More

    ಏಡ್ಸ್​ ತಡೆಗಟ್ಟಲು ಸಮುದಾಯದ ಸಹಭಾಗಿತ್ವ ಅವಶ್ಯಕ :ಎಸ್​. ವಿ. ಸಂಕನೂರ

    ವಿಜಯವಾಣಿ ಸುದ್ದಿಜಾಲ ಗದಗ
    ಏಡ್ಸ್​ ತಡೆಗಟ್ಟಲು ಸಮುದಾಯದ ಸಹಭಾಗಿತ್ವ ಅವಶ್ಯಕ ಎಂದು ವಿಧಾನ ಪರಿಷತ್​ ಸದಸ್ಯ ಎಸ್​. ವಿ. ಸಂಕನೂರ ತಿಳಿಸಿದರು.
    ನಗರದ ಜೆ.ಟಿ.ಕಾಲೇಜ್​ ಸಭಾಂಗಣದಲ್ಲಿ ಶುಕ್ರವಾರ ಏರ್ಪಡಿಸಿದ್ದ ವಿಶ್ವ ಏಡ್ಸ್​ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಸಮುದಾಯ ಜಾಗೃತವಾಗಿ ಮುಂದಾಳತ್ವ ವಹಿಸಿ ಜಾಗೃತಿಯನ್ನು ಮೂಡಿಸಿ ಏಡ್ಸ್​ರೋಗ ಹರಡುತ್ತಿರುವ ಪ್ರಮಾಣವನ್ನು ಸೊನ್ನೆಗೆ ಇಳಿಸಿದಾಗ ಮಾತ್ರ ಈ ದಿನಾಚರಣೆಯ ಉದ್ದೇಶ ರ್ಪೂಣಗೊಳ್ಳುತ್ತದೆ. ಹೆಚ್ಚು ತಪಾಸಣೆ ಮಾಡಿ ಸೋಂಕಿತರಿಗೆ ಸೌಲಭ್ಯ ನೀಡಬೇಕು. ಸ್ವ ಉದ್ಯೋಗ ಹೊಂದಿ ಆಥಿರ್ಕ ಸಬಲರನ್ನಾಗಿ ಮಾಡಬೇಕು ಎಂದು ಎಸ್​.ವಿ.ಸಂಕನೂರ ಹೇಳಿದರು
    ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಸದಸ್ಯ ಕಾರ್ಯದಶಿರ್ ಕೆ. ಗುರುಪ್ರಸಾದ ಮಾತನಾಡಿ, ಏಡ್ಸ್​ ನಿಯಂತ್ರಣದಲ್ಲಿ ಯುವಕರ ಪಾತ್ರ ಮುಖ್ಯವಾಗಿದೆ. ಯುವಕರು ಕಾಲೇಜ ವಿದ್ಯಾಥಿರ್ಗಳು, ಗ್ರಾಮೀಣ ಜನತೆಗೆ ತಿಳುವಳಿಕೆ ಮೂಡಿಸಿ, ಎಚ್​ಚ್​ಐವಿ ಮುಕ್ತ ಸಮಾಜ ನಿರ್ಮಾಣ ಮಾಡಲು ಕೈ ಜೋಡಿಸಬೇಕು. ಸಮಾಜದಲ್ಲಿ ಎಚ್​ಐವಿ ಸೋಂಕಿತರಿಗೆ ಮತ್ತು ಬಾಧಿತರರಿಗೆ ಆಗುವ ಅಸಮಾನತೆಯನ್ನು ತೊಲಗಿಸಲು ಮುಂದಾಗಬೇಕು. ನೋಂದವರಿಗೆ ಸೌಲಭ್ಯ ನೀಡುವ ನಿಟ್ಟಿನಲ್ಲಿ ಕಾರ್ಯ ಪ್ರವೃತ್ತರಾಗಬೇಕು ಎಂದರು.
    ಜಿಲ್ಲಾ ಏಡ್ಸ್​ ನಿಯಂತ್ರಣಾಧಿಕಾರಿ ಡಾ. ಅರುಂಧತಿ ಕುಲಕಣಿರ್ ಪ್ರಾಸ್ತಾವಿಕವಾಗಿ ಮಾತನಾಡಿ, ಎಚ್​ಐವಿ ಸೋಂಕಿನ ಪ್ರಮಾಣ ಕಳೆದ ಹತ್ತು ವರ್ಷಗಳ ಅಂಕಿ ಅಂಶಗಳನ್ನು ಗಮನಿಸಿದರೆ ಗಣನೀಯವಾಗಿ ಇಳಿಕೆ ಕಂಡುಬಂದಿದೆ. ಇದು ಇಲಾಖೆಯ ಹಲವಾರು ತಿಳುವಳಿಕೆ ಕಾರ್ಯಕ್ರಮಗಳು ಹಾಗೂ ಜಾಗೃತಿ ಜಾಥಾಗಳು ಕಾರಣವಾಗಿದೆ. ಎಚ್​ಐವಿ ಮತ್ತು ಏಡ್ಸ್​ಗೆ ಬಹಳಷ್ಟು ಅಂತರವಿದ್ದು, ಎಚ್​ಐವಿ ಸೋಂಕಿತರು ಭಯಪಡುವ ಅಗತ್ಯವಿಲ್ಲ. ಆಪ್ತಸಮಾಲೋಚಕರಿಂದ ನೈತಿಕ ಬೆಂಬಲ ಮಾನಸಿಕ ಬೆಂಬಲವನ್ನು ಪಡೆದು ಇತರರಂತೆ ಸಾಮಾನ್ಯ ಜೀವನ ನಡೆಸ ಬಹುದು ಎಂದರು. ದೇಶದಲ್ಲಿ 25 ಲ ಸೋಂಕಿತರಿದ್ದು, ರಾಜ್ಯದಲ್ಲಿ 2.5 ಲಕ್ಷ ಜನ ಸೋಂಕಿತರಿದ್ದಾರೆ.
    ನೀಲಮ್ಮ ಸುರಪ್ಪಗೌಡರ, ಅರವಿಂದ ಕೊಪ್ಪಳ, ಮಂಜುನಾಥ ಅಂಗಡಿ, ಪ್ರೊ. ಕೌಲಗಿ, ಡಾ. ಬಿ. ಸಿ. ಕರಿಗೌಡರ, ಡಾ. ಎಸ್​. ಎಸ್​.ನೀಲಗುಂದ, ಬಸವರಾಜ ಲಾಳಗಟ್ಟಿ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts