More

    ಸೂಗೂರೇಶ್ವರನಿಗಿಲ್ಲ ಗ್ರಹಣ ಪ್ರಭಾವ!; ದೋಷ ತಾಕದಂತೆ ಶಿಲೆಗಳ ಪ್ರತಿಷ್ಠಾಪನೆ ದೇವಸುಗೂರಿನ ದೇವಸ್ಥಾನದಲ್ಲಿ ವಿಶೇಷ ಪೂಜೆ

    ರಾಯಚೂರು: ಸೂರ್ಯಗ್ರಹಣದ ಸಂದರ್ಭದಲ್ಲಿ ಜಿಲ್ಲೆಯಲ್ಲಿ ಎಲ್ಲ ದೇವಸ್ಥಾನದಲ್ಲಿ ದೇವರ ದರ್ಶನ, ಪೂಜೆ ಪುನಸ್ಕಾರಗಳನ್ನು ಸ್ಥಗಿತಗೊಳಿಸಿದ್ದರೆ ತಾಲೂಕಿನ ದೇವಸುಗೂರಿನ ಸೂಗೂರೇಶ್ವರ ದೇವಸ್ಥಾನದಲ್ಲಿ ಮಾತ್ರ ಮಂಗಳವಾರ ಎಂದಿನಂತೆ ಪೂಜೆ ಪುನಸ್ಕಾರ ನಡೆಯಿತು.

    ಸೂಗೂರೇಶ್ವರ ದೇವಸ್ಥಾನ ಸಂದರ್ಭದಲ್ಲಿಯೇ ಗ್ರಹಣ ದೋಷವಾಗದಂತೆ ಎರಡು ಶಿಲೆಗಳನ್ನು ಪ್ರತಿಷ್ಠಾಪನೆ ಮಾಡಲಾಗಿರುವುದರಿಂದ ಸೂಗೂರೇಶನಿಗೆ ಗ್ರಹಣ ದೋಷವಾಗುವುದಿಲ್ಲ ಎನ್ನುವ ಪ್ರತೀತಿಯಿದೆ. ಇದರಿಂದಾಗಿ ಯಾವುದೇ ಗ್ರಹಣ ಸಂದರ್ಭದಲ್ಲಿ ದೇವಸ್ಥಾನದಲ್ಲಿ ಎಂದಿನಂತೆಯೇ ಪೂಜೆ ಪುನಸ್ಕಾರಗಳನ್ನು ನಡೆಸಲಾಗುತ್ತದೆ.

    ಜಿಲ್ಲೆಯ ಬಹುತೇಕ ಪ್ರಮುಖ ದೇವಸ್ಥಾನದಲ್ಲಿ ದರ್ಶನಕ್ಕೆ ಯಾವುದೇ ಅಡ್ಡಿಯಿಲ್ಲದಿದ್ದರೂ ಪೂಜೆ ಪುನಸ್ಕಾರಗಳನ್ನು ಸ್ಥಗಿತಗೊಳಿಸಲಾಗಿದ್ದು, ನಗರದ ಚಂದ್ರಮೌಳೇಶ್ವರ ದೇವಸ್ಥಾನ ಸೇರಿದಂತೆ ಹಲವು ದೇವಸ್ಥಾನಗಳಲ್ಲಿ ಬೆಳಗ್ಗೆಯಿಂದಲೇ ಗರ್ಭಗುಡಿಗೆ ಪರದೆ ಹಾಕಿ ಗ್ರಹಣ ದೋಷವಾಗದಂತೆ ವ್ಯವಸ್ಥೆ ಮಾಡಲಾಗಿದೆ.

    ಮಂತ್ರಾಲಯದ ರಾಘವೇಂದ್ರಸ್ವಾಮಿ ಮಠದಲ್ಲಿ ರಾಯರ ದರ್ಶನಕ್ಕೆ ಯಾವುದೇ ಅಡ್ಡಿಯುಂಟಾಗಿಲ್ಲ. ಎಂದಿನಂತೆ ಭಕ್ತರು ರಾಯರ ಮೂಲ ಬೃಂದಾವನ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿತ್ತು. ಆದರೆ ವಿವಿಧ ಪೂಜೆ ಮತ್ತು ಸೇವಾ ಕಾರ್ಯಗಳನ್ನು ಗ್ರಹಣ ನಿಮಿತ್ತ ರದ್ದುಗೊಳಿಸಲಾಗಿತ್ತು. ಗ್ರಹಣ ಕಾಲ ಮುಗಿದ ನಂತರ ದೇವಸ್ಥಾನದ ಶುದ್ಧಿ ಕಾರ್ಯ ನಡೆಸಿ, ವಿಶೇಷ ಪೂಜಾ ಕಾರ್ಯಕ್ರಮಗಳನ್ನು ಶ್ರೀಮಠದಲ್ಲಿ ಹಮ್ಮಿಕೊಳ್ಳಲಾಗಿತ್ತು.

    ಸೂಗೂರೇಶ್ವರನಿಗಿಲ್ಲ ಗ್ರಹಣ ಪ್ರಭಾವ!; ದೋಷ ತಾಕದಂತೆ ಶಿಲೆಗಳ ಪ್ರತಿಷ್ಠಾಪನೆ ದೇವಸುಗೂರಿನ ದೇವಸ್ಥಾನದಲ್ಲಿ ವಿಶೇಷ ಪೂಜೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts