More

    ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಒತ್ತು ನೀಡಿ

    ಅಳವಂಡಿ: ಗ್ರಾಮೀಣ ಭಾಗದಲ್ಲಿ ಬಾಲ್ಯ ವಿವಾಹ, ಬಾಲಕಾರ್ಮಿಕ, ಲಿಂಗ ತಾರತಮ್ಯ ಅನಿಷ್ಟ ಪದ್ಧತಿಗಳನ್ನು ನಿರ್ಮೂಲನೆ ಮಾಡಲು ಎಲ್ಲರೂ ಕೈಜೋಡಿಸಬೇಕು ಎಂದು ಅಂಗನವಾಡಿ ಮೇಲ್ವಿಚಾರಕಿ ರೆಹಮತ್‌ಬೀ ತಿಳಿಸಿದರು.

    ಅನಿಷ್ಟ ಪದ್ಧತಿಗಳನ್ನು ನಿರ್ಮೂಲನೆ ಮಾಡಿ

    ಸಮೀಪದ ಬೋಚನಹಳ್ಳಿ ಗ್ರಾಪಂಯಲ್ಲಿ ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್‌ರಾಜ್ ಇಲಾಖೆ, ಜಿಪಂ, ತಾಪಂ ಸಹಯೋಗದಲ್ಲಿ ಶುಕ್ರವಾರ ಆಯೋಜಿಸಿದ್ದ ಮಹಿಳಾ ಮತ್ತು ಮಕ್ಕಳ ರಕ್ಷಣಾ ಕಾವಲು ಸಮಿತಿ ಸಭೆಯಲ್ಲಿ ಮಾತನಾಡಿದರು. ಬಾಲ್ಯ ವಿವಾಹ ಮಾಡುವುದು ಕಾನೂನಿನ ಪ್ರಕಾರ ಅಪರಾಧವಾಗಿದೆ. ಪಾಲಕರು ಹೆಣ್ಣುಮಕ್ಕಳ ಆರೋಗ್ಯ ಹಾಗೂ ಶಿಕ್ಷಣದ ಬಗ್ಗೆ ಕಾಳಜಿವಹಿಸಬೇಕು ಎಂದರು.

    ಇದನ್ನೂ ಓದಿ: ಕ್ರಿಕೆಟ್​ ದಿಗ್ಗಜ ಸಚಿನ್​ ತೆಂಡುಲ್ಕರ್​ ಹೆಸರಿನಲ್ಲಿದ್ದ ವಿಶ್ವದಾಖಲೆ ಮುರಿದ ಡೇವಿಡ್​ ವಾರ್ನರ್​

    ಕೆಎಚ್‌ಪಿಟಿ ಕ್ಷೇತ್ರ ಸಂಯೋಜಕಿ ಸುಷ್ಮಾ ಸಂಗರಡ್ಡಿ ಮಾತನಾಡಿ, ಪಾಲಕರಲ್ಲಿ ಶಿಕ್ಷಣದ ಕೊರತೆಯಿಂದ ಮಕ್ಕಳನ್ನು ಬಾಲ್ಯ ವಿವಾಹಕ್ಕೆ ದೂಡುತ್ತಿದ್ದಾರೆ. ಬಾಲ ಕಾರ್ಮಿಕ ಪದ್ಧತಿ ಕುರಿತು ಜಾಗೃತಿ ಮೂಡಿಸಬೇಕು ಎಂದು ಹೇಳಿದರು. ಗ್ರಾಪಂ ಕಾರ್ಯದರ್ಶಿ ಅಕ್ಬರ ಮಾತನಾಡಿದರು.
    ಬಾಲ್ಯ ವಿವಾಹ ನಿಷೇಧ ಕುರಿತು ಪ್ರತಿಜ್ಞಾವಿಧಿ ಬೋಧಿಸಲಾಯಿತು. ಪ್ರಮುಖರಾದ ಚನ್ನಪ್ಪ ಕೊಂಡೇನಹಳ್ಳಿ, ಪಕೀರವ್ವ ಮೇಣೆಗಾರ, ಶಿಕ್ಷಕರಾದ ಉಮಾ ಅಂಗಡಿ, ಸುಮಂಗಲಾ ಪಾಟೀಲ, ಎಮ್‌ಬಿಕೆ ವನಜಾಕ್ಷಿ ಸಸಿಮಠ, ಗ್ರಂಥಪಾಲಕ ಬಸವರಾಜ ಕಮಲಾಪುರ, ಆಶಾ ಹುಲಿಗೆವ್ವ, ಅಂಗನವಾಡಿ ಕಾರ್ಯಕರ್ತೆಯರಾದ ರೇಣುಕಾ ಬೀರಿರು, ಲಲಿತಾ, ಹನುಮವ್ವ , ದೇವಮ್ಮ, ಹನುಮೇಶ ಬಂಡಿ, ಶ್ರೀದೇವಿ ಬೆಟಗೇರಿ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts