More

    ಗುರುಗಳ ಮಾರ್ಗದರ್ಶನದಲ್ಲಿ ಜೀವನ ಸಾಗಿಸಿ

    ಅಳವಂಡಿ: ಗುರು-ಶಿಷ್ಯರ ಪರಂಪರೆ ಭಾರತೀಯ ಸಮಾಜದಲ್ಲಿ ಒಂದು ಅವಿಭಾಜ್ಯ ಅಂಗವಾಗಿದೆ. ಗುರು ಎಂದರೆ ವ್ಯಕ್ತಿ ಅಲ್ಲ ಅಜ್ಞಾನದಿಂದ ಜ್ಞಾನದ ಕಡೆ ಕರೆದೊಯ್ಯುವ ಶಕ್ತಿ ಎಂದು ಅಳವಂಡಿ ಶ್ರೀ ಸಿದ್ದೇಶ್ವರ ಮಠದ ಶ್ರೀಮರುಳಾರಾಧ್ಯ ಸ್ವಾಮೀಜಿ ತಿಳಿಸಿದರು.

    ಸಮೀಪದ ಮೈನಹಳ್ಳಿ ಗ್ರಾಮದಲ್ಲಿ ಶ್ರೀ ಸದ್ಗುರು ವೀರಭದ್ರಸ್ವಾಮಿಗಳ 37ನೇ ಪುಣ್ಯಾರಾಧನೆ ಹಾಗೂ ಲಘು ರಥೋತ್ಸವ ಲೋಕಾರ್ಪಣೆ ನಿಮಿತ್ತ ಆಯೋಜಿಸಿದ್ದ ಧಾರ್ಮಿಕ ಸಭೆ ಉದ್ದೇಶಿಸಿ ಶನಿವಾರ ಮಾತನಾಡಿದರು.

    ಮಾನವನನ್ನು ಸೃಷ್ಠಿಸುವುದು ದೇವರ ಕೆಲಸವಾದರೆ, ಮಾನವನನ್ನು ಉತ್ತಮನನ್ನಾಗಿ ಪರಿವರ್ತಿಸುವವರು ಗುರುಗಳು. ಕಾರಣ ಗುರುಗಳ ಮಾರ್ಗದರ್ಶನದಲ್ಲಿ ಜೀವನ ನಡೆಸಿ ಎಂದರು.

    ಹಿರೇಸಿಂದೋಗಿಯ ಕಪ್ಪತ್ತಮಠದ ಶ್ರೀ ಚಿದಾನಂದ ಸ್ವಾಮೀಜಿ ಮಾತನಾಡಿ, ಹರ ಮುನಿದರು ಗುರು ಕಾಯುವನು. ನೀವು ಜೀವನದಲ್ಲಿ ಸಾಧಿಸಬೇಕಾದ ಸಾಧನೆಗೆ ಸ್ಫೂರ್ತಿ ತುಂಬುವ ಹಾಗೂ ಬದುಕಿನ ಹಾದಿ ತೋರುವ ಗುರುವನ್ನು ಸ್ಮರಿಸಿ. ಗುರಿ ಮುಂದೆ ಇದ್ದರೆ ಹಿಂದೆ ನಿಮ್ಮ ಗುರು ಇರುತ್ತಾರೆ ಅವರು ಸದಾ ಶಿಷ್ಯರ ಶ್ರೇಯಸ್ಸನ್ನು ಬಯಸುತ್ತಾರೆ. ಅಜ್ಞಾನದಿಂದ ಜ್ಞಾನದ ಕಡೆ, ಕತ್ತಲೆಯಿಂದ ಬೆಳಕಿನೆಡೆ, ಭಯದಿಂದ ನಿರ್ಭಯದ ಕಡೆಗೆ ಕರೆದುಕೊಂಡು ಹೋಗುವ ಅದ್ಭುತ ಶಕ್ತಿ ಗುರುಗಳಿಗಿದ್ದು, ಗುರುಗಳನ್ನು ಭಯ ಭಕ್ತಿಯಿಂದ ಪೂಜಿಸಿ ಗೌರವಿಸಿ ಎಂದರು.

    ಗ್ರಾಮಸ್ಥರಾದ ಕೊಟ್ರೇಶ ಅಂಗಡಿ, ಬಸವರಡ್ಡೆಪ್ಪ ಹಳ್ಳಿಕೇರಿ, ಶಿವಣ್ಣ ಹ್ಯಾಟಿ, ಮಹಾಂತೇಶ ಪಾಟೀಲ, ಎಚ್.ಎಲ್.ಹಿರೇಗೌಡರ, ಮರಿಶಾಂತವೀರ ಚಕ್ಕಡಿ, ಮಹೇಂದ್ರ ಮೂಲಿಮನಿ, ಅಜಯ ಪಾಟೀಲ, ಚನ್ನಪ್ಪ ಹಳ್ಳಿ, ಈಶಯ್ಯ ಸಾಲಿ, ಮಹಾಬಳೇಶ, ಬಸವಗೌಡ, ಸಕ್ರಡ್ಡಿ ಹ್ಯಾಟಿ, ವೀರಣ್ಣ ಮೂಲಿಮನಿ, ಬೋಜಪ್ಪ ಹಳ್ಳಿ, ಕೊಟ್ರಯ್ಯ, ಈಶಪ್ಪ, ಮಹೇಂದ್ರ ಕುರಡಗಿ, ಬಸಯ್ಯ, ದೇವಪ್ಪ, ಉಮೇಶ, ದೊಡ್ಡಬಸಪ್ಪ, ಗ್ಯಾನಪ್ಪ, ಈರಪ್ಪ, ಬನ್ನೆಪ್ಪ, ಯಲ್ಲಪ್ಪ, ರಮೇಶ, ಗುರುಶಾಂತಪ್ಪ, ವಿರುಪಣ್ಣ, ಸಿದ್ದಪ್ಪ ಬಾಸಿಂಗದಾರ, ಬಸವರಾಜ, ಅರುಣಕುಮಾರ, ಬಾಬು, ವೀರಯ್ಯ, ಗುರುಪಾದಪ್ಪ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts