More

    ಆಲಿಯಾ ಭಟ್​- ರಣವೀರ್ ಸಿಂಗ್ ಲವ್​ಸ್ಟೋರಿ!

    ‘ಗಲ್ಲಿ ಬಾಯ್’ ಸಿನಿಮಾ ಮೂಲಕ ಮೋಡಿ ಮಾಡಿದ್ದ ರಣವೀರ್ ಸಿಂಗ್ ಮತ್ತು ಆಲಿಯಾ ಭಟ್ ಇದೀಗ ಮತ್ತೆ ಒಂದಾಗುತ್ತಿದ್ದಾರೆ. ಈ ಬಾರಿ ಪಕ್ಕಾ ಲವ್​ಸ್ಟೋರಿ ಕಥಾಹಂದರದ ಸಿನಿಮಾ ಮೂಲಕ ಇವರಿಬ್ಬರು ಆಗಮಿಸಲಿದ್ದಾರೆ. ವಿಶೇಷ ಏನೆಂದರೆ, ಆ ಪ್ರೇಮಕಥೆಯುಳ್ಳ ಚಿತ್ರವನ್ನು ಕರಣ್ ಜೋಹರ್ ನಿರ್ದೇಶನ ಮಾಡಲಿದ್ದಾರೆ! ಈ ಹಿಂದೆ 2016ರಲ್ಲಿ ರಣಬೀರ್ ಕಪೂರ್, ಅನುಷ್ಕಾ ಶರ್ಮಾ ಮತ್ತು ಐಶ್ವರ್ಯಾ ರೈ ನಟನೆಯ ‘ಯೇ ದಿಲ್ ಹೈ ಮುಷ್ಕಿಲ್’ ಚಿತ್ರಕ್ಕೆ ನಿರ್ದೇಶನ ಮಾಡಿದ್ದ ಕರಣ್ ಜೋಹರ್, ಇದೀಗ ಸುದೀರ್ಘ 5 ವರ್ಷಗಳ ಬಳಿಕ ಮತ್ತೆ ಪೂರ್ಣ ಪ್ರಮಾಣದ ಸಿನಿಮಾ ನಿರ್ದೇಶನಕ್ಕೆ ವಾಪಾಸಾಗಿ ರಣವೀರ್ ಮತ್ತು ಆಲಿಯಾ ಅವರನ್ನು ಆಯ್ದುಕೊಂಡಿದ್ದಾರೆ.

    ಇನ್ನುಳಿದಂತೆ ಈ ಚಿತ್ರದ ಶೀರ್ಷಿಕೆ ಏನು? ಯಾವಾಗಿನಿಂದ ಶುರು ಎಂಬಿತ್ಯಾದಿ ಪ್ರಶ್ನೆಗೆ ಮುಂದಿನ ದಿನಗಳಲ್ಲಿ ಮಾಹಿತಿ ನೀಡಲಿದೆಯಂತೆ ತಂಡ. ಈ ಸಿನಿಮಾಕ್ಕೂ ಮುನ್ನ ‘ತಕ್ತ್’ ಚಿತ್ರ ಘೋಷಣೆ ಮಾಡಿದ್ದ ಕರಣ್, ಅದರಲ್ಲಿ ರಣವೀರ್ ಸಿಂಗ್, ಆಲಿಯಾ, ಅನಿಲ್ ಕಪೂರ್, ಕರೀನಾ ಕಪೂರ್, ವಿಕ್ಕಿ ಕೌಶಾಲ್ ಸಹ ನಟಿಸಲಿದ್ದಾರೆ ಎಂದು ಘೋಷಣೆ ಮಾಡಿದ್ದರು. ಆದರೆ, ಸದ್ಯಕ್ಕೆ ಆ ಪ್ರಾಜೆಕ್ಟ್ ಬದಿಗಿಟ್ಟು, ಈ ಚಿತ್ರವನ್ನು ಕೈಗೆತ್ತಿಕೊಂಡಿದ್ದಾರೆ ಕರಣ್. -ಏಜೆನ್ಸೀಸ್

    ಬ್ಯಾಂಕಾಕ್​ನಲ್ಲಿ ಆಶಿಕಾ ಕಾಣೆ!; ಬಟ್ಟೆ ನೋಡಿ ಸ್ವಭಾವ ಅಳೆಯಬೇಡಿ…

    ಬ್ರಾಹ್ಮೀ ಮುಹೂರ್ತದಲ್ಲಿ ಶುರುವಾಯ್ತು ‘ಶುಗರ್​ ಫ್ಯಾಕ್ಟರಿ’

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts