More

    ಶತಮಾನದಿಂದ ರಥೋತ್ಸವ ಆಚರಣೆ

    ಅಳವಂಡಿ: ಗ್ರಾಮದ ಆರಾಧ್ಯ ದೈವ ಶ್ರೀ ಸಿದ್ದೇಶ್ವರ ಜಾತ್ರೆ ಫೆ.21ರಂದು ಅದ್ದೂರಿಯಾಗಿ ಜರುಗಲಿದ್ದು, ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಶ್ರೀಸ್ವಾಮಿ ಕೃಪೆಗೆ ಪಾತ್ರರಾಗಬೇಕು ಎಂದು ಶ್ರೀ ಮರುಳಾರಾಧ್ಯ ಶಿವಾಚಾರ್ಯರು ತಿಳಿಸಿದರು.

    ಗ್ರಾಮದ ಶ್ರೀ ಸಿದ್ದೇಶ್ವರ ಮಠ ಜಾತ್ರೆ ಪ್ರಾರಂಭ ಅಂಗವಾಗಿ ಉತ್ಸವ ಮೂರ್ತಿ ಪಟ್ಟಕ್ಕೆ ಕೂರಿಸುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಶನಿವಾರ ಮಾತನಾಡಿದರು.

    ಶತಮಾನದಿಂದಲೂ ನಡೆಯುತ್ತಿರುವ ಪದ್ಧತಿಯಂತೆ ರಥೋತ್ಸವ ಜರುಗಲಿದೆ. ನಂತರ ಶಿವಾಚಾರ್ಯರ ಅಡ್ಡಪಲ್ಲಕ್ಕಿ ಹಾಗೂ ಮದ್ದು ಸುಡುವ ಹಾಗೂ ಜಾಗೃತಿ ಕಾರ್ಯಕ್ರಮಗಳು ನಡೆಯಲಿವೆ ಎಂದು ತಿಳಿಸಿದರು.

    ಸಿದ್ದೇಶ್ವರ ಉತ್ಸವ ಮೂರ್ತಿಯನ್ನು ಅಲಂಕಾರಿಕ ವಸ್ತುಗಳಿಂದ ಸಿಗರಿಸಿದ ಪಲ್ಲಕ್ಕಿಯಲ್ಲಿರಿಸಿ ವಾದ್ಯ ಮೇಳದೊಂದಿಗೆ ದೇವಸ್ಥಾನ ಸುತ್ತಲು ಪ್ರದಕ್ಷಣೆ ಮಾಡಿ ಗುರುಮಠದ ಪಟ್ಟದ ಕಟ್ಟೆಯ ಮೇಲೆ ಕೂರಿಸಿ ಪೂಜೆ ಸಲ್ಲಿಸಲಾಯಿತು.

    ಪ್ರಮುಖರಾದ ಗುರುಮೂರ್ತಿಸ್ವಾಮಿ ಇನಾಮದಾರ, ಡಾ.ಸಿದ್ದಲಿಂಗಸ್ವಾಮಿ ಇನಾಮದಾರ, ನವೀನ ಇನಾಮದಾರ, ರವಿಶಂಕರ ಇನಾಮದಾರ, ಕುಮಾರಸ್ವಾಮಿ ಇನಾಮದಾರ, ಎ.ಟಿ.ಕಲ್ಮಠ, ದೇವಪ್ಪ, ಭೀಮರಡ್ಡಿ, ಗವಿಸಿದ್ದಪ್ಪ, ರಮೇಶ, ಮಂಜುನಾಥಗೌಡ, ನಾಗಪ್ಪ, ಚಿಕ್ಕವೀರಜ್ಜ, ಜಗನ್ನಾಥರಡ್ಡಿ, ಬಸವರಾಜ, ಅಶೋಕ, ಗಿರೀಶ, ಈಶಪ್ಪ, ಅನ್ವರ್, ಗವಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts