More

    ಮುರ್ಲಾಪುರ ರಸ್ತೆ ತಾತ್ಕಾಲಿಕ ದುರಸ್ತಿ: ಲೋಕೋಪಯೋಗಿ ಇಲಾಖೆಯಿಂದ ಕಾಮಗಾರಿ

    ಅಳವಂಡಿ: ತಾಲೂಕಿನ ಮುರ್ಲಾಪುರದಿಂದ ಮುಂಡರಗಿಗೆ ಸಂಪರ್ಕಿಸುವ ರಸ್ತೆ ತಾತ್ಕಾಲಿಕ ದುರಸ್ತಿಗೆ ಲೋಕೋಪಯೋಗಿ ಇಲಾಖೆ ಮುಂದಾಗಿದ್ದು, ಗ್ರಾಮಸ್ಥರ ಸಂಚಾರಕ್ಕೆ ಅನುಕೂಲವಾಗಿದೆ.

    ಮೂರು ತಿಂಗಳ ಹಿಂದೆ ಸುರಿದ ಮಳೆಗೆ ಗ್ರಾಮದ ಹತ್ತಿರದ ಹಿರೇಹಳ್ಳ ತುಂಬಿ ಹರಿದಿದ್ದರಿಂದ ಸಂಪರ್ಕ ರಸ್ತೆ 100 ಮೀಟರ್‌ವರೆಗೆ ಸಂಪೂರ್ಣ ಕಿತ್ತು ಹೋಗಿ ಭಾರಿ ಪ್ರಮಾಣದಲ್ಲಿ ಕಪ್ಪು ಮಣ್ಣು, ಕೆಸರು ತುಂಬಿ ಸಂಚಾರ ಬಂದಾಗಿತ್ತು. ಹೀಗಾಗಿ 6 ಕಿಮೀ ಅಂತರದ ಮುಂಡರಗಿಗೆ ವಾಣಿಜ್ಯ ವ್ಯವಹಾರ, ಶಿಕ್ಷಣ ಸೇರಿ ಇತರ ವ್ಯವಹಾರಗಳಿಗೆ ತೆರಳಲು ಸುಮಾರು 25 ಕಿಮೀ ಸುತ್ತಿ ಬಳಸಿ ಪ್ರಯಾಣಿಸಬೇಕಾಗಿತ್ತು. ರಸ್ತೆ ಅವ್ಯವಸ್ಥೆರ ಬಗ್ಗೆ ಆ.28ರಂದು ವಿಜಯವಾಣಿ ‘ಮುರ್ಲಾಪುರ ರಸ್ತೆ ಪೂರ್ಣ ಹಾಳು’ ಶೀರ್ಷಿಕೆಯಡಿ ವಿಶೇಷ ವರದಿ ಪ್ರಕಟಿಸಿತ್ತು. ಇದರಿಂದ ಎಚ್ಚೆತ್ತ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಶನಿವಾರ ತಾತ್ಕಾಲಿಕವಾಗಿ ರಸ್ತೆ ದುರಸ್ತಿ ಕಾಮಗಾರಿ ಕೈಗೊಂಡಿದೆ. ಇದಕ್ಕೆ ಗ್ರಾಮಸ್ಥರು ಕೈಜೋಡಿಸಿದ್ದು ಕಂಡುಬಂತು. ಪತ್ರಿಕೆ ಕಾರ್ಯಕ್ಕೆ ಧನ್ಯವಾದ ತಿಳಿಸಿದರು.

    ರಸ್ತೆ ಹಾಳಾಗಿದ್ದರಿಂದ ಮಕ್ಕಳ ಶಿಕ್ಷಣದ ಮೇಲೆ ಪರಿಣಾಮ ಬೀರಿತ್ತು. ವಾಣಿಜ್ಯ ವ್ಯವಹಾರ ಹಾಗೂ ಆಸ್ಪತ್ರೆಗೆ ತೆರಳಲು ಗ್ರಾಮಸ್ಥರು ಪರದಾಡುವಂತಾಗಿತ್ತು. ಸದ್ಯ ಅಧಿಕಾರಿಗಳು, ತಾತ್ಕಾಲಿಕವಾಗಿ ರಸ್ತೆ ದುರಸ್ತಿಗೆ ಮುಂದಾಗಿದ್ದಾರೆ. ಶಾಶ್ವತ ಪರಿಹಾರಕ್ಕೆ ಕ್ರಮಕೈಗೊಳ್ಳಬೇಕು.
    | ಕೊಟ್ರೇಶ ಮೇಗಳಮನಿ, ಮೈಲಪ್ಪ ಹರಿಜನ ಮುರ್ಲಾಪುರ ಗ್ರಾಮಸ್ಥರು

    ಮಳೆಯಿಂದ ಹಾಳಾಗಿದ್ದ ಮುರ್ಲಾಪುರ ರಸ್ತೆಯನ್ನು ತಾತ್ಕಾಲಿಕವಾಗಿ ದುರಸ್ತಿ ಮಾಡಲಾಗುತ್ತಿದೆ. ಶಾಶ್ವತ ಪರಿಹಾರಕ್ಕೆ ಸಂಬಂಧಿಸಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಶೀಘ್ರವೇ ಕಾಮಗಾರಿ ಕೈಗೊಂಡು, ಸರ್ವಋತು ರಸ್ತೆ ಮಾಡಲಾಗುವುದು.
    | ಶಾಮಣ್ಣ ನಾರಿನಾಳ ಎಇಇ, ಪಿಡಬ್ಲುೃಡಿ, ಕೊಪ್ಪಳ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts