More

    ಬೌದ್ಧಿಕ ವಿಕಸನಕ್ಕೆ ಪ್ರತಿಭಾ ಕಾರಂಜಿ ಸಹಕಾರಿ: ಹಟ್ಟಿ ಗ್ರಾಮದಲ್ಲಿ ಡಿಡಿಪಿಐ ಎಂ.ಎಂ.ರಡ್ಡೇರ ಹೇಳಿಕೆ

    ಅಳವಂಡಿ: ಪ್ರತಿ ಮಗುವಿನಲ್ಲೂ ಒಂದಿಲ್ಲೊಂದು ಪ್ರತಿಭೆ ಇದ್ದೇ ಇರುತ್ತದೆ. ಅದನ್ನು ಗುರುತಿಸಲು ಪ್ರತಿಭಾ ಕಾರಂಜಿ ಉತ್ತಮ ವೇದಿಕೆಯಾಗಿದೆ ಎಂದು ಡಿಡಿಪಿಐ ಎಂ.ಎಂ.ರಡ್ಡೇರ ಹೇಳಿದರು.

    ಹಟ್ಟಿ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಜಿಪಂ, ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ, ಕವಲೂರು ಸಮೂಹ ಸಂಪನ್ಮೂಲ ಕೇಂದ್ರ ಸಹಯೋಗದೊಂದಿಗೆ ಶನಿವಾರ ಏರ್ಪಡಿಸಿದ್ದ ಕವಲೂರು ಕ್ಲಸ್ಟರ್ ಮಟ್ಟದ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳ ಪ್ರತಿಭಾ ಕಾರಂಜಿ ಹಾಗೂ ಕಲೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಮಕ್ಕಳು ಇಂತಹ ಕಾರ್ಯಕ್ರಮದಲ್ಲಿ ತಪ್ಪದೇ ಪಾಲ್ಗೊಳ್ಳಬೇಕು. ಇದರಿಂದ ಬೌದ್ಧಿಕ ವಿಕಸನ ಹೊಂದಲು ಹಾಗೂ ಸೃಜನಾತ್ಮಕ ಕಲೆ ಹೊರಬರಲಿದೆ ಎಂದರು.

    ಮುಖಂಡ ಭರಮಪ್ಪ ನಗರ ಮಾತನಾಡಿ, ವಿದ್ಯಾರ್ಥಿಗಳ ಪ್ರತಿಭೆ ಹೊರತರಲು ಶಿಕ್ಷಕರು ಶ್ರಮಿಸಬೇಕು. ಮಕ್ಕಳು ಗುರುಗಳ ಮಾರ್ಗದರ್ಶನದಲ್ಲಿ ನಡೆದರೆ ಜೀವನದಲ್ಲಿ ಯಶಸ್ಸು ಗಳಿಸಲು ಸಾಧ್ಯ ಎಂದರು. ಗ್ರಾಪಂ ಅಧ್ಯಕ್ಷ ತೋಟಪ್ಪ ಶಿಂಟ್ರ, ಬಿಆರ್‌ಸಿ ಪ್ರಕಾಶ ತಗಡಿನಮನಿ, ಎಸ್ಡಿಎಂಸಿ ಅಧ್ಯಕ್ಷ ಕೊಟ್ರಪ್ಪ ಮಗಡ್ರ, ಪ್ರಾಚಾರ್ಯ ಎಸ್.ಆರ್.ಚಿಗರಿ, ಪ್ರಮುಖರಾದ ಎಸ್.ಬಿ.ಹಿರೇಮಠ, ಎಂ.ಎಂ.ಹೆಬ್ಬಾಳ, ನಾಗರಾಜ ಪೂಜಾರ, ವಿಷ್ಣು ಹಾಳಕೇರಿ, ನಿಂಗನಗೌಡ, ರಾಜೇಸಾಬ್, ಹನುಮಂತ ಡಾವು, ರಣದಪ್ಪ, ಗುಡದಪ್ಪ, ಬಸವರಾಜ, ಸಿಆರ್‌ಪಿ ವೀರೇಶ ಕೌಟಿ, ಮುಖ್ಯಶಿಕ್ಷಕ ವೀರಣ್ಣ ಮಟ್ಟಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts