More

    ಹೊಸ ವಿಮಾನದ ವಿನ್ಯಾಸ ನೋಡಿದ್ರೆ ಬೆರಗಾಗ್ತೀರಾ! ಆಕಾಶ ಏರ್​​ಲೈನ್​​ ವಿಮಾನದ ಮೊದಲ ಚಿತ್ರ ಹಂಚಿಕೊಂಡ ಸಂಸ್ಥೆ

    ನವದೆಹಲಿ: ವಿಮಾನಯಾನ ಕ್ಷೇತ್ರಕ್ಕೆ ಹೊಸ ವಿಮಾನವೊಂದು ಸೇರ್ಪಡೆಯಾಗಿತ್ತಿದೆ. ಇದರ ವಿನ್ಯಾಸ ಭಾರೀ ಆಕರ್ಷಿಸುತ್ತಿದ್ದು, ಶೀಘ್ರದಲ್ಲೇ ಪ್ರಯಾಣಿಕರಿಗೆ ಸೇವೆ ಆರಂಭಿಸಲಿದೆ. ಹೂಡಿಕೆದಾರ ರಾಕೇಶ್​ ಝುಂಜುನ್​​ವಾಲಾ ಅವರ ಕನಸಿನ ಈ ವಿಮಾನದ ವಿನ್ಯಾಸ ಪೂರ್ಣಗೊಂಡಿದ್ದು, ಮೊದಲ ಚಿತ್ರವನ್ನು ಹಂಚಿಕೊಂಡು ಸಂಭ್ರಮಿಸಿದ್ದಾರೆ.

    ಶೀಘ್ರದಲ್ಲೇ ಸೇವೆ ಆರಂಭಗೊಳಲ್ಲಿದ್ದು, ವಿಮಾನದ ಪೂರ್ಣ ಕೆಲಸ ಮುಗಿದಿದ್ದು, ಸಂಸ್ಥೆಗೆ ಕ್ಯೂಪಿ ಕೋಡ್​​​ ಸಿಕ್ಕಿದ್ದು, ಇನ್ನೇನು ಹಾರಾಟ ಆರಂಭಿಸಲಿದೆ. ಇನ್ನು ನಾವು ಕಾಯುವುದಿಲ್ಲ ಎಂಬ ಶೀರ್ಷಿಕೆಯೊಂದಿಗೆ ಟ್ವೀಟ್​ ಮಾಡಿದ್ದಾರೆ.

    ಪ್ರತಿ ವಿಮಾನಯಾದ ಕ್ಯೂಪಿ ಕೋಡ್​​​ ಸಂಖ್ಯೆ ಪ್ರತ್ಯೇಕವಾಗಿರುತ್ತದೆ. ವಿಮಾನ ಹಾರಾಟ ಪ್ರಾರಂಭಕ್ಕೂ ಮುನ್ನ ನಾಗರಿಕ ವಿಮಾನಯಾನ ಸಚಿವಾಲಯದಿಂದ ಈ ಕೋಡನ್ನು ನೀಡಲಾಗುತ್ತದೆ. ಉದಾಹರಣೆಯಾಗಿ ಇಂಡಿಗೋ 6ಈ, ಗೋ ಫಸ್ಟ್​​ ಜೀ8 ಮತ್ತು ಏರ್​ ಇಂಡಿಯಾ ಎಐ ಕ್ಯೂಪಿ ಕೋಡ್​ ಹೊಂದಿದೆ. ಇದೀಗ ಹೊಸ ವಿಮಾನಯಾನಕ್ಕೂ ಕ್ಯೂಪಿ ಕೋಡ್​ ನೀಡಲಾಗಿದೆ.

    ಸದ್ಯ ಹೊಸ ವಿನ್ಯಾಸದೊಂದಿಗೆ ಬುಲೆಟ್​ ಟ್ರೈನ್​ ಮಾದರಿಯಲ್ಲಿ ಕಾಣುವ ಸುಸಜ್ಜಿತ ವಿಮಾನ ಇನ್ನು ಕೆಲವೇ ದಿನಗಳಲ್ಲಿ ಹಾರಾಟ ನಡೆಸಲಿದ್ದು, ಈ ಹೊಸ ವಿಮಾನ ಯಾವ್ಯಾವ ದೇಶಕ್ಕೆ ಸಂಚರಿಸಲಿದೆ ಎಂಬುದನ್ನು ಶೀಘ್ರದಲ್ಲೇ ಸಂಸ್ಥೆ ಪಟ್ಟಿ ನೀಡಲಿದೆ.

    2021 ನವಂಬರ್​​ 26ರಂದು 72 ಮ್ಯಾಕ್ಸ್​​ ವಿಮಾನ ತಯಾರಿಕೆಗೆ ಬೋಯಿಂಗ್​​ ಸಂಸ್ಥೆಯೊಂದಿಗೆ ಒಪ್ಪಂದ ಮಾಡಿಕೊಂಡಿತ್ತು. ಒಪ್ಪಂದದಂತೆ ವಿಮಾನ ತಯಾರಾಗಿದ್ದು, ಮೊದಲ ಜೂನ್​​ ತಿಂಗಳಲ್ಲಿ ಹಸ್ತಾಂತರ ಮಾಡಲಿದೆ. ಸದ್ಯ ಕೆಲವು ವಿಮಾನಗಳಷ್ಟೇ ಹಾರಾಟ ನಡೆಸಲಿದೆ ಎಂದು ಆಕಾಶ ಸಂಸ್ಥೆ ತಿಳಿಸಿದೆ. (ಏಜೆನ್ಸೀಸ್​​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts