More

    ಅವಸಾನದಂಚಿಗೆ ಅಗಸ್ತ್ಯ ತೀರ್ಥ

    ಲಕ್ಷ್ಮೇಶ್ವರ: ಕರ್ನಾಟಕದ ಇತಿಹಾಸದಲ್ಲಿ ಪುಲಿಗೆರೆ ಅಂದರೆ, ಇಂದಿನ ಲಕ್ಷ್ಮೇಶ್ವರ ಐತಿಹಾಸಿಕ ಹಿನ್ನೆಲೆ ಹೊಂದಿದೆ. 50 ಕ್ಕೂ ಹೆಚ್ಚು ದೇವಾಲಯ, 5 ಮಸೀದಿ, 5 ಬಸೀದಿ, 5 ಅಗಸಿ ಬಾಗಿಲು, ಪಂಚ ತೀರ್ಥಗಳನ್ನೊಳಗೊಂಡ ಐತಿಹಾಸಿಕ ತಾಣವಾಗಿದೆ. ಆದರೆ, ನಿರ್ವಹಣೆಯ ಕೊರತೆ, ನಿರ್ಲಕ್ಷ್ಯಂದ ಇಲ್ಲಿನ ಇತಿಹಾಸ ಮರೀಚಿಕೆಯಾಗುತ್ತಿದೆ. ಪಂಚತೀರ್ಥಗಳಲ್ಲೊಂದಾದ ಅಗಸ್ತ್ಯ ತೀರ್ಥವೀಗ ಅವಸಾನದಂಚಿಗೆ ತಲುಪಿದೆ. ತ್ಯಾಜ್ಯ ವಿಲೇವಾರಿ, ಅನೈತಿಕ ಚಟುವಟಿಕೆಗಳ ತಾಣವಾಗಿ ಮಾರ್ಪಟ್ಟಿರುವುದು ದುರ್ದೈವದ ಸಂಗತಿ.

    ಇತಿಹಾಸ: ಪಟ್ಟಣದ ಪೂರ್ವದಿಕ್ಕಿನ ಹೊರವಲಯದಲ್ಲಿರುವ ಈ ಪವಿತ್ರ ಕ್ಷೇತ್ರದಲ್ಲಿ ಅಗಸ್ತ್ಯ ಮುನಿಗಳು ಇಲ್ಲಿ ಶಿವಲಿಂಗ ಪ್ರತಿಷ್ಠಾಪಿಸಿ ತಪಸ್ಸು ಮಾಡಿರುವ ಐತಿಹ್ಯವಿದೆ. ಸಮಾರು 1.15 ಎಕರೆ ವಿಸ್ತೀರ್ಣವುಳ್ಳ ಈ ಸ್ಥಳದಲ್ಲಿ ಅಕ್ಕ (ಗಂಗೆ), ತಂಗಿ(ಗೌರಿ) ಹೆಸರಿನ 2 ಹೊಂಡಗಳಿವೆ. ಮಳೆಗಾಲದಲ್ಲಿ ಇಲ್ಲಿನ ಹೊಂಡಗಳು ತುಂಬಿದರೆ ಸಂಕ್ರಾಂತಿಯವರೆಗೂ ದೇವಸ್ಥಾನದಲ್ಲಿ ನೀರು ಸಂಗ್ರವಾಗುತ್ತದೆ. ಹೊಂಡದಲ್ಲಿ ಸ್ನಾನ ಮಾಡಿದರೆ ರೋಗ-ರುಜಿನಗಳು ಮಾಯವಾಗಿ, ಪಾಪಕರ್ಮ ಕಳೆದು ಪುಣ್ಯ ಲಭಿಸುತ್ತದೆ ಎಂಬುದು ಜನರ ನಂಬಿಕೆ.

    ಸದ್ಯ ಈ ಪುಣ್ಯಕ್ಷೇತ್ರ ನಿರ್ಲಕ್ಷ್ಯಕ್ಕೊಳಗಾಗಿ ಪಾಳುಬಿದ್ದಿದೆ. ಹೊರವಲಯದಲ್ಲಿರುವ ದೇವಸ್ಥಾನ ಪ್ರದೇಶದಲ್ಲಿ ಅಕ್ರಮ, ಅನೈತಿಕ ಚಟುವಟಿಕೆಗಳು ನಡೆಯುತ್ತವೆ. ಸುತ್ತಲಿನ ಜನರು ಇಲ್ಲಿರುವ ಪವಿತ್ರ ತೀರ್ಥಗಳಲ್ಲಿ ತ್ಯಾಜ್ಯಗಳನ್ನು ಎಸೆದು ಮಲಿನಗೊಳಿಸುತ್ತಿದ್ದಾರೆ. ಸ್ನಾನ ಮಾಡಲು ಹೋಗಿ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಕಳೆದ 2 ದಿನಗಳ ಹಿಂದಷ್ಟೇ 16 ವರ್ಷದ ಬಾಲಕ ಪ್ರಾಣ ಕಳೆದುಕೊಂಡಿದ್ದಾನೆ. ಸೂಕ್ತ ನಿರ್ವಹಣೆ ಇಲ್ಲದ್ದರಿಂದ ಈಶ್ವರ ದೇವಸ್ಥಾನ, ಅಣ್ಣ-ತಂಗಿ ದೇವಸ್ಥಾನ, ಅಕ್ಕ-ತಂಗಿ ತೀರ್ಥಗಳು ಅವಸಾನದಂಚಿಗೆ ತಲುಪುತ್ತಿವೆೆ.

    ಪ್ರತಿವರ್ಷ ಮಕರ ಸಂಕ್ರಮಣ ಸಮಯದಲ್ಲಿ 2 ದಿನ ನಡೆಯುವ ಜಾತ್ರೆಗಾಗಿ ಪುರಸಭೆಯವರು ಸ್ವಚ್ಛತಾ ಕಾರ್ಯ ಮಾಡುತ್ತಾರೆ. ಮತ್ತೇ ಇತ್ತ ಕಣ್ಣೆತ್ತಿಯೂ ನೋಡುವುದಿಲ್ಲ.

    ಇಲ್ಲಿನ ಇತಿಹಾಸ, ಸಂಸ್ಕೃತಿ ಹಾಗೂ ಕುರುಹುಗಳನ್ನು ಉಳಿಸಿ ಸಂರಕ್ಷಿಸಬೇಕಾಗಿದೆ. ಮೊದಲು ಪುರಸಭೆಯವರು ಸುತ್ತಲೂ ತಂತಿಬೇಲಿ ಹಾಕಿದರೆ ಸುಂದರ ಉದ್ಯಾನ ನಿರ್ವಣವಾಗುತ್ತದೆ. ಇದರಿಂದ ಅಕ್ರಮ ಚಟುವಟಿಕೆಗಳು, ಸಾವು-ನೋವಿನ ಘಟನೆ ತಡೆಯಬಹುದು.

    | ಡಾ. ಸಿ.ವಿ. ಕೆರಿಮನಿ, ನಿವೃತ್ತ ಪ್ರಾಚಾರ್ಯ

    ಅಗಸ್ತ್ಯ ತೀರ್ಥದ ಬಗ್ಗೆ ಸಂಪೂರ್ಣ ಮಾಹಿತಿ ಪಡೆದುಕೊಂಡಿದ್ದು ಸ್ಥಳ ಪರಿಶೀಲಿಸಿದ್ದೇನೆ. ತಹಸೀಲ್ದಾರರೊಂದಿಗೆ ಮಾತನಾಡಿ ಈ ಸ್ಥಳ ಹದ್ದುಬಸ್ತ್ ಮಾಡಿಸುವ ಕಾರ್ಯ ಮಾಡಲಾಗುವುದು. ಪುರಸಭೆ ಸಾಮಾನ್ಯ ಸಭೆಯಲ್ಲಿ ರ್ಚಚಿಸಿ ಹಂತ ಹಂತವಾಗಿ ಈ ಕ್ಷೇತ್ರದ ಸ್ವಚ್ಛತೆ, ಸಂರಕ್ಷಣೆ, ಅಭಿವೃದ್ಧಿ ಕಾರ್ಯ ಕೈಗೊಳ್ಳಲಾಗುವುದು.

    | ಶಂಕರ ಹುಲ್ಲಮ್ಮನವರ, ಮುಖ್ಯಾಧಿಕಾರಿ ಪುರಸಭೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts