More

    ಕರೊನಾ ವಿರುದ್ಧದ ಹೋರಾಟಕ್ಕೆ ಈ ಅಸ್ತ್ರ ಬಳಸಿ; ಸರ್ಕಾರಿ ನೌಕರರಿಗೆ ಕೇಂದ್ರದಿಂದಲೇ ಬಂತು ಸೂಚನೆ

    ನವದೆಹಲಿ: ಕರೊನಾ ವಿರುದ್ಧ ಹೋರಾಟಕ್ಕೆ ನಾವೆಲ್ಲರೂ ಮನೆಯಲ್ಲಿದ್ದೇ ಹೋರಾಟ ನಡೆಸಬೇಕಿದೆ. ಇದನ್ನು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಆರಂಭದಿಂದಲೇ ಜನರಿಗೆಲ್ಲ ಮನವಿ ಮಾಡಿಕೊಳ್ಳುತ್ತಿವೆ. ಪ್ರತಿಯೊಬ್ಬರಲ್ಲೂ ಅರಿವು ಮೂಡಿಸುತ್ತಿವೆ. ಜತೆಗೆ, ಕರೊನಾ ವ್ಯಾಪಿಸುವುದನ್ನು ತಡೆಯುವುದು ಮಾತ್ರವಲ್ಲದೇ, ಕಾಯಿಲೆಗೆ ಒಳಗಾದವರಿಗೆ ಚಿಕಿತ್ಸೆ ನೀಡಲು ಅಗತ್ಯ ವೈದ್ಯಕೀಯ ಸೌಲಭ್ಯಗಳನ್ನು ಕಲ್ಪಿಸಿವೆ. ಅದರ ಬಗ್ಗೆ ಜನರಿಗೂ ಮಾಹಿತಿ ನೀಡುತ್ತಿವೆ.

    ಜನರು ಮನೆಯಲ್ಲಿರುವುದು ಮಾತ್ರವಲ್ಲ, ಸಾಮಾಜಿಕ ಅಥವಾ ವ್ಯಕ್ತಿಗತ ಅಂತರ ಕಾಪಾಡಿಕೊಳ್ಳುವುದು ಕೂಡ ಅನಿವಾರ್ಯ. ಸೋಂಕಿಗೆ ಒಳಗಾದವರಿಂದಲೂ ದೂರವಿರುವುದು ಕೂಡ ಅಗತ್ಯ. ಇದು ಗೊತ್ತಾಗುವುದು ಹೇಗೆ ಅಂತೀರಾ? ಇದಕ್ಕೆ ನಿಮ್ಮ ಬಳಿ ಆರೋಗ್ಯ ಸೇತು ಆ್ಯಪ್​ ಇರಬೇಕು.

    ಹೌದು… ನಿಮ್ಮ ಸ್ಮಾರ್ಟ್​ಫೋನ್​ನಲ್ಲಿ ಆರೋಗ್ಯ ಸೇತು ಆ್ಯಪ್​ ಇದ್ದರೆ, ಅದು ನಿಮ್ಮನ್ನು ಸೋಂಕಿತನಿಂದ ದೂರವಿರುವಂತೆ ಎಚ್ಚರಿಸುತ್ತದೆ. ಸೋಂಕಿತರು ಅಥವಾ ಶಂಕಿತರು ನಿಮ್ಮ ಬಳಿ ಬಂದಾಗ ಕೂಡಲೇ ನಿಮಗೆ ಸಂದೇಶ ಕಳುಹಿಸುವ ಮೂಲಕ ಎಚ್ಚರಿಕೆ ನೀಡುತ್ತದೆ.
    ಈಗಾಗಲೇ ಶಂಕಿತರು, ಸೋಂಕಿತರ ಸ್ಮಾರ್ಟ್​ಫೋನ್​ಗಳಲ್ಲಿ ಆರೋಗ್ಯ ಸೇತು ಆ್ಯಪ್​ ಕಡ್ಡಾಯವಾಗಿ ಅಳವಡಿಸಲಾಗಿದೆ. ಜತೆಗೆ ಕ್ವಾರಂಟೈನ್​ನಲ್ಲಿ ಇರುವವರ ಮೇಲೂ ಈ ಆ್ಯಪ್​ ನಿಗಾ ವಹಿಸುತ್ತದೆ. ಅಂಥವರು ನಿಮ್ಮ ಹತ್ತಿರ ಬಂದಾಗ ದೂರವಿರುವಂತೆ ಆ್ಯಪ್​ ಸೂಚಿಸುತ್ತದೆ. ಇದಕ್ಕಾಗಿ ನೀವು ಮೊಬೈಲ್​ನ ಲೋಕೇಷನ್​ ಹಾಗೂ ಬ್ಲ್ಯೂಟೂಥ್​ ಆನ್​ ಮಾಡಿರಬೇಕು.

    ಕರೊನಾ ವಿರುದ್ಧ ಹೋರಾಟಕ್ಕೆ ಇದೊಂದು ಪ್ರಬಲ ಅಸ್ತ್ರ ಎನ್ನುವುದರಲ್ಲಿ ಎರಡು ಮಾತಿಲ್ಲ. ಹೀಗಾಗಿಯೇ ಈ ಅ್ಯಪ್​ ಡೌನ್​ಲೋಡ್​ ಮಾಡಿಕೊಂಡು ಸುರಕ್ಷಿತವಾಗಿರಿ ಎಂದು ಸರ್ಕಾರ ಪದೇಪದೇ ಹೇಳುತ್ತಿದೆ. ಇದನ್ನು ಈ ಕೂಡಲೇ ಡೌನ್​ಲೋಡ್​ ಮಾಡಿಕೊಳ್ಳುವುದು ಕಡ್ಡಾಯ ಎಂದು ಸರ್ಕಾರಿ ನೌಕರರಿಗೆ ಅದೇಶಿಸಿದೆ.

    ಸರ್ಕಾರಿ ನೌಕರರು ಮಾತ್ರವಲ್ಲದೇ, ಗುತ್ತಿಗೆ ನೌಕರರು ಕೂಡ ಇದನ್ನು ಇನ್​ಸ್ಟಾಲ್​ ಮಾಡಿಕೊಳ್ಳಬೇಕು. ಕಚೇರಿಗೆ ಅಥವಾ ಕೆಲಸಕ್ಕೆ ಹೊರಡುವ ಮೊದಲು ಆ್ಯಪ್​ನಲ್ಲಿ ಸ್ಟೇಟಸ್​ ಚೆಕ್​ ಮಾಡಿಕೊಳ್ಳಬೇಕು. ಸೇಫ್​ ಅಥವಾ ಲೋ ರಿಸ್ಕ್​ಎಂದು ಸೂಚಿಸಿದರಷ್ಟೇ ಕೆಲಸಕ್ಕೆ ತೆರಳಬೇಕು ಎಂದು ಕೇಂದ್ರ ಸರ್ಕಾರ ನಿರ್ದೇಶನ ನೀಡಿದೆ. ವಿಶೇಷವೆಂದರೆ ಕನ್ನಡದಲ್ಲೂ ಇದು ಲಭ್ಯವಿದೆ.

    ಸಿಬಿಎಸ್​ಇ ಪರೀಕ್ಷೆಗಳಲ್ಲಿ ಬದಲಾವಣೆಯಾಗಿದೆಯಾ? ಗೊಂದಲಗಳಿಗೆ ಕೇಂದ್ರ ಸಚಿವರೇ ನೀಡಿದ್ದಾರೆ ಸ್ಪಷ್ಟನೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts