More

    ಕೃಷಿ ತಂತ್ರಜ್ಞಾನ ಮಾಹಿತಿ ಅಗತ್ಯ, ಕೃಷಿ ಮಾಹಿತಿ ಕಾರ್ಯಾಗಾರ ಉದ್ಘಾಟಿಸಿ ಭರತ್ ಕುಮಾರ್ ಅನಿಸಿಕೆ

    ಮಂಗಳೂರು: ನವದೆಹಲಿಯ ಭಾರತೀಯ ಕೃಷಿ ಅನುಸಂಧಾನ ಪರಿಷತ್ ಐಸಿಎಆರ್ 95ನೇ ಸಂಸ್ಥಾಪನಾ ದಿನಾಚರಣೆ ಅಂಗವಾಗಿ ಎಕ್ಕೂರು ಕೃಷಿ ಕೇಂದ್ರ ಹಾಗೂ ಮಂಗಳೂರು ವಿಶ್ವವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನೆ ಸಹಭಾಗಿತ್ವದಲ್ಲಿ ಕೃಷಿ ಕೇಂದ್ರದ ಆವರಣದಲ್ಲಿ ಕೃಷಿ ಮಾಹಿತಿ ಕಾರ್ಯಾಗಾರ ಸೋಮವಾರ ಜರುಗಿತು.

    ಮಂಗಳೂರು ಮಹಾನಗರ ಪಾಲಿಕೆ ಸದಸ್ಯ ಭರತ್ ಕುಮಾರ್ ಉದ್ಘಾಟಿಸಿ, ಯುವಜನತೆ ಕೃಷಿ ತಂತ್ರಜ್ಞಾನಗಳ ಕುರಿತು ಮಾಹಿತಿ ಪಡೆದುಕೊಳ್ಳಬೇಕು ಎಂದರು.

    ಕೃಷಿ ಕೇಂದ್ರ ಮುಖ್ಯಸ್ಥ ಡಾ.ಟಿ.ಜೆ.ರಮೇಶ್ ಅಧ್ಯಕ್ಷತೆ ವಹಿಸಿ, ಕೃಷಿಕರಿಗಾಗಿ ಅಭಿವೃದ್ಧಿಪಡಿಸಿದ ವಿವಿಧ ತಂತ್ರಜ್ಞಾನದ ಮಾಹಿತಿ ನೀಡಿದರು. ಭತ್ತದ ವಿವಿಧ ತಳಿಗಳ ಪ್ರದರ್ಶನ ಏರ್ಪಡಿಸಲಾಗಿತ್ತು. ಕೃಷಿ ಕೇಂದ್ರದ ವಿಜ್ಞಾನಿಗಳಾದ ಡಾ.ಹರೀಶ್ ಶೆಣೈ, ಡಾ.ಶಿವಕುಮಾರ್, ಡಾ.ರವೀಂದ್ರ ಗೌಡ ಪಾಟೀಲ್, ಡಾ.ರಶ್ಮಿ, ಡಾ.ಕೇದರನಾಥ, ಡಾ.ಮಲ್ಲಿಕಾರ್ಜುನ ಕೃಷಿ ತಂತ್ರಜ್ಞಾನಗಳ ಕುರಿತು ಮಾಹಿತಿ ನೀಡಿದರು.

    ಕಾಸರಗೋಡಿನ ಭತ್ತ ತಳಿ ಸಂರಕ್ಷಕ ಸತ್ಯನಾರಾಯಣ ಬಳೇರಿ, ಸಂತ ಅಲೋಶಿಯಸ್ ಕಾಲೇಜಿನ ಎನ್ನೆಸ್ಸೆಸ್ ಸ್ವಯಂಸೇವಕರು ಹಾಗೂ ಯೋಜನಾಧಿಕಾರಿ ಆಲ್ವಿನ್ ಡಿಸೋಜ ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts