More

    ಶರಣ ಸಂಸ್ಕೃತಿಯ ಮೇರುಶಿಖರ ಅಕ್ಕಮಹಾದೇವಿ

    ಬೀರೂರು: ಬಸವಾದಿ ಶರಣರ ಕಾಲಘಟ್ಟದಲ್ಲಿ ಉದಯಿಸಿದ ಧ್ರವತಾರೆ ಅಕ್ಕಮಹಾದೇವಿಯ ಚಿಂತನೆ ಸರ್ವಕಾಲಕ್ಕೂ ಸ್ಮರಣೀಯ ಎಂದು ದಾವಣಗೆರೆ ಕದಳಿ ವೇದಿಕೆ ಜಿಲ್ಲಾಧ್ಯಕ್ಷೆ ಗಾಯತ್ರಿ ವಸದ್ ಅಭಿಪ್ರಾಯಪಟ್ಟರು.

    ಪಟ್ಟಣದ ಅಕ್ಕಮಹಾದೇವಿ ಮಹಿಳಾ ಸಮಾಜದ ಆವರಣದಲ್ಲಿ ಶನಿವಾರ ಆಯೋಜಿಸಿದ್ದ 75ನೇ ವರ್ಷದ ಅಮೃತ ಮಹೋತ್ಸವ ಕಾರ್ಯಕ್ರಮದಲ್ಲಿ ಅಕ್ಕಮಹಾದೇವಿ ವಿಚಾರಧಾರೆ ಕುರಿತು ಮಾತನಾಡಿದರು.
    ಸಾಮಾಜಿಕ ಅಸಮಾನತೆ ನಿವಾರಿಸಲು ವಚನಗಳ ಮೂಲಕ ದಿಟ್ಟ ಹೋರಾಟ ನಡೆಸಿದ ವಚನಗಾರ್ತಿ. ನಡೆ, ನುಡಿಗಳಲ್ಲಿ ಒಂದಾಗಿ ಮೇಲು-ಕೀಳು, ಬಡವ-ಬಲ್ಲಿದ ಎಂಬ ಅಸಮಾನತೆ ಅಳಿಸಿ, ದಾಸೋಹ ಮತ್ತು ಕಾಯಕದ ಮಹತ್ವವನ್ನು ನಾಡಿನಲ್ಲಿ ಪಸರಿಸಿದ ಕೀರ್ತಿ ಅಕ್ಕಮಹಾದೇವಿ ಅವರದು. ಸರಳ ಕನ್ನಡ ಸಾಹಿತ್ಯದ ಮೂಲಕ ವಿಚಾರಗಳ ಆಳವಾದ ಜ್ಞಾನ ಮತ್ತು ಅರಿವಿಗೆ ವಚನಗಳನ್ನು ಬಳಸಿ ಸತ್ಯ, ಶುದ್ಧ ಕಾಯಕ ಬದುಕನ್ನು ರೂಪಿಸಿಕೊಳ್ಳುವಲ್ಲಿ ವಚನಗಳು ಪ್ರೇರಕವಾಗಿವೆ ಎಂದರು.
    ಶಾಲಾ ಸಲಹಾ ಸಮಿತಿ ಅಧ್ಯಕ್ಷೆ ವಿಶಾಲಾ ಷಡಕ್ಷರಪ್ಪ ಮಾತನಾಡಿ, ನಮ್ಮೊಳಗಿನ ಅರಿವನ್ನು ಗುರುತಿಸುವ ಕಲೆ ನಮ್ಮೊಳಗೆ ಬಂದಾಗ ಬದುಕು ಮೌಲ್ಯಯುತವಾಗುತ್ತದೆ. ಮಹಿಳೆ ನಾಲ್ಕು ಗೋಡೆಗಳ ನಡುವಿನಿಂದ ಹೊರಬಂದು ತನ್ನ ಸಾಧನೆಗಳ ಮೂಲಕ ಸಬಲೆಯಾಗಿ ರೂಪುಗೊಳ್ಳಲು ಪ್ರೇರಕವಾಗುವಂತೆ ಅಕ್ಕಮಹಾದೇವಿ ಮಹಿಳಾ ಸಮಾಜ ಕ್ರಿಯಾಶೀಲವಾದ ಕಾರ್ಯಗಳನ್ನು ಮಾಡುತ್ತಿದೆ. ಶಿಕ್ಷಣ, ಸಾಹಿತ್ಯ ಸಂಸ್ಕೃತಿ ಸೇರಿ ಎಲ್ಲ ರಂಗಗಳ ಪ್ರಗತಿಗೆ ಕೈಜೋಡಿಸಿ ತನ್ನ ಕಾಳಜಿ ಪ್ರದರ್ಶಿಸಿದೆ ಎಂದರು.
    ಮಹಿಳಾ ಸಮಾಜದ ಹುಟ್ಟು, ನಡೆದು ಬಂದ ಹಾದಿ, ಚಟುವಟಿಕೆಗಳ ಕುರಿತು ಮಹಿಳಾ ಸಮಾಜದ ಖಜಾಂಚಿ ಕಲ್ಪನಾ ಆನಂದ್ ಪರಿಚಯ ಮಾಡಿಕೊಟ್ಟರು. ಹಿರಿಯ ವಕೀಲೆ ನಿರ್ಮಲಾ ಅವರನ್ನು ಗೌರವಿಸಲಾಯಿತು. ವಿವಿಧ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಶರಣ ಸಂಸ್ಕೃತಿ ಸಂಗಮ ರೂಪಕ ಸಭಿಕರ ಗಮನಸೆಳೆಯಿತು.
    ಅಕ್ಕಮಹಾದೇವಿ ಮಹಿಳಾ ಸಮಾಜ ಅಧ್ಯಕ್ಷೆ ಶೈಲಜಾ ಸದಾಶಿವನ್, ಕಾರ್ಯದರ್ಶಿ ಉಷಾ ಸ್ವಾಮಿ, ನೀತು ವಸಂತ್, ಆಶಾ ಶಶಿಧರ್, ಶರಣೆ ಎಂ.ವಿ.ನಾಗರತ್ನಮ್ಮ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts