More

    ಮಂಗಳೂರು ಏರ್‌ಪೋರ್ಟ್ ಮೂರು ವರ್ಷ ಜಂಟಿ ನಿರ್ವಹಣೆ

    ವೇಣುವಿನೋದ್ ಕೆ.ಎಸ್. ಮಂಗಳೂರು
    ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನ.1ರಿಂದ ಅದಾನಿ ಏರ್‌ಪೋರ್ಟ್ಸ್ ಎಂದು ಬದಲಾಗಿದ್ದರೂ, ಸದ್ಯ ಅಲ್ಲಿನ ಹಾಲಿ ಸಿಬಂದಿಗಳಿಗೆ ಎತ್ತಂಗಡಿಯ ಭಯವಿಲ್ಲ. ಮುಂದಿನ 50 ವರ್ಷ ಪೂರ್ತಿ ಅದಾನಿ ಇಲ್ಲಿ ಕಾರ್ಯಭಾರ ನಡೆಸಿದರೂ ಸರ್ಕಾರ ಅಧೀನದ ಭಾರತೀಯ ವಿಮಾನ ನಿಲ್ದಾಣಗಳ ಪ್ರಾಧಿಕಾರದ ಸಿಬ್ಬಂದಿಗಳಿಗೆ ಸದ್ಯ ಎತ್ತಂಗಡಿಯಾಗುವಂತಹ ಯಾವುದೇ ಸಾಧ್ಯತೆಗಳಿಲ್ಲ.

    ಅದಾನಿ ಹಾಗೂ ಎಎಐ ಮಾಡಿಕೊಂಡಿರುವ ಒಪ್ಪಂದದಂತೆ ಮುಂದಿನ ಒಂದು ವರ್ಷ ಕಾಲ ಜಂಟಿ ನಿರ್ವಹಣಾ ಯೋಜನೆಯಡಿ ಮಂಗಳೂರು ಏರ್‌ಪೋರ್ಟ್ ಕೆಲಸ ಮಾಡಲಿದೆ. ಈಗಿರುವ ಸಿಬ್ಬಂದಿ ಅದಾನಿ ಸಿಬ್ಬಂದಿಯೊಂದಿಗೆ ಸೇರಿಕೊಂಡು ಕೆಲಸ ಮಾಡುತ್ತಾರೆ. ಮೂರು ವರ್ಷದವರೆಗೂ ಸಿಬ್ಬಂದಿ ಇರಬೇಕಾಗುತ್ತದೆ. ಮುಂದೆ ಅವರನ್ನು ನಿಧಾನವಾಗಿ ಪ್ರಾಧಿಕಾರದ ಅಡಿ ಬರುವ ಇತರ ಏರ್‌ಪೋರ್ಟ್‌ಗಳಿಗೆ ವರ್ಗಾಯಿಸಲಾಗುತ್ತದೆ.
    ಏಕಾಏಕಿಯಾಗಿ ಯಾರನ್ನೂ ತೆಗೆದುಹಾಕುವ ಸಾಧ್ಯತೆಗಳು ಇಲ್ಲ ಎನ್ನುವುದು ಅಧಿಕಾರಿಯೊಬ್ಬರು ನೀಡಿದ ಮಾಹಿತಿ. ಅದಾನಿಯವರಿಗೆ ದೇಶದಲ್ಲಿ ಸಿಕ್ಕಿರುವ ಮೊದಲ ವಿಮಾನ ನಿಲ್ದಾಣ ಮಂಗಳೂರು. ಅವರಿಗೆ ಈ ಹಿಂದೆ ಈ ಕೆಲಸ ನಿರ್ವಹಿಸಿದ ಅನುಭವ ಇಲ್ಲ. ಹಾಗಾಗಿ ಪ್ರಾಧಿಕಾರದ ಅಧಿಕಾರಿ, ಸಿಬ್ಬಂದಿಯೊಂದಿಗೆ ಕೆಲಸ ಮಾಡುತ್ತಾರೆ.

    ನೇಮಕಾತಿ ಕ್ಷಿಪ್ರ: ಸದ್ಯ ಅದಾನಿ ವತಿಯಿಂದ ವಿಮಾನ ನಿಲ್ದಾಣಕ್ಕೆ ಹಂತ ಹಂತವಾಗಿ ನೇಮಕಾತಿ ನಡೆಸಲಾಗುತ್ತಿದೆ. ಟರ್ಮಿನಲ್ ನಿರ್ವಹಣೆ, ವಾಣಿಜ್ಯ, ಹಣಕಾಸು, ಆಪರೇಷನಲ್ ಏರಿಯಾ, ಇಲೆಕ್ಟ್ರಿಕಲ್, ಸಿವಿಲ್ ಸೇರಿದಂತೆ ಪ್ರಮುಖ ವಿಚಾರಗಳನ್ನು ಅವರು ನಿರ್ವಹಣೆ ಮಾಡಲಿದ್ದಾರೆ. ಆದರೆ ವಿಮಾನಗಳ ನೇವಿಗೇಷನ್, ಏರ್ ಟ್ರಾಫಿಕ್ ಕಂಟ್ರೋಲ್(ಎಟಿಸಿ) ಮಾತ್ರ ಶಾಶ್ವತವಾಗಿ ಪ್ರಾಧಿಕಾರದಿಂದಲೇ ನಿರ್ವಹಣೆಯಾಗಲಿದೆ.

    • ನಿರ್ದೇಶಕ ಹುದ್ದೆ ರದ್ದು: ಈವರೆಗೆ ಮಂಗಳೂರು ವಿಮಾನ ನಿಲ್ದಾಣಕ್ಕೆ ನಿರ್ದೇಶಕರು ಎಂಬ ಹುದ್ದೆಯೇ ಮೇಲಿನದ್ದಾಗಿತ್ತು. ಆದರೆ ಹೊಸ ವ್ಯವಸ್ಥೆಯಲ್ಲಿ ಈ ಹುದ್ದೆ ಇರುವುದಿಲ್ಲ. ವಿಮಾನ ನಿಲ್ದಾಣ ಪ್ರಾಧಿಕಾರದ ಆಡಳಿತ ಇಲ್ಲದ ಕಾರಣ ಡಿಜಿಎಂ ಹಾಗೂ ಮೇಲಿನ ಹುದ್ದೆಗಳು ಮೂರು ತಿಂಗಳಲ್ಲಿ ರದ್ದಾಗಲಿವೆ. ಈಗಿರುವ ನಿರ್ದೇಶಕರು ಜನರಲ್ ಮ್ಯಾನೇಜರ್ ಕೇಡರ್‌ನವರಾಗಿದ್ದು, ಪ್ರಾಧಿಕಾರ ಅವರನ್ನು 3 ತಿಂಗಳಲ್ಲಿ ಬೇರೆ ಕಡೆಗೆ ವರ್ಗಾಯಿಸಲಿದೆ. ಮಂಗಳೂರು ವಿಮಾನ ನಿಲ್ದಾಣಕ್ಕೆ ಈಗಾಗಲೇ ಅದಾನಿ ಸಮೂಹದವರು ಚೀಫ್ ಏರ್‌ಪೋರ್ಟ್ ಆಫೀಸರ್(ಸಿಎಒ) ನೇಮಕಗೊಳಿಸಿದ್ದಾರೆ.ಅದಾನಿ ಕಾರ್ಯಗಳೇನು?:
      ವಿಮಾನ ನಿಲ್ದಾಣದ ವಿನ್ಯಾಸ, ಅಭಿವೃದ್ಧಿ, ಹಣಕಾಸು, ಸುಧಾರಣೆ, ವಿಸ್ತರಣೆ ಇತ್ಯಾದಿ(ಹಂತಗಳಲ್ಲಿ)
      ವಿಮಾನ ನಿಲ್ದಾಣದ ಸಮಗ್ರ ಕಾರ್ಯನಿರ್ವಹಣೆ
      ವಿಮಾನ ನಿಲ್ದಾಣದಲ್ಲಿ ನಿರ್ವಹಿಸಲಾಗುವ ಪ್ರಯಾಣಿಕರ ಆಧಾರದಲ್ಲಿ ಪ್ರತಿ ತಿಂಗಳೂ ಪ್ರತಿ-ಪ್ರಯಾಣಿಕರ-ಶುಲ್ಕವನ್ನು ಪಾವತಿಸಬೇಕು.
      ವಿಮಾನ ನಿಲ್ದಾಣದ ಸಮಗ್ರ ಭದ್ರತಾ ಉಸ್ತುವಾರಿ ಎಂದಿನಂತೆ ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆಯಿಂದಲೇ ನಿರ್ವಹಿಸಲ್ಪಡುತ್ತದೆ. ಇದರಲ್ಲಿ ಬದಲಾವಣೆ ಇಲ್ಲ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts