More

    ಎನ್.ಆರ್.ಪುರದಲ್ಲಿ ಕೃಷಿ ಚಟುವಟಿಕೆ ಚುರುಕು

    ಎನ್.ಆರ್.ಪುರ: ತಾಲೂಕಿನಲ್ಲಿ ಭರ್ಜರಿ ಮಳೆಯಾಗುತ್ತಿರುವುದು ಕೃಷಿಕರಲ್ಲಿ ಮಂದಹಾಸ ಮೂಡಿಸಿದೆ.

    ಭದ್ರಾ ಹಿನ್ನೀರಿನ ಪ್ರಮಾಣ ಏರಿಕೆಯಾಗಿರುವುದರಿಂದ ಮೀನುಗಾರರಿಗೆ ಬಹಳಷ್ಟು ಮೀನುಗಳು ದೊರಕುತ್ತಿವೆ. ಮೆಣಸೂರಿನ ಶಾಶ್ವತ ಕುಡಿಯುವ ನೀರಿನ ಯೋಜನೆಯ ಬ್ಯಾರಿಕೇಡ್ ಮೇಲೆ ನೀರು ರಭಸವಾಗಿ ಹರಿಯುತ್ತಿದ್ದು, ಜನರು ಈ ನೀರಿನ ಹರಿವು ನೋಡಲು ಬರುತ್ತಿದ್ದಾರೆ. ಇಲ್ಲಿ ಜನರು ಬಲೆ, ಸೊಳ್ಳೆ ಪರದೆ ಹಿಡಿದು ಮೀನು ಹಿಡಿಯುತ್ತಿದ್ದಾರೆ. ಆದರೆ ಮಕ್ಕಳನ್ನೂ ಕರೆತರುತ್ತಿರುವುದರಿಂದ ನೀರಿನ ರಭಸದಲ್ಲಿ ಅನಾಹುತ ಸಂಭವಿಸುವ ಸಾಧ್ಯತೆಗಳಿವೆ. ಯಾವುದೇ ಅನಾಹುತ ಸಂಭವಿಸಬಾರದೆಂದು ಪೊಲೀಸರು ಜನರನ್ನು ನಿಯಂತ್ರಿಸುತ್ತಿದ್ದಾರೆ. ಮಕ್ಕಳು ಇಲ್ಲಿಗೆ ಬಾರದಂತೆ ಎಚ್ಚರಿಕೆ ನೀಡುತ್ತಿದ್ದಾರೆ. ಪೊಲೀಸ್ ಸಿಬ್ಬಂದಿ ಈ ಪ್ರದೇಶಕ್ಕೆ ಆಗಾಗ ಗಸ್ತು ತಿರುಗುತ್ತಿದ್ದು, ಮೀನು ಹಿಡಿಯುವವರಿಗೆ ಹಾಗೂ ಜನರಿಗೆ ಎಚ್ಚರಿಕೆ ನೀಡಿ ಕಳುಹಿಸುತ್ತಿದ್ದಾರೆ. ಮಾತುಕೇಳದೆ ಪದೇ ಪದೆ ಬರುತ್ತಿರುವ ಕೆಲವು ಪಡ್ಡೆ ಹುಡುಗರಿಗೆ ಪೊಲೀಸರು ಲಾಠಿ ಏಟು ನೀಡಿದ್ದಾರೆ.
    ಸೋಮವಾರ ರಾತ್ರಿ ಗಾಳಿ-ಮಳೆಗೆ ಕಾನೂರು ಗ್ರಾಪಂ ಗುಂಡವಾನಿ ಅಣ್ಣಪ್ಪ ಅವರ ಜಾನುವಾರು ಕೊಟ್ಟಿಗೆ ಕುಸಿದಿದೆ. ಜಾನುವಾರುಗಳು ಪ್ರಾಣಾಪಾಯದಿಂದ ಪಾರಾಗಿವೆ. ಮುತ್ತಿನಕೊಪ್ಪ ಗ್ರಾಪಂನ ಲಲಿತಾ ಎಂಬುವವರ ಮನೆಯ ಹಿಂಭಾಗದ ಗೋಡೆ ಕುಸಿದಿದೆ. ಪಿಡಿಒ ಸುಮಿತ್ರಾ, ಗ್ರಾಮ ಲೆಕ್ಕಿಗ ಕುಮಾರಸ್ವಾಮಿ ಸ್ಥಳ ಪರಿಶೀಲಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts