More

    ನಾನು ಬಂದ ಮೇಲೆ ಡಿ.ಕೆ. ಶಿವಕುಮಾರ್​​ಗೆ ಸೋಲಿನ ಭಯ ಕಾಡುತ್ತಿದೆ: ಆರ್​. ಅಶೋಕ್​

    ರಾಮನಗರ: ನಾನು ಬಂದ ಮೇಲೆ ಡಿ.ಕೆ. ಶಿವಕುಮಾರ್ ಅವರಿಗೆ ಸೋಲಿನ ಭಯ ಕಾಡುತ್ತಿದೆ ಎಂದು ಕಂದಾಯ ಸಚಿವ ಹಾಗೂ ಕನಕಪುರ ಬಿಜೆಪಿ ಅಭ್ಯರ್ಥಿ ಆರ್​. ಅಶೋಕ್​ ಹೇಳಿದರು.

    ನೂರಾರು ವರ್ಷಗಳ ಇತಿಹಾಸ

    ಕನಕಪುರದ ಮರಳೆ ಗ್ರಾಮದಲ್ಲಿ ಮಾತನಾಡಿದ ಆರ್​. ಅಶೋಕ್​, ಮರಳೇಗವಿ ಮಠಕ್ಕೆ ಭೇಟಿ ಕೊಟ್ಟು, ಗುರುಗಳ ಆಶೀರ್ವಾದ ಪಡೆದಿದ್ದೇನೆ. ಈ ಮಠಕ್ಕೆ ನೂರಾರು ವರ್ಷಗಳ ಇತಿಹಾಸ ಇದೆ. ಇಂದು ನಾಲ್ಕನೇ ದಿನದ ಪ್ರಚಾರ ಮಾಡುತ್ತಿದ್ದೇನೆ. ನಾನು ಬಂದ ಮೇಲೆ ಡಿ.ಕೆ. ಶಿವಕುಮಾರ್ ಅವರ ಶ್ರೀಮತಿಯವರು ಕೂಡ ಚುನಾವಣಾ ಪ್ರಚಾರಕ್ಕೆ ಬರುವಂತೆ ಆಗಿದೆ ಎಂದರು.

    ಇದನ್ನೂ ಓದಿ: ಮಾನವೀಯತೆ ಮರೆತ ಸುಡಾನ್ ನಾಗರಿಕರು: ಮನೆ ಖಾಲಿ ಮಾಡಲು ಒತ್ತಾಯ, ಕನ್ನಡಿಗರು ಅತಂತ್ರ

    ಭ್ರಮೆಗೆ ತಕ್ಕ ಉತ್ತರ ಕೊಡಬಹುದು

    ನಾನು ಎಲ್ಲೆಲ್ಲಿ ಹೋಗುತ್ತೀನೋ ಅಲ್ಲಿಗೆ ಡಿ.ಕೆ. ಸುರೇಶ್ ಕೂಡ ಹೋಗುತ್ತಿದ್ದಾರೆ. ಅವರ ಹುಟ್ಟೂರಿಗೂ ನಾನು ಹೋಗಿದ್ದೇನೆ. ನಾನು ಜೆಡಿಎಸ್ ಮುಖಂಡರಿಗೆ ಮನವಿ ಮಾಡುತ್ತೇನೆ. ಇಲ್ಲಿ ಬಿಜೆಪಿ ಗೆಲ್ಲುವ ವಾತವರಣ ನಿರ್ಮಾಣ ಆಗುತ್ತಿದೆ. ಶಿವಕುಮಾರ್ ಹಾಗೂ ಕುಮಾರಸ್ವಾಮಿ ಜೋಡೆತ್ತಿನ ಪರಿಸ್ಥಿತಿಯನ್ನು ನೀವು ನೋಡಿದ್ದೀರಿ. ಜೋಡೆತ್ತುಗಳ ನಡವಳಿಕೆಯನ್ನು ನೀವು ನೋಡಿದ್ದೀರಿ. ಕನಕಪುರದಲ್ಲಿ ದಿನ ನಿತ್ಯ ಗಲಾಟೆಗಳು ನಡೆಯುತ್ತಿವೆ. ಇಬ್ಬರು ಮತ್ತೆ ಜೋಡೆತ್ತು ಆದರೆ, ನಿಮ್ಮ ಕಥೆ ಏನು ಅಂತಾ ಯೋಚನೆ ಮಾಡಿ. ಅದಕ್ಕಾಗಿ ನಿಮಗೆ ಒಳ್ಳೆಯ ಅವಕಾಶ ಸಿಕ್ಕಿದೆ. ಶಿವಕುಮಾರ್ ವಿರೋಧಿ ಮತಗಳ ಒಟ್ಟಾಗಿ ಚುನಾವಣೆ ಮಾಡಿದರೆ ಶಿವಕುಮಾರ್ ಅವರನ್ನು ಮಣಿಸಬಹುದು. ನಾವೇ ಗೆಲ್ತೀವಿ ಅನ್ನೋ ಭ್ರಮೆಗೆ ತಕ್ಕ ಉತ್ತರ ಕೊಡಬಹುದು ಎಂದು ಹೇಳಿದರು.

    ಸೋಲಿನ ಭಯ ಕಾಡುತ್ತಿದೆ

    ಕನಕಪುರದ ಜನರು ನನಗೆ ಬೆಂಬಲ ಕೊಡುತ್ತಿದ್ದಾರೆ. ಹಿಂದೆಲ್ಲ ಚುನಾವಣೆಗೆ ನಿಂತವರೆಲ್ಲ ಓಡಿ ಹೋಗುತ್ತಿದ್ದರು. ಆದರೆ, ನಾನು ಇಲ್ಲಿ ಗಟ್ಟಿಯಾಗಿ ನಿಂತಿದ್ದೇನೆ. ನನಗೆ ಹೋದ ಕಡೆಗಳೆಲ್ಲ ಆರತಿ ಎತ್ತಿ ಜನರು ಸ್ವಾಗತ ಮಾಡುತ್ತಿದ್ದಾರೆ. ನಾನು ಬಂದ ಮೇಲೆ ಶಿವಕುಮಾರ್​ಗೆ ಸೋಲಿನ ಭಯ ಕಾಡುತ್ತಿದೆ. ಅವರಿಗೆ ಸೋಲಿನ ಬಗ್ಗೆ ಅರಿವು ಆದ ಕೂಡಲೇ ಹೋಮ ಹವನ ಮಾಡಿಸುತ್ತಿದ್ದಾರೆ. ಅಲ್ಲದೆ, ಮಾಟ ಮಂತ್ರ ಎಲ್ಲ ಮಾಡಿಸುತ್ತಿದ್ದಾರೆ ಅಂದರೆ ಅವರಿಗೆ ಸೋಲಿನ ಭೀತಿ ಎಷ್ಟರ ಮಟ್ಟಿಗೆ ಇದೆ ನೋಡಿ ಎಂದು ಅಶೋಕ್​ ಕಾಲೆಳೆದರು.

    ಆಯೋಗಕ್ಕೂ ಪತ್ರ ಬರೀತ್ತೀನಿ

    ಶಿವಕುಮಾರ್​ ಅವರ ಶ್ರೀಮತಿಯ ಮೇಲೆ ನನಗೂ ಗೌರವ ಇದೆ. ಆದರೆ, ಅವರು ಮೊದಲ ಬಾರಿಗೆ ಚುನಾವಣೆ ಪ್ರಚಾರ ಮಾಡುತ್ತಿದ್ದಾರೆ. ಆದರೆ, ಅವರಿಗೆ ಈ ಸಾರಿ ಅಷ್ಟು ಸುಲಭವಲ್ಲ. ನಾನು ಚುನಾವಣಾ ಆಯೋಗಕ್ಕೂ ಪತ್ರ ಬರೀತ್ತೀನಿ. ಕನಕಪುರವನ್ನು ಸೂಕ್ಮ ಪ್ರದೇಶವಾಗಿ ಘೋಷಣೆ ಮಾಡಿ, ಎಲ್ಲ ಮತಗಟ್ಟೆ ಕೇಂದ್ರಗಳಲ್ಲೂ ಸಿಸಿಟಿವಿ ಅಳವಡಿಸಬೇಕೆಂದು ಪತ್ರ ಬರೀತ್ತೀವಿ ಎಂದರು.

    ಇದನ್ನೂ ಓದಿ: ಸರ್ಕಾರ ಜನಪರ ಆಡಳಿತ ನಡೆಸಿದೆ: ಛತ್ತೀಸ್​ಗಢ ಮಾಜಿ ಸಿಎಂ ರಮಣ ಸಿಂಗ್ ಅಭಿಮತ, ಸತೀಶ್ ರೆಡ್ಡಿ ಪರ ಪ್ರಚಾರ

    ಪಕ್ಷದವರೇ ಬೇಸತ್ತು ಹೋಗಿದ್ದಾರೆ

    ಜೆಡಿಎಸ್​ನವರು ಕೂಡ ಆತಂಕಗೊಂಡಿದ್ದಾರೆ. ನಾವು ಏನೋ ಮತ ಹಾಕಿಸ್ತೀವಿ ಆದರೆ, ಆ ಮತಗಳನ್ನು ಕೊನೆಗೆ ಶಿವಕುಮಾರ್ ಇಲ್ಲದೆ ರೀತಿ ಮಾಡ್ತಾರೆ ಅಂತ ಆತಂಕಗೊಂಡಿದ್ದಾರೆ. ಶಿವಕುಮಾರ್ ನಡೆಗೆ ಅವರ ಪಕ್ಷದವರೇ ಬೇಸತ್ತು ಹೋಗಿದ್ದಾರೆ. ನನಗೆ ಅವರ ಸಾಕಷ್ಟು ಕಾರ್ಯಕರ್ತರು ಫೋನ್ ಮಾಡಿ ಬೆಂಬಲ ಕೊಡುತ್ತಿದ್ದಾರೆ. ನನ್ನ ಹಾಗೂ ಸೋಮಣ್ಣರನ್ನು ಹೊರ ಭಾಗಕ್ಕೆ ಕಳುಹಿಸಿದ್ದಾರೆ ಅಂದರೆ, ಏನೋ ಹಿನ್ನೆಲೆ ಇದೆ ಎಂದರ್ಥ. ಹಾಗಿದ್ರೆ ಅಶೋಕ್ ಕನಕಪುರದಲ್ಲಿ ಗೆದ್ದರೆ ವರಿಷ್ಠರು ಅಶೋಕ್​ ಅವರನ್ನು ಮುಖ್ಯಮಂತ್ರಿಗಳನ್ನಾಗಿ ಮಾಡ್ತಾರಾ ಎಂಬ ಪ್ರಶ್ನೆಗೆ ಉತ್ತರಿಸಿದ ಅಶೋಕ್​, ಏನು ಬೇಕಾದರೂ ಆಗಬಹುದು. ವರಿಷ್ಠರು ಆ ಬಗ್ಗೆಯೂ ನಿರ್ಧಾರ ಮಾಡಬಹುದು ಎಂದು ಅಶೋಕ್ ತಿಳಿಸಿದರು. (ದಿಗ್ವಿಜಯ ನ್ಯೂಸ್​)

    ಪ್ರತ್ಯಕ್ಷ ಕಂಡರೂ ಪ್ರಮಾಣಿಸಿ ನೋಡು ಎನ್ನುವುದಕ್ಕೆ ಈ ಫೋಟೋ ಸೂಕ್ತ ಉದಾಹರಣೆ!

    ನನಗೆ ತುಂಬಾ ಜನ ಲವ್ ಲೆಟರ್ ಬರೆಯುತ್ತಾರೆ! ಅಚ್ಚರಿ ತಂದ ಸುದೀಪ್ ಹೇಳಿಕೆ

    ಯುಪಿ ಸಿಎಂ ಯೋಗಿ ಆದಿತ್ಯನಾಥ್​​ಗೆ ಜೀವ ಬೆದರಿಕೆ ಹಾಕಿದ್ದ ವ್ಯಕ್ತಿ ಅರೆಸ್ಟ್!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts