More

    ಮುಂಗಾರು ಅವಧಿಗೆ ಕೃಷಿ ಸಿದ್ದತೆ; ಉತ್ತಮ ಮಳೆ ನಿರೀಕ್ಷೆ ಮಾಡಬಹುದೆಂದ ಕೃಷಿ ವಿವಿ

    ಬೆಂಗಳೂರು: ಕಳೆದ ವರ್ಷಕ್ಕೆ ಹೋಲಿಸಿದರೆ, ಈ ಬಾರಿ ಮುಂಗಾರು ಅವಧಿಯಲ್ಲಿ ವಾಡಿಕೆಗಿಂತ ಉತ್ತಮ ಮಳೆಯಾಗುವ ಸಾಧ್ಯತೆ ಹೆಚ್ಚಿದೆ ಎಂದು ಭಾರತೀಯ ಹವಾಮಾನ ಇಲಾಖೆ ಈಗಾಗಲೇ ಮುನ್ಸೂಚನೆ ನೀಡಿದೆ. ಈ ನಿಟ್ಟಿನಲ್ಲಿ ಕೃಷಿ ಉತ್ಪಾದನೆ ಹಾಗೂ ರೈತರ ಆದಾಯ ಹೆಚ್ಚಳಕ್ಕೆ ಸಿದ್ಧತೆ ಮಾಡಿಕೊಳ್ಳಬೇಕಿದೆ ಎಂದು ಬೆಂಗಳೂರು ಕೃಷಿ ವಿಶ್ವವಿದ್ಯಾಲಯ ತಿಳಿಸಿದೆ.

    ಏಪ್ರಿಲ್​ ಅಂತ್ಯದಿಂದ ಮಳೆ ಮುನ್ಸೂಚನೆಯಿದ್ದು, ಮಾಗಿ ಉಳುಮೆ ಕೈಗೊಂಡು ಮಣ್ಣು ಮತ್ತು ನೀರು ಸಂರಣೆಗೆ ಒತ್ತು ನೀಡಬೇಕು. ಮಳೆನೀರಿನ ಸಂರಣೆಗೆ ಬದು ಹಾಗೂ ಕೃಷಿ ಹೊಂಡಗಳನ್ನು ಸರಿಪಡಿಸಬೇಕು. ಎರಡು ಅಥವಾ ಮೂರನೇ ಮಳೆ ನಂತರ, ಭೂಮಿ ಹದಗೊಳಿಸಿ ಹಸಿರೆಲೆ ಗೊಬ್ಬರ ಹಾಕಬೇಕು. ಸಾವಯವ ಗೊಬ್ಬರಗಳು ಮಣ್ಣಿನ ಆರೋಗ್ಯ ಕಾಪಾಡುವಲ್ಲಿ ಹೆಚ್ಚಿನ ಪಾತ್ರ ನಿರ್ವಹಿಸುತ್ತವೆ ಎಂದು ಮಾಹಿತಿ ನೀಡಿದೆ.

    ಕಳೆದ ಬಾರಿಯ ಮಳೆ ಕೊರತೆ ಹಾಗೂ ಅಂತರ್ಜಲ ಕುಸಿತದಿಂದ ಈ ಬಾರಿ ಮಣ್ಣಿನಲ್ಲಿ ತೇವಾಂಶದ ಕೊರತೆಯಿದ್ದು ಕೆರೆಕಟ್ಟೆ ಹಾಗೂ ಅಣೆಕಟ್ಟುಗಳಿಗೆ ನೀರಿನ ಆಗಮನ ವಿಳಂಬವಾಗುವ ಸಾಧ್ಯತೆಯಿದೆ. ಈ ಪ್ರದೇಶದಲ್ಲಿ ಬೆಳೆಗಳ ಮಧ್ಯಮಾವಧಿ ಹಾಗೂ ಅಲ್ಫಾವಧಿ ತಳಿಗಳ ಬಿತ್ತನೆಗೆ ಅವಶ್ಯಕ ಬಿತ್ತನೆಬೀಜ ಸಿದ್ಧಪಡಿಸಿಕೊಳ್ಳಬೇಕು. ಮಳೆಯಾಶ್ರಿತ ಪ್ರದೇಶದಲ್ಲಿ ವಿವಿಧ ಬೆಳೆಗಳ ಸುಧಾರಿತ ತಳಿಗಳ ಬಿತ್ತನೆಯನ್ನು ಸಂಗ್ರಹಿಸಿಕೊಳ್ಳಬೇಕು. ಏಪ್ರಿಲ್​ ಕೊನೆಯ ಅವಧಿಯಲ್ಲಿ ಹತ್ತಿ ಬಿತ್ತಬಹುದು. ಮೇ ತಿಂಗಳಿನಲ್ಲಿ ತೊಗರಿ, ಹುರುಳಿ, ಎಳ್ಳು, ಹೆಸರು, ಅವರೆ, ಅಲಸಂದೆ, ಆಲೂಗಡ್ಡೆ ಬಿತ್ತುವುದು ಉತ್ತಮ. ಜೂನ್​ನಿಂದ ಮುಸುಕಿನ ಜೋಳ, ನೆಲಗಡಲೆ, ರಾಗಿ, ಸಿರಿಧಾನ್ಯ, ಹುರುಳಿ ಮುಂತಾದವುಗಳನ್ನು ಬಿತ್ತನೆ ಮಾಡಬಹುದಾಗಿದೆ ಎಂದು ಸೂಚಿಸಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts