More

    ಕೇರಳದಲ್ಲಿ ಲೈವ್ ಕಾರ್ಯಕ್ರಮದಲ್ಲೇ ಪ್ರಜ್ಞಾಹೀನರಾಗಿ ಬಿದ್ದು ಸಾವನ್ನಪ್ಪಿದ ಕೃಷಿ ತಜ್ಞ

    ತಿರುವನಂತಪುರಂ: ಕೇರಳದ ದೂರದರ್ಶನದ ಸ್ಟುಡಿಯೋದಲ್ಲಿ ನೇರ ಪ್ರಸಾರದ ವೇಳೆ ಕೃಷಿ ತಜ್ಞರೊಬ್ಬರು ಶುಕ್ರವಾರ ಹಠಾತ್ತನೆ ಪ್ರಜ್ಞಾಹೀನರಾಗಿ ಸಾವನ್ನಪ್ಪಿರುವುದು ಬೆಳಕಿಗೆ ಬಂದಿದೆ. ಪೊಲೀಸರು ಈ ಮಾಹಿತಿ ನೀಡಿದ್ದು, ಚಾನೆಲ್ ಮೂಲಗಳ ಪ್ರಕಾರ ಕೇರಳ ಕೃಷಿ ವಿಶ್ವವಿದ್ಯಾಲಯದ ನಿರ್ದೇಶಕರಾಗಿದ್ದ ಡಾ. ಅನಿ ಎಸ್. ದಾಸ್ ವಾಹಿನಿಯಲ್ಲಿ ಕಾರ್ಯಕ್ರಮವೊಂದರ ನೇರ ಪ್ರಸಾರದ ವೇಳೆ (59) ಪ್ರಜ್ಞೆ ತಪ್ಪಿ ಬಿದ್ದಿದ್ದಾರೆ.

    ದೂರದರ್ಶನದ ಕೃಷಿ ದರ್ಶನ ಕಾರ್ಯಕ್ರಮದ ವೇಳೆ ಸಂಜೆ 6.30ರ ಸುಮಾರಿಗೆ ಈ ಘಟನೆ ನಡೆದಿದೆ ಎಂದು ಚಾನೆಲ್ ಮೂಲಗಳು ತಿಳಿಸಿವೆ. ಅವರನ್ನು ಇಲ್ಲಿನ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಕರೆದೊಯ್ದರೂ ಉಳಿಸಿಕೊಳ್ಳಲಾಗಲಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಇತ್ತೀಚಿನ ದಿನಗಳಲ್ಲಿ ಕಾರ್ಯಕ್ರಮದಲ್ಲಿ ಅತಿಥಿಗಳು ಹೀಗೆ ಪ್ರಜ್ಞಾಹೀನರಾಗಿ ಬೀಳುತ್ತಿರುವುದು ಇದೇ ಮೊದಲಲ್ಲ. ಐಐಟಿ ಕಾನ್ಪುರದ ವಿದ್ಯಾರ್ಥಿ ವ್ಯವಹಾರಗಳ ಡೀನ್ ಸಮೀರ್ ಖಾಂಡೇಕರ್ ಅವರು ಹಳೆಯ ವಿದ್ಯಾರ್ಥಿಗಳ ಸಮ್ಮೇಳನದಲ್ಲಿ ಆರೋಗ್ಯದ ಕುರಿತು ಭಾಷಣ ಮಾಡುವಾಗ ಹೃದಯಾಘಾತಕ್ಕೆ ಒಳಗಾಗಿ ನಿಧನರಾದರು. ಖಾಂಡೇಕರ್ ಅವರು ಇದ್ದಕ್ಕಿದ್ದಂತೆ ಬೆವರಲು ಪ್ರಾರಂಭಿಸಿ, ವೇದಿಕೆಯ ಮೇಲೆ ಬಿದ್ದರು. ಆಗ ಎಲ್ಲರೂ ಆಶ್ಚರ್ಯಚಕಿತರಾಗಿ ಆಸ್ಪತ್ರೆಗೆ ಕರೆದೊಯ್ಯುವಷ್ಟರಲ್ಲಿ ಮೃತಪಟ್ಟಿದ್ದರು. 

    ಗುವಾಹಟಿಗೆ ಹೋಗುತ್ತಿದ್ದ ವಿಮಾನ ತುರ್ತು ಭೂಸ್ಪರ್ಶ; ಪಾಸ್‌ಪೋರ್ಟ್ ಇಲ್ಲದೆ ಢಾಕಾ ತಲುಪಿದ ಹತ್ತಾರು ಭಾರತೀಯರು

    ಧಾರ್ಮಿಕ ಪ್ರವಾಸೋದ್ಯಮದ ಹುಡುಕಾಟದಲ್ಲಿ 97 ಪ್ರತಿಶತ ಜಿಗಿತ, ಆಕರ್ಷಣೆಯ ಕೇಂದ್ರವಾದ ಅಯೋಧ್ಯೆ ರಾಮಮಂದಿರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts