More

    ಮಾನಸಿಕ ಆರೋಗ್ಯದ ಬಗ್ಗೆ ಕಾಳಜಿವಹಿಸಿ

    ವಿಜಯಪುರ: ಹೆಣ್ಣು ಮಕ್ಕಳು ಮತ್ತು ಗಂಡು ಮಕ್ಕಳಲ್ಲಿ ಆಗುವ ಮಾನಸಿಕ ಬದಲಾವಣೆಗಳು ಸಹಜವಾಗಿ ಬೇರೆಯೇ ಆಗಿರುವುದರಿಂದ ಮಹಿಳೆ ಮತ್ತು ಮಾನಸಿಕ ಆರೋಗ್ಯದ ಬಗ್ಗೆ ಅರಿತುಕೊಳ್ಳುವ ಅವಶ್ಯಕತೆ ಇದೆ ಎಂದು ಬಿಎಲ್‌ಡಿಇ (ಡಿ.ಯು) ಮನೋರೋಗ ವಿಭಾಗದ ಪ್ರಾಧ್ಯಾಪಕ ಡಾ. ಸಂತೋಷ ರಾಮದುರ್ಗ ಹೇಳಿದರು.

    ಇಲ್ಲಿನ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿ ಕ್ಷೇಮಪಾಲನ ನಿರ್ದೇಶನಾಲಯ ಹಾಗೂ ಬಿಎಲ್‌ಡಿಇ (ಡಿ.ಯು) ಮಾನಸಿಕ, ಸಾಮಾಜಿಕ ಆಪ್ತ ಸಮಾಲೋಚನಾ ಸಮಿತಿಯ ವತಿಯಿಂದ ಗುರುವಾರ ಹಮ್ಮಿಕೊಂಡಿದ್ದ ‘ಮಹಿಳೆ ಮತ್ತು ಮಾನಸಿಕ ಆರೋಗ್ಯ’ ಕುರಿತು ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು.

    ಪರೀಕ್ಷೆ ಹತ್ತಿರ ಬಂದಾಗ ವಿದ್ಯಾರ್ಥಿಗಳಲ್ಲಿ ಹುಟ್ಟುವ ಭಯ ಧನಾತ್ಮಕವಾಗಿ ಇದ್ದಾಗ ಭಾರ ಎನಿಸುವುದಿಲ್ಲ. ಆರಂಭಿಕ ಹಂತದಿಂದ, ಕ್ರಮಬದ್ಧವಾಗಿ ಪೂರ್ವ ತಯಾರಿ ಮಾಡಿಕೊಂಡಿದ್ದಲ್ಲಿ ಭಯ ಕಡಿಮೆ ಆಗುತ್ತದೆ. ಒಮ್ಮೆ ಓದಿದ ವಿಷಯ ಕಾಲು ಭಾಗ ಮಾತ್ರ ನೆನಪಿಗೆ ಇರುತ್ತೆ. ಪೂರ್ಣವಾಗಿ ನೆನಪಿಡಲು ಪದೇ ಪದೇ ಮನನ ಮಾಡಿಕೊಳ್ಳಬೇಕು. ಓದಿದ್ದನ್ನು ಕಥೆ ರೂಪದಲ್ಲಿ ನೆನಪಿಟ್ಟುಕೊಳ್ಳುವುದು ಉತ್ತಮ. ಪರೀಕ್ಷೆ ಸಂದರ್ಭದಲ್ಲಿ ಊಟದ ಪದ್ಧತಿ, ನಿದ್ರೆ ಕೂಡ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ನಮ್ಮಲ್ಲಿರುವ ಶಕ್ತಿ ಮತ್ತು ದೌರ್ಬಲ್ಯವನ್ನು ಅರಿತಿರಬೇಕು. ವಿಭಕ್ತ ಕುಟುಂಬದ ಮಕ್ಕಳಿಗೆ ಹೊಂದಾಣಿಕೆ ಕಷ್ಟ ಆಗುವ ಸಾಧ್ಯತೆ ಹೆಚ್ಚಿರುತ್ತದೆ, ಅಂತಹ ಸಂದರ್ಭದಲ್ಲಿ ಆಪ್ತ ಸಮಾಲೋಚನೆಗೆ ಒಳಗಾಗುವುದು ಉತ್ತಮ ಎಂದರು.

    ಬಿಎಲ್‌ಡಿಇ (ಡಿ ಯು) ಯ ಮನೋರೋಗ ವಿಭಾಗದ ಸ್ಥಾನಿಕ ವೈದ್ಯೆ ಡಾ.ಲಕ್ಷ್ಮೀದೇವಿ ಪಾಟೀಲ ಅವರು, ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿ, ಖಿನ್ನತೆ, ಮುಟ್ಟಿನ ಸಮಯದಲ್ಲಿ ಆಗುವ ಸಮಸ್ಯೆಗಳು, ಮುಂಗೋಪವನ್ನು ನಿಯಂತ್ರಿಸುವ ಕ್ರಮಗಳ ಕುರಿತು ಚರ್ಚಿಸಿದರು.
    ಬಿಎಲ್‌ಡಿಇ (ಡಿ.ಯು) ಯ ಮಾನಸಿಕ, ಸಾಮಾಜಿಕ ಆಪ್ತ ಸಮಾಲೋಚನೆ ಸಮಿತಿ ಸದಸ್ಯ ಕಾರ್ಯದರ್ಶಿ ಡಾ. ಲಕ್ಷ್ಮೀ ತೆಲ್ಲೂರ, ಸಮಾಜ ವಿಜ್ಞಾನ ನಿಕಾಯದ ಡೀನ್ ಪ್ರೊ.ಡಿ.ಎಂ.ಮದರಿ, ವಿವಿಯ ವಿವಿಧ ನಿಕಾಯದ ಡೀನರು, ವಿವಿಧ ವಿಭಾಗಗಳ ಮುಖ್ಯಸ್ಥರು, ಪ್ರಾಧ್ಯಾಪಕರು, ಬೋಧಕ ಮತ್ತು ಬೋಧಕೇತರ ಸಿಬ್ಬಂದಿ, ಸಂಶೋಧನಾ ಮತ್ತು ಸ್ನಾತಕೋತ್ತರ ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು. ವಿದ್ಯಾರ್ಥಿ ಕ್ಷೇಮಪಾಲನಾ ನಿರ್ದೇಶನಾಲಯದ ನಿರ್ದೇಶಕಿ ಪ್ರೊ. ವಿಜಯಾ ಬಿ. ಕೋರಿಶೆಟ್ಟಿ ಸ್ವಾಗತಿಸಿದರು. ಸಹಾಯಕ ನಿರ್ದೇಶಕಿ ಅಶ್ವಿನಿ ಕೆ.ಎನ್. ಕಾರ್ಯಕ್ರಮವನ್ನು ನಿರೂಪಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts