More

    ಎಲ್ಲರೂ ದೇಸಿ ಗೋವು ಸಾಕಬೇಕು

    ಚಿಕ್ಕೋಡಿ/ನಿಪ್ಪಾಣಿ: ದೇಶದಲ್ಲಿ ಗೋವುಗಳ ಸಂಖ್ಯೆ ಕಡಿಮೆಯಾಗುತ್ತಿದ್ದು, ಪ್ರತಿಯೊಬ್ಬರೂ ಮನೆಯಲ್ಲಿ ದೇಸಿ ಗೋವು ಸಾಕುವಂತೆ ಆರ್‌ಎಸ್‌ಎಸ್ ಪ್ರಮುಖ ಮಂಗೇಶ ಬೆಂಡೆ ಮನವಿ ಮಾಡಿದರು. ಮಹಾರಾಷ್ಟ್ರದ ಕನ್ಹೇರಿಯ ಸಿದ್ಧಗಿರಿ ಮಠದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಸಾವಯವ ಹಾಗೂ ರೈತರ ಮಹಾ ಸಮಾವೇಶಕ್ಕೆ ಚಾಲನೆ ನೀಡಿ ಮಾತನಾಡಿದರು.

    ಗೋವುಗಳು ಕಸಾಯಿಖಾನೆಗೆ ಹೋಗುವುದನ್ನು ತಡೆಯುವ ನಿಟ್ಟಿನಲ್ಲಿ ಯುವಕರು ಉತ್ತಮ ಕಾರ್ಯ ಮಾಡುತ್ತಿದ್ದಾರೆ. ಗೋವುಗಳನ್ನು ಕಸಾಯಿಖಾನೆಗೆ ಕೊಡುವುದನ್ನು ರೈತರು ನಿಲ್ಲಿಸಿದರೆ ಗೋ ಹತ್ಯೆ ತಾನಾಗಿಯೇ ನಿಲುತ್ತದೆ. ಅದಕ್ಕಾಗಿ ರೈತರು ಸಾವಯವ ಕಷಿ ಮಾಡಬೇಕು ಎಂದು ಹೇಳಿದರು.
    ಕನ್ಹೇರಿ ಸಿದ್ಧಗಿರಿಯ ಸಂಸ್ಥಾನದ ಪೀಠಾಧ್ಯಕ್ಷ ಅದೃಶ್ಯ ಕಾಡಸಿದ್ದೇಶ್ವರ ಸ್ವಾಮೀಜಿ ಮಾತನಾಡಿ, ಮನುಷ್ಯನಿಗೆ ಬದುಕಬೇಕೆಂಬ ಇಚ್ಛಾಶಕ್ತಿಯಿದೆ. ಆದರೆ, ಸಾವಿಗೆ ಬೇಕಾದ ಎಲ್ಲ ಕೃತ್ಯ ಮನುಷ್ಯನೇ ಮಾಡುತ್ತಿದ್ದಾನೆ. 2030-34ರಲ್ಲಿ ಭೂಮಿಯ ಅಂತರ್ಜಲಮಟ್ಟ ಕಡಿಮೆಯಾಗಿ ನೀರಿನ ಬದಲಾಗಿ ವಿಷಕಾರಿ ಹೆರಾಯಿನ್ ಬರಲಿದೆ. ಹಾಗಾಗಿ, ನೀರು ಕಡಿಮೆಯಾಗುವ ಮುನ್ನವೇ ಎಚ್ಚರಗೊಳ್ಳಬೇಕಿದೆ ಎಂದರು.

    ಸಾವಯವ ಕೃಷಿಯನ್ನು ಚಳವಳಿಯನ್ನಾಗಿ ಮಾಡಬೇಕಾಗಿದೆ. ಪ್ರತಿ ಗ್ರಾಮಗಳಲ್ಲಿ ಪ್ರಗತಿಪರ ರೈತರು, ಕುಶಲ ಕರ್ಮಿಗಳು ಹಾಗೂ ಪಾರಂಪರಿಕವಾಗಿ ಕಲೆ ಉಳಿಸಿಕೊಂಡು ಬರುವವರನ್ನು ಸನ್ಮಾನ ಮಾಡುವ ಕಾರ್ಯ ಮಾಡಬೇಕಾಗಿದೆ. ಗೋವು ಸಾಕಣೆ ಬಗ್ಗೆ ಜನರಲ್ಲಿ ತಿಳಿವಳಿಕೆ ನೀಡಿದ ಪರಿಣಾಮ ಕೊಲ್ಲಾಪುರ ಜಿಲ್ಲೆಯಲ್ಲಿ 50 ಸಾವಿರಕ್ಕೂ ಹೆಚ್ಚು ದೇಸಿ ಗೋವುಗಳ ಸಂಖ್ಯೆ ಹೆಚ್ಚಾಗಿದೆ ಎಂದರು.

    ಬಾಗಲಕೋಟೆ ತೋಟಗಾರಿಕೆ ವಿವಿ ಉಪಕುಲಪತಿ ಡಾ ಎನ್.ಕೆ.ನಾಯಕ, ಧಾರವಾಡ ಕೃಷಿ ವಿವಿಯ ಡಾ. ಪಿ.ಎಲ್. ಪಾಟೀಲ, ಉಪಕುಲಪತಿ ಡಾ. ಎನ್.ಕೆ.ಹೆಗಡೆ, ಸುತ್ತೂರಿನ ಕಿರಿಯ ಶ್ರೀ ಜಯರಾಜೇಂದ್ರ ಸ್ವಾಮೀಜಿ, ಹುಕ್ಕೇರಿಯ ಡಾ. ಚಂದ್ರಶೇಖರ ಸ್ವಾಮೀಜಿ, ಸಾವಯವ ಪರಿವಾರದ ಅಧ್ಯಕ್ಷ ದತ್ತಾತ್ರೇಯ ರಾಮಚಂದ್ರ ಹೆಗಡೆ, ಸುಭಿಕ್ಷ ಆರ್ಗಾನಿಕ್ ಮಲ್ಟಿಸ್ಟೇಟ್ ಕೋ ಆಪರೇಟಿವ್ ಸೊಸೈಟಿ ಅಧ್ಯಕ್ಷ ಆನಂದ ಇದ್ದರು. ಸಾವಯವ ಕೃಷಿ ಪರಿವಾರದ ರಾಜ್ಯ ಕಾರ್ಯದರ್ಶಿ ಬೋಜ ಎನ್.ಆರ್. ಸ್ವಾಗತಿಸಿದರು. ಗಣೇಶ ಕೊನೋಡಿ ನಿರೂಪಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts