More

    ಎಸಿ ಕಾರು ಬಿಟ್ಟು ಎತ್ತಿನ ಗಾಡಿ ಏರಿದ್ರು ಕೃಷಿ ಸಚಿವರು!

    ಚಿಕ್ಕಬಳ್ಳಾಪುರ: ಎ.ಸಿ.ಕಾರು ಬಿಟ್ಟು ಎತ್ತಿನಗಾಡಿಯಲ್ಲಿ ಏರಿ ಬಂದ ಕೃಷಿ ಸಚಿವರು ಕಾಮಗಾರಿಗೆ ಚಾಲನೆ ನೀಡಿ, ಚಿಕ್ಕಬಳ್ಳಾಪುರ ರೈತರೊಂದಿಗೆ ಕಾಲ ಕಳೆದರು.

    ನಗರದ ಜಂಟಿ ಕೃಷಿ ನಿದೇರ್ಶಕರ ಕಚೇರಿ ಆವರಣದಲ್ಲಿ ಬುಧವಾರ ೯ ಕೋಟಿ ವೆಚ್ಚದ ಕೋಲ್ಡ್ ಸ್ಟೋರೇಜ್ ಕಟ್ಟಡಕ್ಕೆ ಕೃಷಿ ಸಚಿವ ಬಿ.ಸಿ.ಪಾಟೀಲ್​ ಗುದ್ದಲಿ ಪೂಜೆ ನೆರವೇರಿಸಿದರು.ಹರಿಹರಪುರ ಗೇಟ್ ಬಳಿ ಗೋ ಪೂಜೆ ಮಾಡಿ ಎನ್.ಎಂ.ಎಸ್.ಎ. ಆರ್. ಎಂ. ಡಿ. ಯೋಜನೆಯ ಫಲಾನುಭವಿಗಳಿಗೆ ಹಸು ಹಾಗೂ ಕುರಿಗಳ ವಿತರಣೆ ಮಾಡಿದರು.

    ತದನಂತರ ರೈತರ ತೋಟಕ್ಕೆ ಭೇಟಿ ನೀಡಿ ದ್ರಾಕ್ಷಿ, ಸೀಬೆ ಕಟಾವು ಮಾಡಿ,ದ್ರಾಕ್ಷಿ ಸೀಬೆ ಸವಿದು ಸಂತಸಪಟ್ಟರು.ಇದಾದನಂತರ ಸಾವಯುವ ಕೃಷಿ ಪ್ರಾತ್ಯಕ್ಷತೆಗಳನ್ನು ಕಣ್ತುಂಬಿಕೊಂಡು, ರಾಗಿ ಬೆಳೆಯಲ್ಲಿ ರೈತರ ಮೊಬೈಲ್ ಅಪ್ ನಲ್ಲಿ ಸಮೀಕ್ಷೆ ನಡೆಸುವುದರ ಬಗ್ಗೆ ಖುದ್ದು ಸಚಿವರೇ ಪರಿಶೀಲಿಸಿದರು.


    ಇನ್ನೂ ರೈತರಿಗೆ ಸಸಿಗಳ ವಿತರಣೆ, ಕೆರೆಯಲ್ಲಿ ಮೀನು ಮರಿಗಳನ್ನ ಬಿಡುವುದು, ರೇಷ್ಮೆ ಹುಳುಗಳಿಗೆ ಸೊಪ್ಪು ಹಾಕಿದ್ದು, ಕೊನೆಗೆ ಡ್ರೋಣ್ ಮೂಲಕ ಕ್ರಿಮಿನಾಶಕ ಸಿಂಪಡಣೆಯನ್ನ ಸಹ ಕಣ್ತುಂಬಿಕೊಂಡು ಸಚಿವರು ಇಡೀ ದಿನ ರೈತರೊಂದಿಗೆ ಕಾಲ ಕಳೆದರು.

    ಪ್ರಾಯೋಗಿಕವಾಗಿ ರೈತರ ತೋಟಗಳಿಗೆ ಭೇಟಿ ನೀಡಿ ವಾಪಾಸ್ಸಾದ ಸಚಿವರು ಗೊಲ್ಲಹಳ್ಳಿ ಬಳಿ ವೇದಿಕೆ ಕಾರ್ಯಕ್ರಮದಲ್ಲಿ ಭಾಗಿಯಾಗಿ ಸರ್ಕಾರದ ಸಾಧನೆ ಹಾಗೂ ಕೃಷಿ ಇಲಾಖೆಯ ಸೌಲಭ್ಯಗಳನ್ನ ರೈತರು ಸದುಪಯೋಗಪಡಿಸಿಕೊಂಡು ಅರ್ಥಿಕವಾಗಿ ಸದೃಢರಾಗುವಂತೆ ಹೇಳಿದರು. ಇದೇ ವೇಳೆ ಜಿಲ್ಲಾ ಉಸ್ತುವಾರಿ ಹಾಗೂ ಆರೋಗ್ಯ ಸಚಿವ ಸುಧಾಕರ್​​ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts