More

    ಏಡ್ಸ ಪೀಡಿತರನ್ನು ತಾತ್ಸಾರದಿಂದ ಕಾಣದಿರಿ

    ಹಿರೇಬಾಗೇವಾಡಿ: ಏಡ್ಸ ಪೀಡಿತರನ್ನು ತಾತ್ಸಾರದಿಂದ ಕಾಣದೆ ಗೌರವದಿಂದ ಕಾಣಬೇಕು ಎಂದು ಬೆಳಗಾವಿ ಆಶ್ರಯ ಫೌಂಡೇಷನ್ ಮುಖ್ಯಸ್ಥೆ ನಾಗರತ್ನಾ ರಾಮನಗೌಡ ಹೇಳಿದ್ದಾರೆ.

    ಸಮೀಪದ ಬಡಾಲ ಅಂಕಲಗಿಯ ಸದಾನಂದಸ್ವಾಮಿ ಮಠದಲ್ಲಿ ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ಖಾಸಬಾಗ್ ಮಹಿಳಾ ಜ್ಞಾನ ವಿಕಾಸ ಕಾರ್ಯಕ್ರಮದಡಿ ಮಂಗಳವಾರ ಏರ್ಪಡಿಸಲಾಗಿದ್ದ ವಿಶ್ವ ಏಡ್ಸ್ ತಡೆ ದಿನಾಚರಣೆಯಲ್ಲಿ ಮಾತನಾಡಿದರು.

    ಏಡ್ಸ್ ರೋಗಿಯ ಕೈಕುಲುಕುವುದರಿಂದ ಅಥವಾ ಸಾರ್ವಜನಿಕವಾಗಿ ಅವರು ಮುಕ್ತವಾಗಿ ಬೆರೆಯುವುದರಿಂದ ಹರಡುವುದಿಲ್ಲ. ಅಸುರಕ್ಷಿತವಾದ ಲೈಂಗಿಕ ಕ್ರಿಯೆ, ಗರ್ಭವತಿಯಿಂದ ಆಕೆಯ ಮಗುವಿಗೆ, ರೋಗಿಯ ರಕ್ತ ಬಳಕೆಯಿಂದ ಮಾತ್ರ ಹರಡುತ್ತದೆ. ಮುಂಜಾಗ್ರತಾ ಕ್ರಮ ಅನುಸರಿಸಿದರೆ ರೋಗವನ್ನು ದೂರ ಇಡಬಹುದಾಗಿದೆ ಎಂದರು.

    ಶ್ರೀ ಧರ್ಮಸ್ಥಳ ಯೋಜನೆಯ ಜಿಲ್ಲಾ ನಿರ್ದೇಶಕ ಪ್ರದೀಪ ಶೆಟ್ಟಿ ಮಾತನಾಡಿ, ಮಕ್ಕಳಿಗೆ ಜೀವನದಲ್ಲಿ ಹಣ, ಒಡವೆ, ಆಸ್ತಿ ಗಳಿಸಿಡುವುದಕ್ಕಿಂತ ಮೊದಲು ಅವರ ಆರೋಗ್ಯ ಕಾಪಾಡಿಕೊಳ್ಳುವತ್ತ ಗಮನ ಹರಿಸಬೇಕು ಎಂದು ತಿಳಿಸಿದರು. ಬೆಳಗಾವಿ ಮಕ್ಕಳ ಸಹಾಯವಾಣಿ ಕೇಂದ್ರದ ಸುಧಾ ಗಟ್ಟಿ, ಭೆಂಡಿಗೇರಿ ಪ್ರಾಥಮಿಕ ಆರೋಗ್ಯ ಕೇಂದ್ರದ ಕಿರಿಯ ಆರೋಗ್ಯ ಸಹಾಯಕಿ ಸವಿತಾ ಮೇಕಲಮರಡಿ ಮಾತನಾಡಿದರು. ದೈಹಿಕ ಶಿಕ್ಷಣ ಶಿಕ್ಷಕ ಬಸನಗೌಡ ಪಾಟೀಲ ಅಧ್ಯಕ್ಷತೆ ವಹಿಸಿದ್ದರು. ಯೋಜನಾಧಿಕಾರಿ ಮಂಜುನಾಥ ಎನ್.ಆರ್., ಸೇವಾ ಪ್ರತಿನಿಧಿಗಳಾದ ಕಮಲಾಕ್ಷಿ ಕಲಬಾವಿ, ಸರಸ್ವತಿ ಮಾಸಣ್ಣವರ, ಸಮನ್ವಯಾಧಿಕಾರಿ ಗಂಗೂಬಾಯಿ ಜಗತಾಪ, ಜ್ಞಾನ ವಿಕಾಸ ಸದಸ್ಯರು, ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರು ಇತರರಿದ್ದರು. ಗಂಗೂಬಾಯಿ ಜಗತಾಪ ಸ್ವಾಗತಿಸಿ, ನಿರೂಪಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts