More

    ಅಕ್ಕಿಲಾರಿ ಬಿಡುವಲ್ಲಿ ಕಾಣದ ಕೈಗಳ ಕೈವಾಡ, ಆರೋಪ

    ದೇವದುರ್ಗ: ಪಟ್ಟಣದ ಎಪಿಎಂಸಿ ಆವರಣದಲ್ಲಿ ಕೆಲದಿನಗಳ ಹಿಂದೆ ಸಿಕ್ಕ ಪಡಿತರ ಅಕ್ಕಿ ಅಕ್ರಮವಾಗಿ ಸಾಗಿಸುತ್ತಿದ್ದ ಲಾರಿ ವಿರುದ್ಧ ಪ್ರಕರಣ ದಾಖಲಿಸದೆ ಬಿಟ್ಟು ಕಳುಹಿಸಲಾಗಿದ್ದು, ಅಧಿಕಾರಿಗಳ ವೈಫಲ್ಯ ಎದ್ದು ಕಾಣುತ್ತಿದೆ. ಕಾಣದ ಕೈಗಳ ಕೈವಾಡವಿದೆ ಎಂದು ಜಯ ಕರ್ನಾಟಕ ಸಂಘಟನೆ ತಾಲೂಕು ಅಧ್ಯಕ್ಷ ಯಲ್ಲಗೌಡ ಕೆ.ಇರಬಗೇರಾ ಆರೋಪಿಸಿದ್ದಾರೆ.

    ಇದನ್ನೂ ಓದಿ: ಅಕ್ರಮವಾಗಿ ಅನ್ನಭಾಗ್ಯ ಅಕ್ಕಿ ಸಾಗಿಸುತ್ತಿದ್ದ ಲಾರಿ ವಶ

    ಸುದ್ದಿಗೋಷ್ಠಿಯಲ್ಲಿ ಸೋಮವಾರ ಮಾತನಾಡಿದರು. ಎಪಿಎಂಸಿ ಆವರಣದಲ್ಲಿ ಒಂದು ಲಾರಿಯಷ್ಟು ಪಡಿತರ ಅಕ್ಕಿ ಅಕ್ರಮವಾಗಿ ಸಾಗಣೆ ಮಾಡುತ್ತಿರುವುದು ಕಂಡುಬಂದಿತ್ತು. ಜಯಕರ್ನಾಟಕ ಸಂಘಟನೆ ಲಾರಿ ಸಮೇತ ಅಕ್ಕಿ ಹಿಡಿದು ಪೊಲೀಸರಿಗೆ ದೂರು ನೀಡಿತ್ತು.

    ದೂರು ನೀಡಿ 12 ದಿನ ಕಳೆದರೂ ಪೊಲೀಸರು ಪ್ರಕರಣ ದಾಖಲಿಸಿಕೊಳ್ಳದೆ ಬೇಜವಾಬ್ದಾರಿ ತೋರಿದ್ದಾರೆ. ಇಲಾಖೆ ಅಧಿಕಾರಿಗಳು ಅಕ್ಕಿ ನಮ್ಮದು ಲಾರಿ ನಮ್ಮದಲ್ಲ ಎಂದು ಬೇಜವಾಬ್ದಾರಿ ಹೇಳಿಕೆ ನೀಡುವ ಮೂಲಕ ಪ್ರಕರಣ ಮುಚ್ಚಿಹಾಕುವ ಯತ್ನ ನಡೆಸಿದ್ದಾರೆ.

    ಆಹಾರ ಇಲಾಖೆ ಅಧಿಕಾರಿಗಳು, ಎಸ್ಪಿ ಸೇರಿ ಸಂಬಂಧಿಸಿ ಎಲ್ಲ ಇಲಾಖೆ ಅಧಿಕಾರಿಗಳಿಗೆ ದೂರು ಸಲ್ಲಿಸಿದರೂ ಪ್ರಕರಣ ದಾಖಲಿಸಿಲ್ಲ. ತನಿಖೆ ಮಾಡುವುದಾಗಿ ಪಿಐ ಅಶೋಕ ಸದಲಗಿ ಹಾರಿಕೆ ಉತ್ತರ ನೀಡಿದ್ದರು. ಲಾರಿ ಬಿಡುವ ಮುನ್ನ ನಮ್ಮ ಗಮನಕ್ಕೆ ತರಬೇಕು ಎಂದು ಮನವಿ ಮಾಡಿದ್ದರೂ ಮೇಲಧಿಕಾರಿಗಳ ಒತ್ತಡಕ್ಕೆ ಮಣಿದು ಪ್ರಕರಣ ದಾಖಲಿಸದೆ ಬಿಟ್ಟುಕಳಿಸಿದ್ದಾರೆ.

    ಅಕ್ರಮ ಅಕ್ಕಿ ಸಾಗಣೆಯಲ್ಲಿ ರಾಜಕೀಯ ನಾಯಕರ ಜತೆಗೆ ಅಧಿಕಾರಿಗಳ ಕೈವಾಡವಿದೆ ಎಂದು ದೂರಿದರು. ಮುಖಂಡರಾದ ಹೇಮರೆಡ್ಡಿ, ರಂಗಯ್ಯ ಸುಂಕೇಶ್ವರಹಾಳ, ಅಮರೇಶ ಚವ್ಹಾಣ್, ಮನೋಹರ ಕಾಂಬ್ಲೆಕರ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts