿಕಾರದಲ್ಲಿ ಇದ್ದರೂ, ಹಿಂದುಗಳ ಹತ್ಯೆ ನಿಲ್ಲುತ್ತಿಲ್ಲ. ರಾಜ್ಯದಲ್ಲಿ ಗುಪ್ತಚರ ದಳ ದುರ್ಬಲವಾಗಿದೆಯೇ ಎಂದು ಪ್ರಶ್ನಿಸಿದ ಅವರು, ಪ್ರವೀಣ್ ಪ್ರಕರಣವೇ ಕೊನೆಯಾಗಬೇಕು. ಇನ್ಮುಂದೆ ಇಂತಹ ಘಟನೆಗಳು ನಡೆಯದಂತೆ ಸರ್ಕಾರ ಕಠಿಣ ನಿಲುವು ತೆಗೆದುಕೊಳ್ಳಬೇಕು. ಆ.9-10ರಂದು ಮುಖ್ಯಮಂತ್ರಿ, ರಾಜ್ಯಪಾಲರು ಹಾಗೂ ಗೃಹಸಚಿವರನ್ನು ಭೇಟಿಯಾಗಲು ದಿನಾಂಕ ನಿಗದಿಪಡಿಸಲಾಗಿದ್ದು, ಸಂತ ಸಮಿತಿಯ ರಾಜ್ಯದ ಪ್ರಮುಖ ಸ್ವಾಮೀಜಿಗಳು ನಿಯೋಗದಲ್ಲಿ ಇರಲಿದ್ದಾರೆ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

    ಹಿಂದುಗಳನ್ನು ಒಗ್ಗಟ್ಟು ಮಾಡುವ ಕೆಲಸ ಈಗಾಗಲೇ ಸಂತ ಸಮಿತಿಯಿಂದ ನಡೆಯುತ್ತಿದ್ದು, ರಾಜ್ಯದ 9 ಜಿಲ್ಲೆಗಳಲ್ಲಿ ಎಲ್ಲ ಹಿಂದು ಸಂಘಟನೆಗಳನ್ನು ಒಟ್ಟು ಸೇರಿಸಿ, ಜಿಲ್ಲಾ ಮಟ್ಟದ ಸಮಿತಿ ರಚಿಸಿ, ಗ್ರಾಮ ಮಟ್ಟದಲ್ಲಿ ಧರ್ಮ ಸೇನೆಗಳ ಮೂಲಕ ಹಿಂದುಗಳ ಮನೆಮನೆಗೆ ಭೇಟಿ ನೀಡಿ ಅವರಲ್ಲಿ ಜಾಗೃತಿ ಮೂಡಿಸುವ ಪ್ರಕ್ರಿಯೆ ನಡೆಯುತ್ತಿದೆ. ಮುಂದಿನ ದಿನಗಳಲ್ಲಿ ಇದನ್ನು ರಾಜ್ಯಾದ್ಯಂತ ವಿಸ್ತರಿಸಲಾಗುವುದು ಎಂದರು.
    ಓಂ ಶ್ರೀ ಮಠದ ಮಾತಾ ಶ್ರೀ ಶಿವಜ್ಞಾನ ಮಹೀ ಸರಸ್ವರಸ್ವತಿ, ಸಂತ ಸಮಿತಿ ಸಂಘಟನಾ ಕಾರ್ಯದರ್ಶಿ ಉಡುಪಿ ದ್ವಾರಕಾಮಹಿ ಮಠದ ಶ್ರೀ ಸಾಯಿ ಈಶ್ವರ್ ಗುರೂಜಿ ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts