More

    ಎಐಸಿಸಿ ಅಧ್ಯಕ್ಷ ಪಟ್ಟ: ಖರ್ಗೆಗೆ ಖುಲಾಯಿಸುತ್ತ ಅದೃಷ್ಟ?

    ನವದೆಹಲಿ/ಬೆಂಗಳೂರು: ಎಐಸಿಸಿ ಸಾರಥ್ಯ ಯಾರ ಹೆಗಲಿಗೆ? ಎಂಬ ಪ್ರಶ್ನೆ ಇದೀಗ ಕಾಂಗ್ರೆಸ್ ವಲಯದಲ್ಲಿ ಭಾರಿ ಚರ್ಚೆಗೆ ಒಳಗಾಗಿದೆ. ರಾಜಕೀಯ ವಲಯದಲ್ಲೂ ಸಾಕಷ್ಟು ಕುತೂಹಲ ಕೆರಳಿಸಿರುವ ಕಾಂಗ್ರೆಸ್ ಪಕ್ಷದ ನಾಯಕತ್ವ ಬಿಕ್ಕಟ್ಟಿನ ವಿಚಾರದಲ್ಲಿ ಗಾಂಧಿ ಕುಟುಂಬದ ನಿರ್ಣಯವೇನು ಎಂಬುದು ಸದ್ಯದ ಪ್ರಶ್ನೆ.

    ಮಲ್ಲಿಕಾರ್ಜುನ್ ಖರ್ಗೆ ಅವರ ಹೆಸರು ಈಗ ಎಐಸಿಸಿ ಸಾರಥ್ಯದ ಸಂಭಾವ್ಯರ ಪಟ್ಟಿಯಲ್ಲಿ ಕಾಣಿಸಿಕೊಂಡಿದೆ. ಗಾಂಧಿ ಕುಟುಂಬಕ್ಕೆ ಭಾರಿ ನಿಷ್ಠೆಯನ್ನು ಹೊಂದಿರುವ ಖರ್ಗೆ ಬಗ್ಗೆ ಸೋನಿಯಾ ಗಾಂಧಿ ಅವರಿಗೆ ಉತ್ತಮ ಅಭಿಪ್ರಾಯವಿದೆ ಎಂಬ ಮಾತೂ ಕೇಳಿದೆ. ಇತ್ತೀಚೆಗೆ 23 ನಾಯಕರು ಸೋನಿಯಾ ಗಾಂಧಿಯವರಿಗೆ ಪತ್ರ ಬರೆದಿದ್ದು, ಆಮೂಲಾಗ್ರ ಬದಲಾವಣೆ ಮಾಡುವಂತೆ ಕೇಳಿಕೊಂಡಿದ್ದಾರೆ.

    ಇದನ್ನೂ ಓದಿ: ಆನ್​ಲೈನ್ ಔಷಧ ಸೇವೆ ಆಪತ್ತು ಜೀವಕ್ಕೆ ತರುತ್ತೆ ಕುತ್ತು; ಮೆಡಿಕಲ್ ಶಾಪ್​ಗಳ ವಿನಾಶಕ್ಕೆ ಕಾರಣ

    ಈ ಬೆಳವಣಿಗೆ ಹಿನ್ನೆಲೆಯಲ್ಲಿ ಮಲ್ಲಿಕಾರ್ಜುನ್ ಖರ್ಗೆ ಹೆಸರು ಕರ್ನಾಟಕದಲ್ಲಿ ಮುನ್ನೆಲೆಗೆ ಬಂದಿದೆ. ಅವರ ಗಾಂಧಿ ಕುಟುಂಬ ನಿಷ್ಠೆಗೆ ಸಿಗಬಹುದಾದ ಉಡುಗೊರೆ ಏನು ಎಂಬ ಕುತೂಹಲವೂ ಮೂಡಿದೆ. ಇಂದು ನಡೆಯುವ ಸಿಡಬ್ಲ್ಯುಸಿ ಮೀಟಿಂಗ್​ ನಿರ್ಣಾಯಕವಾಗಿದ್ದು, ಅಲ್ಲಿ ಎಲ್ಲವೂ ನಿರ್ಧಾರವಾಗಲಿದೆ. (ದಿಗ್ವಿಜಯ ನ್ಯೂಸ್)

    ಯಾರಿಗೆ ಕೀಲಿ’ಕೈ’?; ಹೊಸ ನಾಯಕತ್ವಕ್ಕೆ ಸೋನಿಯಾ ಸೂಚನೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts