More

    ಆಮಿಷಗಳಿಗೆ ಒಳಗಾಗದೆ ನಿರ್ಭೀತಿಯಿಂದ ಮತ ಚಲಾಯಿಸಿ

    ಅಳವಂಡಿ: ಮತದಾರರು ಯಾವುದೇ ಆಸೆ-ಆಮಿಷಗಳಿಗೆ ಒಳಗಾಗದೆ ನಿರ್ಭೀತಿಯಿಂದ ಮತ ಚಲಾಯಿಸಬೇಕು ಎಂದು ಪಿಎಸ್‌ಐ ಹನುಮಂತಪ್ಪ ನಾಯಕ ತಿಳಿಸಿದರು.

    ಸಮೀಪದ ನಿಲೋಗಿಪುರದಲ್ಲಿ ಪೊಲೀಸರು ಹಾಗೂ ಸಿಆರ್‌ಪಿಎಫ್ ಯೋಧರಿಂದ ಗುರುವಾರ ನಡೆದ ಮತದಾನ ಜಾಗೃತಿ ಪಥ ಸಂಚಲನದಲ್ಲಿ ಮಾತನಾಡಿದರು.

    ಸಿಆರ್‌ಪಿಎಫ್ ಕೊಯಮತ್ತೂರು ಬೆಟಾಲಿಯನ್ ಯೋಧರು ಗ್ರಾಮ ಪ್ರವೇಶಿಸುತ್ತಿದ್ದಂತೆ ಮಹಿಳೆಯರು ಕಳಸ ಬೆಳಗಿ ಪುಷ್ಪಾರ್ಪಣೆಯೊಂದಿಗೆ ಸ್ವಾಗತಿಸಿದರು. ನಿಮ್ಮ ಮತ ಶ್ರೇಷ್ಠವಾದುದು. ಇದಕ್ಕೆ ದೇಶವನ್ನು ನಡೆಸುವ ಶಕ್ತಿ ಇದೆ. ಮತವನ್ನು ಹಣಕ್ಕೆ ಮಾರಿಕೊಳ್ಳಬೇಡಿ.

    ಇದನ್ನೂ ಓದಿ: ಸಿಆರ್​ಪಿಎಫ್​ ಕ್ಯಾಂಪಸ್​ನಲ್ಲೇ ಪ್ರೇಯಸಿಗೆ ತಾಳಿಕಟ್ಟಿದ ಪೇದೆ; ಮದ್ವೆ ಬೆನ್ನಲ್ಲೇ ಯುವತಿಗೆ ಬಿಗ್​ ಶಾಕ್​!

    ಚುನಾವಣೆಯಲ್ಲಿ ಯಾವುದೇ ರೀತಿಯ ಅವ್ಯವಹಾರ ಕಂಡು ಬಂದಲ್ಲಿ ಪೊಲೀಸ್ ಠಾಣೆಗೆ ತಿಳಿಸಿ. ಗುಂಪು, ಗಲಾಟೆಗೆ ಅವಕಾಶ ಕೊಡಬೇಡಿ. ಮತದಾನಕ್ಕೆ ಯಾರಾದರು ಅಡ್ಡಿಪಡಿಸಿದರೆ ಅವರ ವಿರುದ್ಧ ಪ್ರಕರಣ ದಾಖಲಿಸಲಾಗುವುದು ಎಂದು ಪಿಎಸ್‌ಐ ಹೇಳಿದರು.

    ಸಿಆರ್‌ಪಿಎಫ್‌ನ ಪಿಐಗಳಾದ ದೀನದಯಾಳ, ದುನಿಚಂದ, ಪೊಲೀಸ್ ಇಲಾಖೆಯ ಅಮರೇಗೌಡ, ಸಂತೋಷ, ಕನಕಪ್ಪ, ಪ್ರಮುಖರಾದ ಆನಂದರಡ್ಡಿ ರಡ್ಡೇರ, ಪರಮೇಶ್ವರ ಹಿರೇಮಠ, ಅಂದಪ್ಪ ಮಂಡಲಗೇರಿ, ಯಲ್ಲಪ್ಪ ಮುಕ್ಕಣ್ಣವರ, ರಾಮನಗೌಡ ಗೌಡ್ರ, ಹಂಚಿನಾಳಪ್ಪ ಕವಲೂರು, ರಾಮಣ್ಣ ಸಣ್ಣದ್ಯಾವಣ್ಣವರ, ಹನುಮೇಶ ಬಾಲಣ್ಣವರ, ಲಕ್ಷ್ಮಣ ನಿಂಗಾಪುರ, ಹನುಮಪ್ಪ ಕೇಸಲಾಪುರ, ರವಿ ಮಾಡಗೇರಿ, ಶರಣಪ್ಪ ಅಕ್ಕಸಾಲಿ ಮತ್ತಿತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts