More

    ನೈಸರ್ಗಿಕ ಕೃಷಿಯಿಂದ ರೈತನ ಬದುಕು ಸುಸ್ಥಿರ

    ಬಣಕಲ್: ನೈಸರ್ಗಿಕ ಕೃಷಿಯಿಂದ ಕೃಷಿ ಕ್ಷೇತ್ರದ ಪುನಶ್ಚೇತನ ಸಾಧ್ಯ ಎಂದು ಪ್ರಗತಿಪರ ಕೃಷಿಕ ಚಂದ್ರಶೇಖರ್ ನಾರಣಾಪುರ ಹೇಳಿದರು.

    ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಪ್ರತಿಷ್ಠಾನ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಏರ್ಪಡಿಸಿದ್ದ ‘ತೇಜಸ್ವಿ ಓದು ಮೊಗೆದಷ್ಟು ಬೆರಗು ತೆರೆದಷ್ಟು ಅರಿವು’ ಸಾಮಾಜಿಕ ಜಾಲತಾಣಗಳ ನೇರಪ್ರಸಾರ ಕಾರ್ಯಕ್ರಮದಲ್ಲಿ ತೇಜಸ್ವಿ ಅವರ ಸಹಜ ಕೃಷಿ ಕೃತಿಯ ಬಗ್ಗೆ ಮಾತನಾಡಿದರು.

    ನೆಲದ ಉಳುಮೆ ಇಲ್ಲದೆ, ರಾಸಾಯನಿಕ ಗೊಬ್ಬರ ಬಳಕೆ ಇಲ್ಲದೆ, ಕ್ರಿಮಿನಾಶಕಗಳ ಸಿಂಪಡಣೆ ಇಲ್ಲದೆ, ಕಳೆಗಳ ನಿಮೂಲನೆ ಇಲ್ಲದೆ ಇರುವುದು ಜಪಾನ್ ಕೃಷಿ ತಜ್ಞ ಫುಕೋಕ ಅವರ ನೈಸರ್ಗಿಕ ಕೃಷಿಯ ನಾಲ್ಕು ತತ್ವಗಳಾಗಿವೆ. ಫುಕೋಕ ಅವರ ಕೃಷಿ ಚಿಂತನೆಗಳು ಇಂದಿಗೂ ಪ್ರಸ್ತುತ ಎಂಬುದನ್ನು ತೇಜಸ್ವಿ ಸಹಜ ಕೃಷಿ ಕೃತಿಯಲ್ಲಿ ವಿವರಿಸಿದ್ದಾರೆ ಎಂದರು.

    ನೈಸರ್ಗಿಕ ಕೃಷಿಯಲ್ಲಿ ಯಾರನ್ನು ಅವಲಂಬಿಸದೇ ಸ್ವಯಂ ಭೂಮಿಯನ್ನು ಫಲವತ್ತತೆ ಮಾಡುವ ಕ್ರಿಯೆ. ನೈಸರ್ಗಿಕ ಕೃಷಿ ಸದೃಢವಾದ ಭೂಮಿಯ ಸುಸ್ಥಿರತೆ ಬೆಳೆಸುವ ರೈತರ ಬದುಕನ್ನು ಸುಸ್ಥಿರಗೊಳಿಸುವಂತಹ ಕೃಷಿ ಪದ್ಧತಿಯಾಗಿದೆ. ತೇಜಸ್ವಿ ಅವರು ಸಹಜ ಕೃಷಿ ಕೃತಿಯಲ್ಲಿ ಆಡಳಿತಾತ್ಮಕ ವಿಡಂಬನೆಗಳು, ರೈತರ ದಾಸ್ಯ ಸ್ಥಿತಿ, ರಾಸಾಯನಿಕ ಕೃಷಿಯಿಂದ ಆದ ಅನಾಹುತಗಳನ್ನು ವಿಸ್ತಾರವಾಗಿ ವಿವರಿಸಿದ್ದಾರೆ ಎಂದರು.

    ತೇಜಸ್ವಿ ಪ್ರತಿಷ್ಠಾನದ ನಿರ್ವಾಹಕ ಆಕರ್ಷ್, ಕಾರ್ಯಕ್ರಮ ಸಂಯೋಜಕ ನಂದೀಶ್ ಬಂಕೇನಹಳ್ಳಿ, ತಾಂತ್ರಿಕ ಸಹಾಯಕ ಸ್ಯಾಮ್ಯುಯೆಲ್ ಹ್ಯಾರಿಸ್, ಪ್ರಜ್ವಲ್, ಪ್ರತಿಷ್ಠಾನದ ಸಿಬ್ಬಂದಿ ಸತೀಶ್ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts