More

    ಅಜಾತಶತ್ರು ಅಂಗಡಿ ಕೊಡುಗೆ ಅನನ್ಯ

    ಘಟಪ್ರಭಾ: ಯಾವುದೇ ಜಾತಿ ಭೇದ-ಭಾವ ಇಲ್ಲದೆ ಎಲ್ಲ ಸಮಾಜದವರನ್ನು ಆತ್ಮೀಯತೆಯಿಂದ ಕಾಣುತ್ತಿದ್ದ ಸುರೇಶ ಅಂಗಡಿಯವರು ಅಜಾತಶತ್ರುವಾಗಿದ್ದರು. ಕ್ಷೇತ್ರ ಅಭಿವೃದ್ಧಿಯ ಕಹಳೆ ಊದಿದ್ದರು. ಅವರು ಅಭಿವೃದ್ಧಿ ಕಾರ್ಯದಿಂದ ಜನಮಾನಸದಲ್ಲಿ ನೆಲೆಯಾಗಿರುತ್ತಾರೆ ಎಂದು ಬಿಜೆಪಿ ಹಿರಿಯ ಕಾರ್ಯಕರ್ತ ಜಿ.ಎಸ್.ರಜಪೂತ ಹೇಳಿದರು.

    ಸ್ಥಳೀಯ ರೈಲ್ವೆ ನಿಲ್ದಾಣದ ಆವರಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಶ್ರದ್ಧಾಂಜಲಿ ಸಭೆಯಲ್ಲಿ ಅವರು ಮಾತನಾಡಿ ಜನರ ಪ್ರೀತಿ, ವಿಶ್ವಾಸಕ್ಕೆ ಹೆಸರಾಗಿದ್ದ ಸುರೇಶ ಅಂಗಡಿಯವರು ಸತತ ನಾಲ್ಕು ಬಾರಿ ಬೆಳಗಾವಿ ಲೋಕಸಭಾ ಕ್ಷೇತ್ರದಿಂದ ಚುನಾಯಿತರಾಗಿದ್ದರು. ಕ್ಷೇತ್ರಕ್ಕೆ ಅವರು ಗಮನಾರ್ಹ ಕೊಡುಗೆ ನೀಡಿದ್ದಾರೆ ಎಂದರು.

    ಹಿರಿಯ ಕಾರ್ಯಕರ್ತ ಸುರೇಶ ಪಾಟೀಲ ಮಾತನಾಡಿ, ಸಮಸ್ಯೆ ಎಂದು ಯಾರೇ ಸಂಪರ್ಕಿಸಿದರೂ ತಕ್ಷಣವೇ ಸ್ಪಂದಿಸುತ್ತಿದ್ದ ಅಂಗಡಿಯವರ ಒಡನಾಟ ಎಂದಿಗೂ ಮರೆಯಲಾಗದು. ಸಮಾಜದ ಯಾವುದೇ ಕೆಲಸವನ್ನು ತಡಮಾಡದೆ ಕಾರ್ಯಾರಂಭ ಮಾಡುತ್ತಿದ್ದ ಅವರ ಅಭಿವೃದ್ಧಿಯ ಹಂಬಲ ಇಂದಿನ ಯುವ ಜನತೆಗೆ ಮಾದರಿಯಾಗಿದೆ ಎಂದರು.

    ಕಾರ್ಯಕ್ರಮದಲ್ಲಿ ಬಸವರಾಜ ಹುದ್ದಾರ, ಡಿ.ಎಂ. ದಳವಾಯಿ, ಪ್ರಮೋದ ಜೋಶಿ, ಎಸ್.ವಂದನಾ ಕತ್ತಿ, ಚಿರಾಕಲಿ ಮಕಾನದಾರ, ಈಶ್ವರ ಮಟಗಾರ, ಪ್ರವೀಣ ಚುನಮುರಿ, ಮಹಾಂತೇಶ ಹಳ್ಳಿ, ಪ್ರಕಾಶ ಗಾಯಕವಾಡ, ಅರವಿಂದ ಬಡಕುಂದ್ರಿ, ಸುರೇಶ ಪೂಜಾರಿ, ಮಲ್ಲು ಕೋಳಿ, ರಾಜು ಕತ್ತಿ, ಸಲೀಂ ಕಬ್ಬೂರ, ಮಲ್ಲಪ್ಪ ಹುಕ್ಕೇರಿ, ಮಲ್ಲಿಕಾರ್ಜುನ ತುಕ್ಕಾನಟ್ಟಿ, ಸುಧೀರ ಜೋಡಟ್ಟಿ, ಕಲ್ಲಪ್ಪ ಕೊಂಕಣಿ,ಬಸವರಾಜ ಹತ್ತರವಾಟ, ಕೆಂಪಣ್ಣ ಕರೋಶಿ, ರಾಜು ಪಂಚಾಳ ಸೇರಿದಂತೆ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts