More

    ಅಸ್ತಿತ್ವದಲ್ಲಿಲ್ಲದ ಕಂಪನಿ ಕೀಟನಾಶಕ ಮಾರಾಟ

    ಕೊಪ್ಪಳ: ಅಸ್ತಿತ್ವದಲ್ಲಿ ಇಲ್ಲದ ಕಂಪನಿ ಹೆಸರಿನಲ್ಲಿ ಕೀಟನಾಶಕ ಮಾರಾಟ ಮಾಡುತ್ತಿದ್ದ ನಗರದ ಅಕ್ಷಯ್ ಆಗ್ರೋ ಸೇಲ್ಸ್ ಪ್ರೈ.ಲಿ. ಅಂಗಡಿ ಮೇಲೆ ಕೃಷಿ ಜಾಗೃತ ದಳದ ಅಧಿಕಾರಿಗಳು ಬುಧವಾರ ದಾಳಿ ನಡೆಸಿದರು.


    ಆಪ್ಟಿಮ್ ಪಾರ್ಮ್‌ ಸೆಲ್ಯೂಷನ್ಸ್ ಹೆಸರಿನ ಕಂಪನಿ 2021ರಲ್ಲಿ ಯುಪಿಎಲ್ ಲಿ. ಕಂಪನಿಯಲ್ಲಿ ವಿಲೀನವಾಗಿದೆ. ಆದರೂ, ದೆಹಲಿಯ ಆಪ್ಟಿಮ್ ಪಾರ್ಮ್‌ ಸೆಲ್ಯೂಷನ್ಸ್ ಲ್ಯಾನ್ಸರ್ ಗೋಲ್ಡ್ ಹೆಸರಿನ ಕೀಟನಾಶಕ ಉತ್ಪಾದಿಸಿ ಮಾರಾಟ ಮಾಡುತ್ತಿದೆ. ಇದು ಕೀಟನಾಶಕ ಕಾಯ್ದೆ ಉಲ್ಲಂಘನೆಯಾಗಿದ್ದು, ಅಧಿಕಾರಿಗಳಿಗೆ ಮಾಹಿತಿ ತಿಳಿದು ಬಂದಿದೆ. ತಕ್ಷಣ ಕಾರ್ಯ ಪ್ರವೃತ್ತರಾದ ಅಧಿಕಾರಿಗಳು ಕೊಪ್ಪಳದ ಬಸವೇಶ್ವರ ವೃತ್ತದಲ್ಲಿರುವ ಅಕ್ಷಯ್ ಆಗ್ರೋ ಸೇಲ್ಸ್ ಪ್ರೈ.ಲಿ. ಅಂಗಡಿ ದಾಳಿ ನಡೆಸಿದ್ದು, 2,11,900ರೂ. ಮೌಲ್ಯದ 130ಲೀಟರ್ ಲ್ಯಾನ್ಸರ್ ಗೋಲ್ಡ್ ಕೀಟನಾಶಕ ದಾಸ್ತಾನು ಪತ್ತೆಯಾಗಿದೆ.


    ಜಾಗೃತ ದಳದ ಸಹಾಯಕ ನಿರ್ದೇಶಕರಾದ ಕೆ.ಕುಮಾರಸ್ವಾಮಿ, ನಿಂಗಪ್ಪ, ಕೃಷಿ ಅಧಿಕಾರಿ ಸದ್ದಾಂ ಹುಸೇನ್ ತಂಡವು ದಾಳಿ ನಡೆಸಿ ಕೀಟನಾಶಕ ವಶಕ್ಕೆ ಪಡೆದಿದೆ. ಕಾಯ್ದೆ ಉಲ್ಲಂಘನೆ ಕಂಡುಬಂದಿದ್ದು, ನಿಯಮಾನುಸಾರ ಪ್ರಕರಣ ದಾಖಲಿಸಿ ಕ್ರಮ ಕೈಗೊಳ್ಳುವುದಾಗಿ ಅಧಿಕಾರಿಗಳು ತಿಳಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts