More

    ಆತಂಕ ಹೆಚ್ಚಿಸಿದ ಅಘನಾಶಿನಿ

    ಸಿದ್ದಾಪುರ: ತಾಲೂಕಿನಲ್ಲಿ ಗಾಳಿ-ಮಳೆಯ ಆರ್ಭಟ ಮುಂದುವರೆದಿದ್ದು ಹಲವೆಡೆ ವಿದ್ಯುತ್ ತಂತಿಯ ಮೇಲೆ ಮರಬಿದ್ದು ಹಾನಿ ಸಂಭವಿಸಿದೆ. ಪಟ್ಟಣದ ನ್ಯಾಯಾಲಯದ ಎದುರಿನ ಕೌಂಪೌಂಡ್ ಗೋಡೆ ಕುಸಿದುಬಿದ್ದಿದೆ. ಸಿದ್ದಾಪುರ-ಗೊಳಿಮಕ್ಕಿ ರಾಜ್ಯ ಹೆದ್ದಾರಿಯ ಮಾನಿಹೊಳೆ (ಅಘನಾಶಿನಿ) ತುಂಬಿ ಹರಿಯುತ್ತಿದ್ದು, ಆತಂಕ ಹೆಚ್ಚಿಸಿದೆ.

    ನಿರಂತರ ಗಾಳಿ-ಮಳೆಯಿಂದ ತಾಲೂಕಿನ ಗ್ರಾಮೀಣ ಭಾಗದಲ್ಲಿ ವಿದ್ಯುತ್ ಕಂಬ ಹಾಗೂ ವಿದ್ಯುತ್ ತಂತಿಯ ಮೇಲೆ ಮರಗಳು ಬಿದ್ದು ಹಾನಿ ಸಂಭವಿಸಿದ್ದು ಇದರಿಂದ ವಿದ್ಯುತ್ ಸಂಪರ್ಕ ನೀಡುವುದಕ್ಕೆ ಹೆಸ್ಕಾಂ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿ ಹೈರಾಣಾಗುತ್ತಿದ್ದಾರೆ. ಒಂದು ಕಡೆ ಸಂಪರ್ಕ ನೀಡುತ್ತಿದ್ದಂತೆ ಮತ್ತೊಂದು ಕಡೆ ಮರ ಬೀಳುತ್ತಿರುವುದು ಹೆಸ್ಕಾಂನವರ ಸಂಕಟ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ.

    ಶಿರಸಿ-ಸಿದ್ದಾಪುರ ತಾಲೂಕಿನಲ್ಲಿ ಮಳೆ ನಿರಂತರವಾಗಿ ಭಾನುವಾರ ಬಿದ್ದಿದ್ದರಿಂದ ಮಾನಿಹೊಳೆ(ಅಘನಾಶಿನಿ) ನದಿ ತುಂಬಿ ಹರಿಯುತ್ತಿದೆ. ಹೊಸದಾಗಿ ನಿರ್ಮಿಸಿದ ಮಾನಿ ಹೊಳೆ ಸೇತುವೆಗೆ ನೀರು ತಾಗಿಕೊಂಡು ಹೋಗುತ್ತಿರುವುದರಿಂದ ಇದನ್ನು ನೋಡಲು ಜನ ಮುಗಿಬಿದ್ದಿದ್ದರು. ಅದರಂತೆ ಸಾಗರ ತಾಲೂಕಿನಲ್ಲಿ ಮಳೆ ಹೆಚ್ಚಾಗಿದ್ದರಿಂದ ವರದಾ ನದಿಯು ತುಂಬಿ ಹರಿಯುತ್ತಿರುವುದರಿಂದ ನೆಜ್ಜೂರು, ಕಲ್ಯಾಣಪುರದಲ್ಲಿ ಹಳ್ಳಗಳು ತುಂಬಿ ಹರಿಯುತ್ತಿದ್ದು ಗದ್ದೆ ಬಯಲುಗಳೆಲ್ಲ ಸಮುದ್ರದಂತೆ ಕಂಡುಬರುತ್ತಿದೆ.

    ಭಾನುವಾರ ಬೆಳಗಿನಿಂದ ಸೋಮವಾರ ಬೆಳಗಿನವರೆಗೂ ಸುರಿದ ಮಳೆ ನಂತರ ಸ್ವಲ್ಪ ಕಡಿಮೆ ಆಗಿದ್ದು, ಆಗಾಗ ಬೀಸುವ ಗಾಳಿ ಜನರಲ್ಲಿ ಆತಂಕ ಮೂಡಿಸುವಂತಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts