More

    ರೇಣುಕಾಚಾರ್ಯರ ಸಮಾನತೆ ಪರಿಕಲ್ಪನೆ ಸಮಾಜಕ್ಕೆ ಮಾದರಿ

    ಅಳವಂಡಿ: ಸಮಾಜದಲ್ಲಿನ ವರ್ಗೀಕರಣವನ್ನು ದಿಕ್ಕರಿಸಿ ಸಮಾನತೆ ನೆಲೆಗೊಳಿಸುವ ಮೂಲಕ ಸರ್ವರೂ ಒಂದೇ ಎಂಬ ಸಂದೇಶ ಸಾರಿದ ಶ್ರೀ ರೇಣುಕಾಚಾರ್ಯರ ಆದರ್ಶಗಳನ್ನು ಎಲ್ಲರೂ ಪಾಲಿಸಬೇಕು ಎಂದು ಶ್ರೀಸಿದ್ದೇಶ್ವರ ಮಠದ ಶ್ರೀ ಮರುಳಾರಾಧ್ಯ ಶಿವಾಚಾರ್ಯರು ಹೇಳಿದರು.

    ಗ್ರಾಮದಲ್ಲಿ ಶ್ರೀ ರೇಣುಕಾಚಾರ್ಯ ಜಯಂತಿ ಮಹೋತ್ಸವ ಸಮಿತಿ, ವೀರಶೈವ ಜಂಗಮ-ಲಿಂಗಾಯತ ಸಮುದಾಯ ಹಾಗೂ ಗ್ರಾಮಸ್ಥರ ಸಹಯೋಗದಲ್ಲಿ ಸದ್ಗುರು ಶ್ರೀ ರೇಣುಕಾಚಾರ್ಯ ಜಯಂತಿ ಅಂಗವಾಗಿ ಹಮ್ಮಿಕೊಂಡಿದ್ದ ಮೆರವಣಿಗೆ ಕಾರ್ಯಕ್ರಮ ಉದ್ದೇಶಿಸಿ ಸೋಮವಾರ ಮಾತನಾಡಿದರು.

    ರೇಣುಕಾಚಾರ್ಯರ ಸಮಾನತೆ ಪರಿಕಲ್ಪನೆ ಇಂದಿನ ಸಮಾಜಕ್ಕೆ ಮಾದರಿಯಾಗಿದೆ. ಜೀವ ಶಿವನಾಗುವ, ಮಾನವ ಮಹದೇವನಾಗುವ ಮಹಾ ಸಿದ್ಧಾಂತವನ್ನು ಅಗಸ್ತ್ಯ ಮುನಿಗೆ ಬೋಧಿಸುವ ಮೂಲಕ ಆತನನ್ನು ಮಹಾಮುನಿಯನ್ನಾಗಿಸಿದ್ದಾರೆ. ಭಗವಂತನ ದೃಷ್ಟಿಯಲ್ಲಿ ಹೆಣ್ಣು-ಗಂಡೆಂಬ ಭೇದವಿಲ್ಲ ಎಂಬುದನ್ನು ಸಾಬೀತುಪಡಿಸಿ ಜಗ ಮೆಚ್ಚಿದ ಮಹಾಗುರುಗಳಾಗಿದ್ದಾರೆ ಎಂದರು.

    ಅದ್ದೂರಿ ಮೆರವಣಿಗೆ: ತಳಿರು-ತೋರಣ, ಹೂಗಳಿಂದ ಸಿಂಗರಿಸಿದ್ದ ತೆರೆದ ವಾಹನದಲ್ಲಿ ಶ್ರೀ ರೇಣುಕಾಚಾರ್ಯರ ಭಾವಚಿತ್ರವಿರಿಸಿ ಪೂರ್ಣಕುಂಭ, ಗೊರ್ಲೆಕೊಪ್ಪ ಗ್ರಾಮದ ಕತ್ತಿ ಬಸವೇಶ್ವರ ಕರಡಿ ಮಜಲು, ಮುಂಡರಗಿಯ ವೀರಗಾಸೆ ಹಾಗೂ ನಂದಿಕೋಲು ತಂಡದೊಂದಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಲಾಯಿತು. ನಂತರ ಅನ್ನ ಸಂತರ್ಪಣೆ ಕಾರ್ಯಕ್ರಮ ನಡೆಯಿತು.

    ಪ್ರಮುಖರಾದ ಗುರುಮೂರ್ತಿ ಸ್ವಾಮೀಜಿ, ಡಾ. ಸಿದ್ದಲಿಂಗಸ್ವಾಮಿ ಇನಾಮದಾರ, ಪ್ರಕಾಶ ಸ್ವಾಮಿ, ಸಿದ್ದಲಿಂಗಸ್ವಾಮಿ, ರಾಕೇಶ, ಜಿ.ಎಸ್.ಬೂಸನೂರಮಠ, ವೀರಭದ್ರಯ್ಯ ಶಿರೂರಮಠ, ಕಾಶಯ್ಯ ಸಶಿಮಠ, ಮಲ್ಲಯ್ಯ ಕಾಶಿಮಠ, ಮಂಜುನಾಥ ಹಿರೇಮಠ, ತೋಟಯ್ಯ ಅರಳೆಲೆಮಠ, ಚಂದ್ರಯ್ಯ ವಿಭೂತಿಮಠ, ಗಂಗಾಧರಯ್ಯ, ನಾಗರಾಜ ಅರಳೆಲೆಮಠ, ಸಿದ್ದಲಿಂಗಯ್ಯ ಗೊರ್ಲೆಕೊಪ್ಪ, ವಿಶ್ವನಾಥ, ಪ್ರಕಾಶಸ್ವಾಮಿ ಶರಭಯ್ಯನಮಠ, ಕೊಟ್ರೇಶ ದೊಡ್ಡಮನಿ, ಶಿವು ಪೂಜಾರ, ಶಿವದೇವಶಾಸ್ತ್ರಿ, ಭರಮಪ್ಪ, ಗುರು, ಅನ್ವರ್, ಮಲ್ಲಪ್ಪ, ರೇಣುಕಪ್ಪ, ಹನುಮಂತ ಮತ್ತಿತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts