More

    ಮುಂದುವರಿದ ರೈತರ ಅಹೋರಾತ್ರಿ ಧರಣಿ

    ಮುದ್ದೇಬಿಹಾಳ: ನಾಗರಬೆಟ್ಟ ಸರ್ಕಾರಿ ಗುಡ್ಡವನ್ನು ಖಾಸಗಿಯವರಿಂದ ರಕ್ಷಿಸುವುದು, ಗುಡ್ಡದ ಮಣ್ಣು ಅಕ್ರಮವಾಗಿ ಬಳಸಿಕೊಂಡ ಗುತ್ತಿಗೆದಾರರಿಂದ ಹಣ ವಸೂಲಿ ಮಾಡಿ ಸರ್ಕಾರಕ್ಕೆ ತುಂಬಿಸಿಕೊಳ್ಳುವುದು, ಹೊಲಗಳಿಗೆ ಹೋಗಿ ಬರುವ ದಾರಿ ಸಮಸ್ಯೆ ಇತ್ಯರ್ಥಗೊಳಿಸುವುದು ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಆಗ್ರಹಿಸಿ ಇಲ್ಲಿನ ತಹಸೀಲ್ದಾರ್ ಕಚೇರಿ ಎದುರು ನಡೆಸುತ್ತಿರುವ ಪ್ರತಿಭಟನೆ ಬುಧವಾರ ಮೂರನೇ ದಿನಕ್ಕೆ ಮುಂದುವರಿದಿದೆ.

    ನಾಗರಬೆಟ್ಟ, ಮಾವಿನಭಾವಿ, ಬೂದಿಹಾಳ ಸೇರಿ ವಿವಿಧ ಗ್ರಾಮಗಳ ರೈತರು ತಾಲೂಕು ರೈತ ಹಿತರಕ್ಷಣಾ ವೇದಿಕೆ ಅಧ್ಯಕ್ಷ ಎಂ.ಎಸ್.ಸಿದರಡ್ಡಿ ನೇತೃತ್ವದಲ್ಲಿ ನಡೆಸಿರುವ ಧರಣಿಗೆ ಜಿಪಂ ಮಾಜಿ ಸದಸ್ಯ ನಿಂಗಪ್ಪಗೌಡ ಬಪ್ಪರಗಿ, ಬಿಎಲ್‌ಡಿ ಬ್ಯಾಂಕ್ ಉಪಾಧ್ಯಕ್ಷ ಗುಡದಪ್ಪ ಕಮರಿ, ಢವಳಗಿಯ ಪ್ರಗತಿಪರ ರೈತರಾದ ಬಾಪುಗೌಡ ಪಾಟೀಲ, ಗುರುನಾಥಗೌಡ ಪಾಟೀಲ, ಡಿಎಸ್‌ಎಸ್ ರಾಜ್ಯ ಸಂಘಟನಾ ಸಂಚಾಲಕ ಡಿ.ಬಿ.ಮುದೂರ, ರೈತ ಸಂಘಟನೆಗಳ ಮುಖಂಡರು ಸೇರಿ ಹಲವರು ಮಂಗಳವಾರ ಬೆಂಬಲ ಸೂಚಿಸಿದರು.

    ತಾಲೂಕು ಆಡಳಿತ ಮಂಗಳವಾರ ಸಂಜೆಯೇ ರೈತರ ಬೇಡಿಕೆಗೆ ಸ್ಪಂದನೆ ನೀಡಿದೆ. ಆದರೆ ಯಾವ ರೀತಿಯ ಸ್ಪಂದನೆ ನೀಡಲಾಗಿದೆ ಎನ್ನುವುದನ್ನು ಲಿಖಿತವಾಗಿ ಕೊಡುವಂತೆ ಧರಣಿ ನಿರತರು ಆಗ್ರಹಿಸಿದ್ದರಿಂದ ಮಂಗಳವಾರ ಸಂಜೆಯೇ ಅಂತ್ಯಗೊಳ್ಳಬೇಕಿದ್ದ ಧರಣಿ ಬುಧವಾರಕ್ಕೆ ಮುಂದುವರಿಯುವಂತಾಯಿತು.

    ಹೋರಾತ್ರಿ ಧರಣಿ ನಡೆಸುತ್ತಿರುವ ರೈತರು ಧರಣಿ ಸ್ಥಳದಲ್ಲಿಯೇ ಬೆಳಗಿನ ಉಪಾಹಾರ ತಯಾರಿಸಿ ಸೇವಿಸಿದರು. ಮಧ್ಯಾಹ್ನ ಕೂಡ ಧರಣಿ ಸ್ಥಳದಲ್ಲೇ ಊಟ ಮಾಡಿದರು. ರಾತ್ರಿ ತಮ್ಮ ವಾಸ್ತವ್ಯವನ್ನು ತಹಸೀಲ್ದಾರ್ ಕಚೇರಿ ಎದುರಿಗೆ ಇರುವ ಒಳ ರಸ್ತೆಯಿಂದ ಕಚೇರಿ ಎದುರಿಗೆ ಇರುವ ಝೇಂಡಾ ಕಟ್ಟೆಗೆ ಸ್ಥಳಾಂತರಿಸಿ ಅಲ್ಲಿಯೇ ರಾತ್ರಿ ಊಟ, ವಾಸ್ತವ್ಯಕ್ಕೆ ವ್ಯವಸ್ಥೆ ಮಾಡಿಕೊಂಡರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts