More

    VIDEO| ಮಿಷನ್ ಮುಜು: ಅಹಮದಾಬಾದ್​ ವಿಮಾನ ನಿಲ್ದಾಣದಲ್ಲಿ ಮುಜುಗಳದ್ದೇ ಕಾಟ; ಪ್ರಯಾಣಿಕರ ಲಾಂಜ್​ನಲ್ಲಿ ಕಾಣಿಸಿಕೊಂಡಿತು ಕರಡಿ..!

    ಅಹಮದಾಬಾದ್​: ಸ್ಥಳೀಯ ವಿಮಾನನಿಲ್ದಾಣದಲ್ಲಿ ಮುಜುಗಳ ಕಾಟ ವಿಪರೀತವಾಗಿದ್ದು, ವಿಮಾನ ಟೇಕಾಫ್ ಮತ್ತು ಲ್ಯಾಂಡಿಂಗ್​ಗೆ ಭಾರಿ ತೊಂದರೆ ಕೊಡುವುದು ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿದೆ. ಇಲ್ಲಿನ ವಿಮಾನ ಪ್ರಯಾಣಿಕರಿಗೆ ಮುಜುಗಳು ಅಷ್ಟರಮಟ್ಟಿಗೆ ಚಿರಪರಿಚಿತ! ಇದ್ದಕ್ಕಿದ್ದಂತೆ ವಿಮಾನ ನಿಲ್ದಾಣದ ಆವರಣದೊಳಗೆ ಪ್ರಯಾಣಿಕರ ಲಾಂಜ್ ಬಳಿ ಕರಡಿಯೂ ಕಾಣಿಸಿಕೊಂಡಿದೆ! ಕಳೆದ ಒಂದು ವಾರದಿಂದ ಕರಡಿ ಪದೇಪದೇ ಕಾಣಿಸಿಕೊಳ್ಳುತ್ತಿದೆಯಂತೆ!

    ಗಾಬರಿ ಬೀಳಬೇಡಿ.. ಅಹಮದಾಬಾದ್ ವಿಮಾಣ ನಿಲ್ದಾಣ ಕಾಡಿನೊಳಗಿಲ್ಲ. ಮುಜುಗಳ ಕಾಟದಿಂದಾಗಿ ವಿಮಾನಗಳ ಟೇಕಾಫ್, ಲ್ಯಾಂಡಿಂಗ್ ಸಮಸ್ಯೆಯಾಗಿದ್ದು, ಏನು ಮಾಡಿದರೂ ಅವುಗಳ ಕಾಟ ತಪ್ಪಿಸುವುದು ಸಾಧ್ಯವಾಗಿರಲಿಲ್ಲ. ಕೊನೆಗೂ ಮುಜುಗಳನ್ನು ಓಡಿಸಲು ಅಧಿಕಾರಿಗಳು ಒಂದು ಉಪಾಯ ಕಂಡುಕೊಂಡರು.

    ವಿಮಾನ ನಿಲ್ದಾಣದ ನಿರ್ದೇಶಕ ಮನೋಜ್ ಗಂಗಾಲ್​ ಹೇಳುವ ಪ್ರಕಾರ, ಮುಜುಗಳಿಗೆ ಕರಡಿಗಳು ಎಂದರೆ ಭಯ. ಮನುಷ್ಯರಿಗೆ ಭಯಪಡದ ಮುಜುಗಳು ಕರಡಿಗಳನ್ನು ಕಂಡರೆ ಸಾಕು ಮಾರು ದೂರ ಓಡಿಬಿಡುತ್ತವೆ. ಇದಕ್ಕಾಗಿ ಕರಡಿಯ ಉಡುಪು ಸಿದ್ಧಪಡಿಸಿಕೊಂಡಿದ್ದೇವೆ. ಮುಜುಗಳು ವಿಮಾನ ನಿಲ್ದಾಣದೊಳಗೆ ರನ್​ವೇ ಸಮೀಪ ಕಾಣಿಸಿದಾಗೆಲ್ಲ ನಮ್ಮ ಸಿಬ್ಬಂದಿ ಕರಡಿ ಉಡುಪು ಧರಿಸಿ ಅವುಗಳ ಕಡೆಗೆ ಹೋಗುತ್ತಾರೆ. ಆಗ ಆ ಮುಜುಗಳು ದೂರ ಓಡಿಬಿಡುತ್ತವೆ. ಕಳೆದ ಒಂದು ವಾರದಿಂದ ಈ ಪ್ರಯೋಗ ಮಾಡುತ್ತಿದ್ದು, ಯಶಸ್ವಿಯಾಗಿದೆ ಎಂದು ಹೇಳಿದ್ದಾರೆ. (ಏಜೆನ್ಸೀಸ್) 

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts