More

    VIDEO| ಸಿಎಂ ಕೇಜ್ರಿವಾಲ್​ ದುರಾಡಳಿತ ಹೀಗಿದೆ ನೋಡಿ ಎಂದು ಸ್ಟಿಂಗ್​ ವಿಡಿಯೋ ಬಿಡುಗಡೆ ಮಾಡಿದ ಬಿಜೆಪಿ!

    ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿರುವ ಶಾಲೆಗಳ ಅವ್ಯವಸ್ಥೆ ಕುರಿತಾದ ವಿಡಿಯೋ ಬಿಡುಗಡೆ ಮಾಡಿ ಆಮ್​ ಆದ್ಮಿ ಪಕ್ಷಕ್ಕೆ ತಿರುಗೇಟು ನೀಡಿದ್ದ ಬಿಜೆಪಿ, ಇದೀಗ ದೆಹಲಿಯ ಮೊಹಲ್ಲಾ ಕ್ಲಿನಿಕ್​ ಯೋಜನೆ ಅವ್ಯವಸ್ಥೆ ಸಾರುವ ಮತ್ತೊಂದು ಸ್ಟಿಂಗ್​ ವಿಡಿಯೋ ಬಿಡುಗಡೆ ಮಾಡಿ ಸಿಎಂ ಅರವಿಂದ್​ ಕೇಜ್ರಿವಾಲ್​ ಸರ್ಕಾರದ ಆಡಳಿತವನ್ನು ಅಣುಕಿಸಿದ್ದಾರೆ.

    ಫೆ. 8ರಂದು ನಡೆಯುವ ದೆಹಲಿ ಚುನಾವಣೆಗೆ ಕೇಜ್ರಿವಾಲ್​ ವಿರುದ್ಧ ಬಿಜೆಪಿ ತೊಡೆ ತಟ್ಟಿದೆ. ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ.ಪಿ ನಡ್ಡಾ ಅವರು ಗುರುವಾರ ಟ್ವೀಟ್​ ಮೂಲಕ ವಿಡಿಯೋವನ್ನು ಬಿಡುಗಡೆ ಮಾಡಿದ್ದು, ದೆಹಲಿಯಲ್ಲಿ ಆಪ್ ಶುರು ಮಾಡಿರುವ ಮೊಹಲ್ಲಾ ಕ್ಲಿನಿಕ್​ ಔಷಧ ಮತ್ತು ಮೂಲಭೂತ ಸೌಕರ್ಯ ಸೇರಿದಂತೆ ಸಾಕಷ್ಟು ಕೊರತೆ ಎದುರಿಸುತ್ತಿದೆ ಎಂದು ವಾದಿಸಿದ್ದಾರೆ.

    ಕೇಜ್ರಿವಾಲ್​ ಅವರೇ ಪ್ರತಿವರ್ಷ ನೀವು 1,000 ಮೊಹಲ್ಲಾ ಕ್ಲಿನಿಕ್ಸ್​ಗಳನ್ನು ತೆರೆಯುವುದಾಗಿ ಭರವಸೆ ನೀಡಿದ್ದಿರಿ. ನೀವು ತೆರೆದಿರುವ ಬೆರಳೆಣಿಕೆಯ ಕ್ಲಿನಿಕ್​​ಗಳು ಸಾಮಾನ್ಯ ಸೌಕರ್ಯಗಳು ಇಲ್ಲದೆ ಕೊತೆಯನ್ನು ಎದುರಿಸುತ್ತಿವೆ ಎಂದಿದ್ದಾರೆ.

    ಇದಾದ ಕೆಲವೇ ಸಮಯದಲ್ಲೂ ಗೃಹಸಚಿವ ಅಮಿತ್​ ಷಾ, ರೀಟ್ವೀಟ್​ ಮಾಡಿ ಶಾಲಾ ಅವ್ಯವಸ್ಥೆ ಬಳಿಕ ಇದೀಗ ಕೇಜ್ರಿವಾಲ್​ ಅವರ ಆರೋಗ್ಯ ಕ್ರಾಂತಿಯನ್ನು ಬಹಿರಂಗಪಡಿಸಲಾಗಿದೆ. ಸ್ವಾರ್ಥ ರಾಜಕಾರಣದಿಂದಾಗಿ ದೆಹಲಿ ಬಡ ಕ್ಲಿನಿಕ್​ಗಳನ್ನು ಪಡೆದುಕೊಂಡಿವೆ. ಪ್ರಧಾನಿ ಮೋದಿ ಅವರ ಆಯುಷ್ಮಾನ್​ ಯೋಜನೆಯಿಂದ ದೆಹಲಿ ಜನರನ್ನು ದೂರವಿಟ್ಟಿದ್ದೀರಾ ಇದಕ್ಕೆ ನಿಮಗೆ ತಕ್ಕ ಉತ್ತರ ಸಿಗಲಿದೆ ಎಂದು ಷಾ ಕಿಡಿಕಾರಿದ್ದಾರೆ.

    ಈ ಹಿಂದೆ ಶಾಲಾ ಅವ್ಯವಸ್ಥೆ ಬಗ್ಗೆ ಬಿಜೆಪಿ ಟ್ವೀಟ್​ ಬಗ್ಗೆ ಕಿಡಿಕಾರಿದ್ದ ಬಿಜೆಪಿ 48 ಗಂಟೆಗಳ ಕಾಲ ಬಿಜೆಪಿ ಚುನಾವಣಾ ಪ್ರಚಾರವನ್ನು ಬ್ಯಾನ್​ ಮಾಡುವಂತೆ ಚುನಾವಣಾ ಆಯೋಗವನ್ನು ಆಗ್ರಹಿಸಿತ್ತು. ಬಿಜೆಪಿ ನಕಲಿ ವಿಡಿಯೋಗಳನ್ನು ಹರಿಬಿಡುತ್ತಿದೆ ಎಂದು ಆರೋಪಿಸಿತ್ತು. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts