More

    ಅಜಿತ್ ದೋವಲ್​ಗೆ ಭದ್ರತಾ ವೈಫಲ್ಯ, ಎನ್​ಎಸ್​​ಎ ಸೆಕ್ಯುರಿಟಿಯಿಂದ ಮೂವರು ಕಮಾಂಡೋಗಳ ಎತ್ತಂಗಡಿ..

    ನವದೆಹಲಿ: ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಅವರ ಭದ್ರತೆಗೆ ನಿಯೋಜಿಸಿದ್ದ ಮೂವರು ಕಮಾಂಡೋ ಹಾಗೂ ಒಬ್ಬ ಡಿಐಜಿಯನ್ನು ದೋವಲ್ ಅವರ ವಿಐಪಿ ಸೆಕ್ಯೂರಿಟಿಯಿಂದ ತೆಗೆದು ಹಾಕಲಾಗಿದೆ.

    ಎನ್​ಎಸ್​ಎಗೆ ಭದ್ರತೆ ಒದಗಿಸುವಲ್ಲಿ ವೈಫಲ್ಯ ತೋರಿದ ಆರೋಪದ ಮೇಲೆ ಮೂವರು ಕಮಾಂಡೋ ಹಾಗೂ ಒಬ್ಬ ಡೆಪ್ಯೂಟಿ ಇನ್​ಸ್ಪೆಕ್ಟರ್ ಜನರಲ್​ (ಡಿಐಜಿ) ಅವರನ್ನು ವರ್ಗಾವಣೆ ಮಾಡಲಾಗಿದೆ. ಇವರು ಈ ವರ್ಷದ ಫೆಬ್ರವರಿಯಲ್ಲಿ ರಾಷ್ಟ್ರೀಯ ಭದ್ರತೆಗೆ ಧಕ್ಕೆ ತರುವ ರೀತಿಯಲ್ಲಿ ನಡೆದುಕೊಂಡಿದ್ದರಿಂದ ಈ ಕ್ರಮಕೈಗೊಳ್ಳಲಾಗಿದೆ.

    2022ರ ಫೆಬ್ರವರಿಯಲ್ಲಿ ಅಜಿತ್ ದೋವಲ್ ಅವರ ನಿವಾಸದ ಆವರಣದೊಳಕ್ಕೆ ವ್ಯಕ್ತಿಯೊಬ್ಬ ಅತಿಕ್ರಮವಾಗಿ ಪ್ರವೇಶ ಮಾಡಲು ಯತ್ನಿಸಿದ್ದ. ಆತನನ್ನು ಕೊನೆಗೆ ಭದ್ರತಾ ಸಿಬ್ಬಂದಿ ತಡೆದಿದ್ದು, ನಂತರ ದೆಹಲಿ ಪೊಲೀಸರು ಆತನನ್ನು ಬಂಧಿಸಿದ್ದರು. ಆತ ಕೆಂಪು ಬಣ್ಣದ ಎಸ್​ಯುವಿ ವಾಹನದಲ್ಲಿ ಬಂದು, ದೋವಲ್ ಅವರ ದೆಹಲಿ ನಿವಾಸದ ಗೇಟ್​ ದಾಟಿ ನುಗ್ಗಲು ಯತ್ನಿಸಿದ್ದ. ಸಿಐಎಸ್​ಎಫ್​ ಯೋಧರು ಆತನನ್ನು ತಡೆದಿದ್ದರು.

    ಆ ವ್ಯಕ್ತಿ ಬೆಂಗಳೂರಿನ ಶಂತನು ರೆಡ್ಡಿ ಎಂದು ಗುರುತಿಸಲಾಗಿದ್ದು, ಆತ ತನ್ನ ದೇಹದೊಳಗೆ ಚಿಪ್ ಇದ್ದು, ತನ್ನನ್ನು ಹೊರಗಿನಿಂದ ಯಾರೋ ನಿಯಂತ್ರಿಸುತ್ತಿದ್ದಾರೆ ಎಂದು ಹೇಳಿಕೊಂಡಿದ್ದ. ಆದರೆ ಎಂಆರ್​ಐ ಸ್ಕ್ಯಾನ್​ಗೆ ಒಳಪಡಿಸಿದಾಗ ಯಾವುದೇ ಚಿಪ್ ಇಲ್ಲ ಎಂಬುದು ದೃಢಪಟ್ಟಿತ್ತು. ಆತ ನೋಯ್ಡಾದಲ್ಲಿ ಕಾರನ್ನು ಬಾಡಿಗೆಗೆ ಪಡೆದು ಬಂದಿದ್ದು, ಅವನು ಮಾನಸಿಕ ಸಮಸ್ಯೆ ಹೊಂದಿದ್ದ ಎನ್ನಲಾಗಿದೆ.

    ದೋವಲ್​ ನಿವಾಸ ಅತಿಭದ್ರತೆಯ ತಾಣವಾಗಿದ್ದು, ಅಲ್ಲಿಗೆ ಝಡ್​ ಪ್ಲಸ್ ಕೆಟಗರಿ ಭದ್ರತೆ ನೀಡಲಾಗಿದೆ. ಈ ಘಟನೆ ನಡೆದ ಸಂದರ್ಭದಲ್ಲಿ ದೋವಲ್​ ತಮ್ಮ ನಿವಾಸದಲ್ಲೇ ಇದ್ದಿದ್ದು, ಅದೃಷ್ಟವಶಾತ್ ವ್ಯಕ್ತಿ ಸಿಕ್ಕಿಬಿದ್ದಿದ್ದ.

    ರಾಷ್ಟ್ರಪ್ರಶಸ್ತಿ ಪುರಸ್ಕೃತ ಸಿನಿಮಾ ‘ಡೊಳ್ಳು’, ಇದೀಗ ನಟ ಡಾಲಿ ಧನಂಜಯ ಮೂಲಕ ಮತ್ತೆ ಸದ್ದು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts