More

    ಏರ್ ಇಂಡಿಯಾ ಖಾಸಗೀಕರಣಕ್ಕೆ ದಿನಗಣನೆ; ಶೇ. 100 ರಷ್ಟು ಬಂಡವಾಳ ಹಿಂತೆಗೆತ

    ನವದೆಹಲಿ : ಭಾರತ ಸರ್ಕಾರವು ಏರ್ ಇಂಡಿಯಾದಿಂದ ಶೇ.100 ರಷ್ಟು ಬಂಡವಾಳ ಹಿಂತೆಗೆಯಲಿದ್ದು, ಖಾಸಗೀಕರಣವು ನಿಶ್ಚಿತವಾದ ಮಾರ್ಗವಾಗಿದೆ ಎಂದು ನಾಗರೀಕ ವಿಮಾನಯಾನ ಸಚಿವ ಹರದೀಪ್ ಸಿಂಗ್ ಪುರಿ ಹೇಳಿದ್ದಾರೆ. ಸಂಪೂರ್ಣ ಬಂಡವಾಳ ಹಿಂತೆಗೆಯುವುದು ಇಲ್ಲವೇ ಮುಚ್ಚುವುದು – ಈ ಎರಡರ ನಡುವೆ ಆಯ್ಕೆ ಮಾಡಬೇಕಾಗಿದೆ. ಆದ್ದರಿಂದ ಬಂಡವಾಳ ಹಿಂತೆಗೆತದ ನಿರ್ಧಾರ ಮಾಡಿದ್ದೇವೆ ಎಂದು ಸಚಿವರು ತಿಳಿಸಿದ್ದಾರೆ.

    “ಏರ್ ಇಂಡಿಯಾದಿಂದ ಸರ್ಕಾರ ಬಂಡವಾಳವನ್ನು ಶೇ.100 ರಷ್ಟು ಹಿಂತೆಗೆಯುವ ನಿರ್ಧಾರ ಮಾಡಿದ್ದೇವೆ. ಬಂಡವಾಳ ಹಿಂತೆಗೆಯಬೇಕೇ ಬೇಡವೇ ಎನ್ನುವ ಆಯ್ಕೆ ಇಲ್ಲ. ಆಯ್ಕೆ ಇರುವುದು ಬಂಡವಾಳ ಹಿಂತೆಯುವುದರ ಅಥವಾ ಅದನ್ನು ಮುಚ್ಚುವುದರ ನಡುವೆ. ಏರ್ ಇಂಡಿಯಾ ಪ್ರಥಮ ದರ್ಜೆಯ ಆಸ್ತಿಯಾದರೂ ಅದು ಒಟ್ಟು 60,000 ಕೋಟಿ ರೂ. ಸಂಗ್ರಹಿತ ಸಾಲ (ಅಕ್ಯುಮುಲೇಟೆಡ್ ಡೆಟ್​) ಗಳನ್ನು ಹೊಂದಿದೆ. ನಾವು ಈ ಸ್ಲೇಟ್ಅನ್ನು ಸ್ವಚ್ಛಗೊಳಿಸಬೇಕಾಗಿದೆ” ಎಂದು ಪುರಿ ಹೇಳಿದ್ದಾರೆ ಎಂದು ಎಎನ್​ಐ ಸುದ್ದಿ ಸಂಸ್ಥೆ ವರದಿ ಮಾಡಿದೆ.

    ಇದನ್ನೂ ಓದಿ: ತರಬೇತಿಗೆ ಬಳಸುತ್ತಿದ್ದ ವಿಮಾನ ಅಪಘಾತ

    ಇಲ್ಲಿಯವರೆಗೆ ಸರ್ಕಾರವು ಸ್ವೀಕರಿಸಿರುವ ಬಿಡ್‌ಗಳ ಕುರಿತು ಮಾತನಾಡಿದ ಪುರಿ, “ಸೋಮವಾರ ನಡೆದ ಸಭೆಯಲ್ಲಿ, ಏರ್ ಇಂಡಿಯಾದಲ್ಲಿ ಬಂಡವಾಳ ಹೂಡಿಕೆಗಾಗಿ ಶಾರ್ಟ್‌ಲಿಸ್ಟ್ ಮಾಡಲಾಗಿರುವ ಬಿಡ್ಡರ್​ಗಳಿಗೆ 64 ದಿನಗಳಲ್ಲಿ ಬಿಡ್‌ಗಳನ್ನು ಸಲ್ಲಿಸಬೇಕೆಂದು ತಿಳಿಸಲು ನಿರ್ಧರಿಸಲಾಯಿತು. ಈ ಬಾರಿ ಸರ್ಕಾರ ದೃಢ ನಿರ್ಧಾರ ಮಾಡಿದ್ದು, ಯಾವುದೇ ಹಿಂಜರಿಕೆ ಇಲ್ಲ” ಎಂದಿದ್ದಾರೆ. ಹೀಗಾಗಿ ಬರುವ ಮೇ – ಜೂನ್ ತಿಂಗಳ ವೇಳೆಗೆ ಏರ್ ಇಂಡಿಯಾದ ಖಾಸಗೀಕರಣ ಪ್ರಕ್ರಿಯೆ ಪೂರ್ಣಗೊಳ್ಳಲಿದೆ ಎನ್ನಲಾಗಿದೆ. (ಏಜೆನ್ಸೀಸ್)

    ‘ಸುಳ್ಳು ಸುದ್ದಿ’ ಎಂದು ಹೌಹಾರಿದ ಕಾಂಗ್ರೆಸ್ ನಾಯಕ… ಮತ್ತೆ ‘ಸಾರಿ’ ಕೇಳಿದ್ದೇಕೆ ?!

    ಹುಟ್ಟಿನಿಂದಲೇ ಶುರುವಾಯ್ತು ಈ ಹೆಣ್ಣು ಮಕ್ಕಳ ಸಂಕಟ… ಆಸ್ಪತ್ರೆಯಲ್ಲೇ ಬಿಟ್ಟು ಕಾಣೆಯಾದ ತಾಯಿತಂದೆ!

    ಬಾಂಗ್ಲಾದೇಶದ ಕಾಳಿ ಮಂದಿರದಲ್ಲಿ ಮೋದಿ ಪ್ರಾರ್ಥನೆ

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts